ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಮಾರ್ನಮಿಬೈಲ್ ಕಿರುಚಿತ್ರೋತ್ಸವಕ್ಕೆ ಬೆಂಬಲ

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಮಾರ್ನಮಿಬೈಲ್ ಕಿರುಚಿತ್ರೋತ್ಸವಕ್ಕೆ ಬೆಂಬಲ

ಶಿವಮೊಗ್ಗ: ನಗರದ ಅಶೋಕ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ಮಾರ್ನಮಿಬೈಲ್ ಕಿರುಚಿತ್ರೋತ್ಸವದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಕರವೇ ಸ್ವಾಭಿಮಾನಿ ಬಣದ ವತಿಯಿಂದ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಗಾ.ರಾ ಪಿಲಮ್ಸ್‌ ನ ಗಾ.ರಾ ‍ಶ್ರೀನಿವಾಸ್‌  ಹಾಗೂ ಎಸ್‌,ಬಿ,ಎಸ್ ಬೋರ್‌ವೆಲ್‌ ಮಾಲೀಕರು ಹಾಗೂ ರೋಟರಿ ಮೀನ್‌ಸ್ ಬಿಸಿನೆಸ್ ಫೆಲೋಶಿಪ್ ಅಧ್ಯಕ್ಷರಾದ ಕಿರಣ್ ಕುಮಾರ್ ಜಿ., ಸೇರಿದಂತೆ ಗಣ್ಯರು ಕಿರುಚಿತ್ರೋತ್ಸವದ ಪೋಸ್ಟರ್‌ನ್ನು ಬಿಡುಗಡೆಗೊಳಿಸಿದರು.

ಪೋಸ್ಟರ್ ಬಿಡುಗಡೆ ಬಳಿಕ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಅಧ್ಯಕ್ಷ ಕಿರಣ್ ಕುಮಾರ್ ಹೆಚ್.ಎಸ್., ಶಿವಮೊಗ್ಗ ನಗರದಲ್ಲಿ ನಡೆಯುತ್ತಿರುವ ಈ ಕಿರುಚಿತ್ರೋತ್ಸವ ಒಂದು ಮಹತ್ವದ ಸಾಂಸ್ಕೃತಿಕ ಹೆಜ್ಜೆಯಾಗಿದೆ. ಗಾ.ರಾ. ಗ್ರೂಪ್ ಸಂಸ್ಥೆ ವತಿಯಿಂದ ಆಯೋಜಿಸಿರುವ ಈ ಕಾರ್ಯಕ್ರಮವು ಕಿರುಚಿತ್ರ ನಿರ್ಮಾಣಕ್ಕೆ ಆಸಕ್ತಿ ಹೊಂದಿರುವವರಿಗೆ ಉತ್ತಮ ವೇದಿಕೆಯಾಗಲಿದೆ ಎಂದು ಹೇಳಿದರು.

ಆಗಸ್ಟ್ 22ರ ಶನಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕಲಾಸಕ್ತರು ಹಾಗೂ ಕನ್ನಡ ಮನಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಕರೆ ನೀಡಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ರಂಗಭೂಮಿ ಹಾಗೂ ಚಿತ್ರೋದ್ಯಮಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕಲಾವಿದರು ಮತ್ತು ಪ್ರತಿಭಾವಂತರು ಇದ್ದಾರೆ. ಇಂತಹ ಕಾರ್ಯಕ್ರಮಗಳು ನಡೆಯುವುದರಿಂದ ಸ್ಥಳೀಯ ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ದೊರೆಯುವುದರ ಜೊತೆಗೆ, ಚಿತ್ರರಂಗದಲ್ಲಿ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಕಿರಣ್ ಕುಮಾರ್ ಹೆಚ್.ಎಸ್. ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಸೈಯದ್ ಮುಜೀಬ್, ವಿಜಯ್ ಕುಮಾರ್ ಯು.ಕೆ., ಗಂಗಾಧರ್, ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಮಹಮದ್ ಶಫಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಸಾಧಿಕ್ ಎ., ಜಿಲ್ಲಾ ಯುವ ಅಧ್ಯಕ್ಷ ಸಂತೋಷ್, ನಗರ ಯುವ ಅಧ್ಯಕ್ಷ ಪ್ರವೀಣ್ ಕುಮಾರ್, ಜಿಲ್ಲಾ ಸಂಘಟನಾ ಸಹಕಾರ್ಯದರ್ಶಿ ನೂರುಲ್ಲಾ ಖಾನ್, ನಗರಾಧ್ಯಕ್ಷ ಜೀವನ್, ಪಂಚಭಾಷಾ ಚಲನಚಿತ್ರ ನಟ ಶ್ರೀನಿವಾಸ್ ಶರ್ಮ, ಗಾ.ರಾ. ಫಿಲ್ಮ್ಸ್‌ನ ಪತ್ರಕರ್ತರು ಹಾಗೂ ಸಾಹಿತಿಗಳಾದ ಗಾ.ರಾ. ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ: ಡಿ.ಪಿ. ಅರವಿಂದ್ | F7 NEWS, ಶಿವಮೊಗ್ಗ

Post a Comment

Previous Post Next Post