ಕಾಣೆಯಾದ ವೃದ್ಧರ ಪತ್ತೆಗೆ ಪೊಲೀಸ್ ಮನವಿ
ಶಿವಮೊಗ್ಗ, ಡಿಸೆಂಬರ್ 16 (ಕರ್ನಾಟಕ ವಾರ್ತೆ):
ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2023ರ ನವೆಂಬರ್ ತಿಂಗಳಲ್ಲಿ ಕಾಣೆಯಾಗಿರುವ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು ಮುಳ್ಳುಸೋಗೆ ಗ್ರಾಮದ ನಿವಾಸಿ ಡಿ. ತೀರ್ಥಪ್ಪ ಬಿನ್ ಹಾಲಪ್ಪ (82) ಇವರ ಪತ್ತೆಗೆ ಪೊಲೀಸ್ ಇಲಾಖೆ ಸಾರ್ವಜನಿಕರಿಂದ ಸಹಕಾರ ಕೋರಿದೆ.
ಕಾಣೆಯಾದ ತೀರ್ಥಪ್ಪ ಅವರು ಕೋಲುಮುಖ, ಸಣ್ಣ ಮೈಕಟ್ಟು, ಕಪ್ಪು ಮೈಬಣ್ಣ ಹೊಂದಿದ್ದು, ಈವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಈ ವ್ಯಕ್ತಿಯ ಕುರಿತು ಯಾವುದೇ ಮಾಹಿತಿ ದೊರಕಿದಲ್ಲಿ ಕುಂಸಿ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.
📞 ದೂರವಾಣಿ: 9480803351 / 8277982802
ಡಿ.ಪಿ ಅರವಿಂದ್ ಎಫ್7ನ್ಯೂಸ್ ಶಿವಮೊಗ್ಗ

