ಗೋವರ್ಧನ ಟ್ರಸ್ಟ್ ವತಿಯಿಂದ ಗೋಮಾತೆಗಾಗಿ ಮೇವು ಬೆಳೆಯುವ ಕಾರ್ಯಕ್ರಮಕ್ಕೆ ಚಾಲನೆ

 

ಗೋವರ್ಧನ ಟ್ರಸ್ಟ್ ವತಿಯಿಂದ ಗೋಮಾತೆಗಾಗಿ ಮೇವು ಬೆಳೆಯುವ ಕಾರ್ಯಕ್ರಮಕ್ಕೆ ಚಾಲನೆ



ಶಿವಮೊಗ್ಗ:
ಗೋವರ್ಧನ ಟ್ರಸ್ಟ್ ವತಿಯಿಂದ ಗೊಂದಿಚಟ್ನಹಳ್ಳಿಯಲ್ಲಿ ಗೋಮಾತೆಗಾಗಿ ಮೇವು ಬೆಳೆಯುವ ಮಹತ್ವಾಕಾಂಕ್ಷಿ ಕಾರ್ಯಕ್ರಮಕ್ಕೆ ಭೂಮಿ ಪೂಜೆ ನೆರವೇರಿತು. ಶ್ರೀ ಕ್ಷೇತ್ರ ಹೊಂಬುಜ ದಿಗಂಬರ ಜೈನ್ ಮಠದ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮಿಗಳವರ ಅಮೃತ ಹಸ್ತದಿಂದ ಬೀಜ ಬಿತ್ತುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು.

ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ ಕೆ.ಎಸ್. ಈಶ್ವರಪ್ಪ, ಶಿವಶಂಕರ್, ಉಮಾಪತಿ, ಯೋಗಗುರು ರುದ್ರರಾಧ್ಯರು, ನಟರಾಜ್ ಭಾಗವತ್, ಉಮೇಶ್ ಆರಾಥ್ಯ, ಕೆ.ಈ. ಕಾಂತೇಶ್, ಶೇಶಾಚಲ, ಗುರುಗುಹನಾಗರಾಜ್, ಪಾಂಡೆ, ಶಿವಾನಂದಪ್ಪ, ನವ್ಯಶ್ರೀನಾಗೇಶ್, ಕುಬೇರಪ್ಪ, ಸತ್ಯಣ್ಣ, ಸೋಮಣ್ಣ, ಜಾಥವ್, ವಿನೋದ್, ರಮೇಶ್ ಬಾಬು, ವಿರೂಪಾಕ್ಷ, ಅರುಣ್, ಉಮಾಮೂರ್ತಿ, ಶುಭರಾಘವೇಂದ್ರ, ಸಂಧ್ಯಾ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

ಜ್ಞಾನೇಶ್ವರಿ ಗೋಶಾಲೆಯ ಹಾಗೂ ಗೋವರ್ಧನ ಟ್ರಸ್ಟ್ ಸದಸ್ಯರು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೇವು ಬೆಳೆಯುವ ಮಹತ್ವವನ್ನು ಹಿರಿದಾಗಿ ವಿವರಿಸಿದರು. ಕಾರ್ಯಕ್ರಮವು ಧಾರ್ಮಿಕ ಉತ್ಸಾಹ ಹಾಗೂ ಸಮಾಜಮುಖಿ ಚಟುವಟಿಕೆಗಳೊಂದಿಗೆ ಯಶಸ್ವಿಯಾಗಿ ನೆರವೇರಿತು.

🖊️ ವರದಿ: ಡಿ.ಪಿ. ಅರವಿಂದ್




Post a Comment

Previous Post Next Post