ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು ವಿಜಯಪುರದಲ್ಲಿ ಭೀಕರ ಗುಂಡಿನ ಧಾಳಿ.

 

ವಿಜಯಪುರದಲ್ಲಿ ಭೀಕರ ಗುಂಡಿನ ದಾಳಿ

ಗ್ರಾ.ಪಂ ಅಧ್ಯಕ್ಷ ಭೀಮನಗೌಡ ಪಾಟೀಲ ಬಿರಾದಾರ್ ಮೇಲೆ ದುಷ್ಕರ್ಮಿಗಳ ದಾಳಿ – ತಲೆ, ಎದೆಗೆ ಗುಂಡು ಪೆಟ್ಟಿನ ಗಾಯ



ವಿಜಯಪುರ:
ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ಭೀಕರ ಗುಂಡಿನ ದಾಳಿ ನಡೆದಿದೆ. ಗ್ರಾಮದ ಗ್ರಾಮ ಪಂಚಾಯತಿ ಅಧ್ಯಕ್ಷ ಭೀಮನಗೌಡ ಪಾಟೀಲ ಬಿರಾದಾರ್ (ಅka ಭೀಮನಗೌಡ ಪಾಟೀಲ) ಅವರ ಮೇಲೆ ಮುಸುಕು ಧಾರಿಗಳ ಗುಂಪು ಗುಂಡು ಹಾರಿಸಿದ್ದು, ಈ ಘಟನೆಯಿಂದ ಗ್ರಾಮದಲ್ಲಿ ಭೀತಿ ವಾತಾವರಣ ನಿರ್ಮಾಣವಾಗಿದೆ.

ಮೂರು ಸುತ್ತು ಗುಂಡು ಹಾರಿಸಿದ ದುಷ್ಕರ್ಮಿಗಳು ತಕ್ಷಣವೇ ಪರಾರಿಯಾಗಿದ್ದು, ಗುಂಡುಗಳು ತಲೆ ಹಾಗೂ ಎದೆಗೆ ತಗುಲಿವೆ ಎನ್ನಲಾಗಿದೆ. ಈ ಹಲ್ಲೆಯ ಹಿಂದೆ ಹಳೆ ವೈಷಮ್ಯ ಕಾರಣವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.



ಘಟನೆ ಸಮಯದಲ್ಲಿ ಭೀಮನಗೌಡ ಬಿರಾದಾರ್ ದೇವರನಿಂಬರಗಿ ಗ್ರಾಮದ ಕಟಿಂಗ್ ಶಾಪ್‌ಗೆ ಕೂದಲು ಕತ್ತರಿಸಲು ಬಂದಿದ್ದರು. ಆ ಸಮಯದಲ್ಲಿ ಕಟಿಂಗ್ ಮಾಡುವವನ ಕಣ್ಣಿಗೆ ಖಾರದ ಪುಡಿ ಎರಚಿ, ದಾಳಿಕೋರರು ತಮ್ಮ ಕ್ರೂರ ಕೃತ್ಯವನ್ನು ಎಸಗಿದ್ದಾರೆ.

ಭೀಮನಗೌಡ ಬಿರಾದಾರ್ ಅವರನ್ನು ತಕ್ಷಣವೇ ವಿಜಯಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಮಹಾದೇವ ಬೈರಗೊಂಡ ಪರಮಾಪ್ತ ಬಿರಾದಾರ್ ಆಗಿದ್ದ ಭೀಮನಗೌಡರು ಭೀಮಾತೀರದಲ್ಲಿ ಪ್ರಭಾವಿ ನಾಯಕ ಎಂದು ಪರಿಚಿತರಾಗಿದ್ದರು.

ಈ ಘಟನೆ ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ದಾಳಿಕೋರರ ಪತ್ತೆಗೆ ತೀವ್ರ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.





Post a Comment

Previous Post Next Post