ಶಿವಮೊಗ್ಗ ರಾಜಕೀಯ ಚಟುವಟಿಕೆ – ಸಂಸದ-ಸಚಿವರ ನಡುವೆ ವಾಕ್ಸಮರ!
ಶಿವಮೊಗ್ಗ:
ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ವಿರುದ್ಧ ಕಾಂಗ್ರೆಸ್ ಹಾಗೂ ಸಚಿವ ಮಧುಬಂಗಾರಪ್ಪ ಕಿಡಿಕಾರಿದ್ದಾರೆ.
🔹 ಸಂಸದರ ವಿರುದ್ಧ ತೀವ್ರ ಟೀಕೆ
ಶರಾವತಿ ಸಂತ್ರಸ್ಥರ ಪ್ರಶ್ನೆಯನ್ನು ಸಂಸತ್ತಿನಲ್ಲಿ ಕೇವಲ ಒಂದೇ ಬಾರಿ ಪ್ರಸ್ತಾಪಿಸಿರುವ ರಾಘವೇಂದ್ರ ಜನರ ಸಮಸ್ಯೆಗಳ ಬಗ್ಗೆ ಯಾವುದೇ ತಾಳ್ಮೆಯಿಲ್ಲದೆ ಜಾತಿ–ಧರ್ಮದ ಮಾತುಗಳನ್ನು ಆಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ದೆಹಲಿಗೆ ತೆರಳಿ ಕೇಂದ್ರ ಮಂತ್ರಿಗಳ ಪಕ್ಕದಲ್ಲಿ ನಿಂತು ಫೋಟೋ ತೆಗೆಯುವುದು, ಪ್ರಚಾರ ಪಡೆಯುವುದೇ ಸಂಸದರ ಸಾಧನೆ ಎಂದು ವಿರೋಧ ಪಕ್ಷ ಕಿಡಿಕಾರುತ್ತಿದೆ.
Video
🔹 ರಾಹುಲ್ ಗಾಂಧಿ ವಿರುದ್ಧ ಬಿ.ಜೆ.ಪಿ. ಆರೋಪ?
"ರಾಹುಲ್ ಗಾಂಧಿಯವರು ದೇಶಕ್ಕಾಗಿ ತಮ್ಮ ಅಜ್ಜಿ ಹಾಗೂ ತಂದೆಯನ್ನು ಕಳೆದುಕೊಂಡವರು. ಜನರಿಗಾಗಿ ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ಪಾದಯಾತ್ರೆ ನಡೆಸಿದವರು. ಅವರನ್ನು ‘ಪಪ್ಪು’ ಎಂದು ಕರೆದು ಅವಹೇಳನ ಮಾಡುವುದು ಬಿ.ಜೆ.ಪಿಯವರ ನಿಜಸ್ವರೂಪವನ್ನು ತೋರಿಸುತ್ತದೆ," ಎಂದು ಕಾಂಗ್ರೆಸ್ ಶಕ್ತಿಶಾಲಿ ವಾಗ್ದಾಳಿ ನಡೆಸಿದೆ.
ಬಿ.ಜೆ.ಪಿ. ‘ಓಟು ಕಳ್ಳರು’ ಎಂಬ ತೀವ್ರ ಪದವನ್ನು ಬಳಸಿ ಜನರ ಮನಸ್ಸಿನಲ್ಲಿ ಪ್ರಶ್ನೆ ಎಬ್ಬಿಸಲಾಗಿದೆ.
🔹 ಧರ್ಮಸ್ಥಳದ ವಿಚಾರ – ಮಧುಬಂಗಾರಪ್ಪ Vs ಬಿ.ಜೆ.ಪಿ.
ಧರ್ಮಸ್ಥಳದ ವಿಷಯ ಇನ್ನೂ ತನಿಖೆಯಲ್ಲಿರುವ ಸಂದರ್ಭದಲ್ಲೇ ಬಿ.ಜೆ.ಪಿ ನಾಯಕರು ತೀರ್ಮಾನ ಘೋಷಣೆ ಮಾಡಿದದ್ದು ತಪ್ಪು ಎಂದು ಸಚಿವ ಮಧುಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಗೃಹಸಚಿವರೂ ತನಿಖೆ ಪೂರ್ಣಗೊಂಡ ಬಳಿಕವೇ ನಿರ್ಣಯ ಹೇಳಲಾಗುತ್ತದೆ ಎಂದಿರುವಾಗ, ಬಿ.ಜೆ.ಪಿ ನಾಯಕರ ತೀರ್ಪು ಏಕೆ?" ಎಂದು ಪ್ರಶ್ನಿಸಿದ ಮಧುಬಂಗಾರಪ್ಪ, ಧರ್ಮಸ್ಥಳದ ಹೆಸರಿನಲ್ಲಿ ರಾಜಕೀಯ ತರಬೇಡಿ ಎಂದೂ ಎಚ್ಚರಿಸಿದರು.
🔹 ಜೆ.ಡಿ.ಎಸ್. ವಿರುದ್ಧ ಮಾತಿನ ಕಿಡಿ
ನಿಖಿಲ್ ಕುಮಾರಸ್ವಾಮಿಯವರ ಧರ್ಮಸ್ಥಳ ರಾಜ್ಯಪ್ರವಾಸದ ಕುರಿತು ಟೀಕಿಸಿದ ಸಚಿವ ಮಧುಬಂಗಾರಪ್ಪ, "ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಇದೇ ರೀತಿಯ ಪ್ರವಾಸಕ್ಕೆ ಏಕೆ ಹೊರಟಿಲ್ಲ?" ಎಂದು ಪ್ರಶ್ನೆ ಎತ್ತಿದರು.
"ನಾನು ಕೂಡ ಒಂದು ಕಾಲದಲ್ಲಿ ಆ ಪಕ್ಷದಲ್ಲಿದ್ದವನು, ಆಂತರಿಕ ಸಂಗತಿಗಳು ನನಗೆ ಗೊತ್ತಿವೆ" ಎಂದೂ ಅವರು ನೆನಪಿಸಿದರು.
🔹 ಪ್ರಧಾನಿ ಮೋದಿ ಮೇಲೆ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿಯವರನ್ನೂ ಟೀಕಿಸಿದ ಮಧುಬಂಗಾರಪ್ಪ,
"ಮಾಧ್ಯಮವು ಹೊಗಳಿ ಹೊಗಳಿ ಹುಲಿ ಮಾಡಿಸಿದ ಪೇಪರ್ ಹುಲಿ ಮೋದಿಯವರು," ಎಂದು ಮಾತಿನ ಬಾಣ ಹರಿಸಿದರು.
📌 ವರದಿ: ಡಿ.ಪಿ. ಅರವಿಂದ್, ಎಫ್7 ನ್ಯೂಸ್, ಶಿವಮೊಗ್ಗ

