ದಲಿತ ಮಹಿಳೆಯರಿಗೆ ಅವಮಾನಿಸಿದ ಯತ್ನಾಳ್ – ಕ್ಷಮೆಗೆ ಮಂಜು ಪುರಲೆ ಆಗ್ರಹ

 ದಲಿತ ಮಹಿಳೆಯರಿಗೆ ಅವಮಾನಿಸಿದ ಯತ್ನಾಳ್ – ಕ್ಷಮೆಗೆ ಮಂಜು ಪುರಲೆ ಆಗ್ರಹ


                                                            

ಶಿವಮೊಗ್ಗ:
ದಸರಾ ಹಬ್ಬದ ಅಂಗವಾಗಿ "ಚಾಮುಂಡೇಶ್ವರಿಗೆ ಹೂ ಹಾಕಲು ಕೇವಲ ಸನಾತನ ಧರ್ಮದವರಿಗೇ ಅವಕಾಶ, ದಲಿತ ಮಹಿಳೆಯರಿಗೆ ಇಲ್ಲ" ಎಂಬ ಸಂವಿಧಾನ ವಿರೋಧಿ ಹೇಳಿಕೆ ನೀಡಿ, ದಲಿತ ಸಮುದಾಯದ ಮಹಿಳೆಯರಿಗೆ ಅವಮಾನ ಮಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗ ಕ್ಷಮೆ ಕೇಳಬೇಕೆಂದು ಯುವ ಕಾಂಗ್ರೆಸ್ ಮುಖಂಡ ಮಂಜು ಪುರಲೆ ಆಗ್ರಹಿಸಿದ್ದಾರೆ.

✒️ ಮಂಜು ಪುರಲೆ ಅಸಮಾಧಾನ

ಪತ್ರಿಕಾ ಹೇಳಿಕೆ ನೀಡಿರುವ ಮಂಜು ಪುರಲೆ ಅವರು,

  • ಯತ್ನಾಳ್ ಅವರ ಈ ಹೇಳಿಕೆ ಸಂವಿಧಾನದ ಸಮಾನತೆ ತತ್ವಕ್ಕೆ ವಿರುದ್ಧವಾಗಿದೆ.

  • "ಹಿಂದೂ ನಾವೆಲ್ಲಾ ಒಂದು" ಎಂದು ಹೇಳುತ್ತಾ ಜನರಿಗೆ ಮೋಸ ಮಾಡುವ ರಾಜಕೀಯ ನಾಟಕವಾಡುತ್ತಿದ್ದಾರೆ.

  • ಸಮಾಜದಲ್ಲಿ ಜಾತಿ ಪ್ರಚೋದನೆ ಮಾಡುತ್ತಿರುವ ಯತ್ನಾಳ್ ಅವರ ಮನಸ್ಥಿತಿ ವಿಷಕಾರಿ, ಜಾತಿವಾದಿ ಸ್ವಭಾವ ಹೊಂದಿದೆ ಎಂದು ಟೀಕಿಸಿದರು.

🔥 ಕೋಮುಗಲಭೆಗೆ ಪ್ರಚೋದನೆ?

ಯತ್ನಾಳ್ ಅವರ ಮಾತುಗಳು ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವುದು, ಕೋಮುಗಲಭೆ ಎಬ್ಬಿಸುವುದು, ಯುವಜನರನ್ನು ದಾರಿ ತಪ್ಪಿಸುವುದು ಎಂಬ ಅಪಾಯವನ್ನು ಉಂಟುಮಾಡುತ್ತವೆ. ಬಡ ಕೂಲಿ ಕಾರ್ಮಿಕ ಸಮುದಾಯಗಳ ಸಾಮರಸ್ಯದ ಬದುಕಿನ ಮೇಲೆ ಇದು ನೇರ ಪರಿಣಾಮ ಬೀರುತ್ತದೆ ಎಂದು ಮಂಜು ಪುರಲೆ ಎಚ್ಚರಿಸಿದರು.

🌿 "ಬಸವಣ್ಣ ಬಿತ್ತಿದ ಮಾನವೀಯತೆಯ ಮಣ್ಣು"

ಮಂಜು ಪುರಲೆ ಅವರು ಬಸವಣ್ಣ, ಬುದ್ಧ, ವಿವೇಕಾನಂದ, ಕನಕದಾಸ, ಅಂಬೇಡ್ಕರ್, ಪೆರಿಯಾರ್, ನಾರಾಯಣಗುರು, ಕುದ್ಮಾಲ್ ರಂಗರಾವ್ ಮುಂತಾದ ಸಮಾನತೆಯ ತತ್ವವನ್ನು ಬೋಧಿಸಿದ ಮಹಾನುಭಾವರ ಆದರ್ಶಗಳ ನೆನಪನ್ನು ಮಾಡಿದರು.
"ಈ ನಾಡಿನಲ್ಲಿ ಆ ಚಿಂತನೆಗಳು ಉಳಿಯಬೇಕು ಹೊರತು ಯತ್ನಾಳ್ ಅವರಂತಹವರ ಜಾತಿವಾದಿ ಮನೋವಿಕಾರತೆಯ ಮಾತುಗಳು ಅಲ್ಲ" ಎಂದು ಒತ್ತಿ ಹೇಳಿದರು.

🙏 ಬಹಿರಂಗ ಕ್ಷಮೆಯ ಬೇಡಿಕೆ

"ಯತ್ನಾಳ್ ತಕ್ಷಣವೇ ದಲಿತ ಮಹಿಳೆಯರಿಗೆ ಅವಮಾನ ಮಾಡಿದ ಹೇಳಿಕೆಗಾಗಿ ಕ್ಷಮೆ ಕೇಳಬೇಕು. ಬಸವಣ್ಣ ಬಿತ್ತಿದ ಮಾನವೀಯತೆಯ ಮಣ್ಣಿನಲ್ಲಿ ಹುಟ್ಟಿದವರಾದರೆ ತಮ್ಮ ಮನಸ್ಸಿನ ಜಾತಿಯ ಹೊಲಸ್ಸನ್ನು ಸ್ವಚ್ಛಪಡಿಸಿಕೊಳ್ಳಬೇಕು" ಎಂದು ಮಂಜು ಪುರಲೆ ಆಗ್ರಹಿಸಿದರು.




Post a Comment

Previous Post Next Post