ಆರೆಸ್ಸೆಸ್ ಗೀತೆ ವಿವಾದ ಮುಗಿದ ಅಧ್ಯಾಯ: ಹೆಚ್.ಕೆ. ಪಾಟೀಲ್ ಸ್ಪಷ್ಟನೆ
ನವದೆಹಲಿ: ಆರೆಸ್ಸೆಸ್ ಗೀತೆ ವಿಷಯದಲ್ಲಿ ಡಿಕೆ ಶಿವಕುಮಾರ್ ಕ್ಷಮೆ ಕೇಳಿರುವುದರಿಂದ ಅದು ಈಗ ಮುಗಿದ ಅಧ್ಯಾಯ ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಹೇಳಿದ್ದಾರೆ.
ದೆಹಲಿ ಭೇಟಿಯ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪಾಟೀಲ್, "ಶಿವಕುಮಾರ್ ಸದನದಲ್ಲಿ ಆರೆಸ್ಸೆಸ್ ಪ್ರಾರ್ಥನಾ ಗೀತೆ ಹಾಡಿ ವಿವಾದ ಸೃಷ್ಟಿಸಿದ್ದರು. ನಂತರ ಅವರು ವಿವರಣೆ ನೀಡಿ ಕ್ಷಮೆ ಕೇಳಿದ್ದಾರೆ. ಪಕ್ಷದ ಅಧ್ಯಕ್ಷರೇ ಅದನ್ನು ಮುಗಿದ ಅಧ್ಯಾಯ ಅಂತ ಹೇಳಿದ್ದಾರೆ. ಹಾಗಾಗಿ ಅದರ ಬಗ್ಗೆ ಮತ್ತೆ ಮಾತಾಡುವುದು ಸರಿಯಲ್ಲ" ಎಂದು ತಿಳಿಸಿದರು.
ಶಿವಕುಮಾರ್ ಕ್ಷಮೆ ಕೇಳಿದಂತೆ ರಾಜಣ್ಣ ಕೂಡ ಮಾಡಿದರೆ ಅವರನ್ನು ಸಂಪುಟಕ್ಕೆ ವಾಪಸ್ಸು ಸೇರಿಸಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಪಾಟೀಲ್ ನೇರವಾಗಿ ಉತ್ತರಿಸದೆ ತಡವರಿಸಿದರು. "ಬಿಜೆಪಿಯೊಂದಿಗೆ ಕೈಜೋಡಿಸಿರುವ ಕೆಲವು ಮಾಧ್ಯಮಗಳು ಇಂಥ ಚರ್ಚೆಗಳನ್ನು ಹುಟ್ಟುಹಾಕುತ್ತಿವೆ. ಎರಡು ವಿಷಯಗಳ ನಡುವೆ ಥಳುಕು ಹಾಕಿ ಚರ್ಚೆ ಮಾಡುವುದು ಸರಿಯಲ್ಲ" ಎಂದು ಸ್ಪಷ್ಟಪಡಿಸಿದರು.
🔹 ಹೈಲೈಟ್ ಪಾಯಿಂಟ್ಸ್
-
ಡಿಕೆ ಶಿವಕುಮಾರ್ ಆರೆಸ್ಸೆಸ್ ಗೀತೆ ಹಾಡಿ ವಿವಾದ ಸೃಷ್ಟಿಸಿದ್ದರು
-
ನಂತರ ಕ್ಷಮೆ ಕೇಳಿ ವಿವರಣೆ ನೀಡಿದ್ದರು
-
“ಇದು ಮುಗಿದ ಅಧ್ಯಾಯ” ಎಂದು ಹೆಚ್.ಕೆ. ಪಾಟೀಲ್ ಸ್ಪಷ್ಟನೆ
-
ರಾಜಣ್ಣ ವಿಚಾರಕ್ಕೆ ನೇರ ಉತ್ತರ ತಪ್ಪಿಸಿಕೊಂಡ ಸಚಿವ
-
“ಮಾಧ್ಯಮಗಳು ಅಸತ್ಯ ಚರ್ಚೆಗಳನ್ನು ಹುಟ್ಟುಹಾಕುತ್ತಿವೆ” ಎಂದು ಆರೋಪ

