ಶಿವಮೊಗ್ಗ ವಾರ್ತಾ ಇಲಾಖೆಗೆ ಹೊಸ ಉಸಿರು: ಮಾರುತಿ ಔಟ್ – ಧನಂಜಯ್ ಇನ್

 ಶಿವಮೊಗ್ಗ ವಾರ್ತಾ ಇಲಾಖೆಗೆ ಹೊಸ ಉಸಿರು: ಮಾರುತಿ ಔಟ್ – ಧನಂಜಯ್ ಇನ್

                                            


ಶಿವಮೊಗ್ಗ, ಆಗಸ್ಟ್ 26:

ಶಿವಮೊಗ್ಗ ವಾರ್ತಾ ಇಲಾಖೆಗೆ ಹೊಸ ವಾರ್ತಾಧಿಕಾರಿಯಾಗಿ ಬಿ. ಧನಂಜಯ್ ರವರು ಇಂದು ಅಧಿಕಾರ ಸ್ವೀಕರಿಸಿದರು. ಅವರು ಬೆಳಿಗ್ಗೆ ಕಚೇರಿಗೆ ಬಂದು ಸರ್ಕಾರದ ಆದೇಶದ ಮೇರೆಗೆ ಅಧಿಕಾರ ವಹಿಸಿಕೊಂಡರು.

ಧ್ವನಿ ಸಂಘದ ಭರ್ಜರಿ ಸ್ವಾಗತ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಸದಸ್ಯರು ಒಟ್ಟಾಗಿ ಧನಂಜಯ್ ರವರನ್ನು ಹೂಗುಚ್ಛ ನೀಡಿ, ಶಾಲು ಹೊದಿಸುವ ಮೂಲಕ ಭರ್ಜರಿಯಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರತಿನಿಧಿಗಳು, “ಹೊಸ ವಾರ್ತಾಧಿಕಾರಿ ಜಿಲ್ಲೆಯ ಎಲ್ಲಾ ಪತ್ರಕರ್ತರನ್ನು ಸಮಾನ ಮನಸ್ಸಿನಿಂದ ನೋಡಬೇಕೆಂಬ ನಮ್ಮ ಆಶೆಯಾಗಿದೆ” ಎಂದು ಅಭಿಪ್ರಾಯಪಟ್ಟರು.


ಇದೇ ವೇಳೆ, ದೀರ್ಘಕಾಲದಿಂದ ವಿವಾದಕ್ಕೆ ಗುರಿಯಾಗಿದ್ದ ವಾರ್ತಾಧಿಕಾರಿ ಮಾರುತಿ.ಆರ್. ರವರನ್ನು ಸರ್ಕಾರ ದಾವಣಗೆರೆಗೆ ವರ್ಗಾವಣೆ ಮಾಡಿದೆ. ಅವರ ವಿರುದ್ಧ ಅನೇಕ ದೂರುಗಳು, ಭ್ರಷ್ಟಾಚಾರದ ಆರೋಪಗಳು, ಹಾಗೂ ಪತ್ರಕರ್ತರ ನಡುವೆ ತಾರತಮ್ಯ ತೋರಿದ ಕಾರ್ಯವೈಖರಿ ಕಾರಣವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಪತ್ರಿಕಾಭವನ ವಿವಾದ:
ಶಿವಮೊಗ್ಗದ ಪತ್ರಿಕಾಭವನದ ಆದಾಯವನ್ನು ಸರ್ಕಾರಕ್ಕೆ ಜಮಾ ಮಾಡದೆ, ದುರುಪಯೋಗ ಮಾಡಿದ್ದಾರೆ ಎಂಬ ಗಂಭೀರ ಆರೋಪವೂ ಇವರ ವಿರುದ್ಧ ಕೇಳಿಬಂದಿತ್ತು. ಈ ಕುರಿತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಹೋರಾಟ ನಡೆಸಿ ಅನೇಕ ಬಾರಿ ಧ್ವನಿ ಎತ್ತಿತ್ತು.

15 ವರ್ಷಗಳಿಂದ ಒಂದೇ ಜಾಗದಲ್ಲಿ:
ಮಾರುತಿ ಅವರು 15 ವರ್ಷಗಳಿಂದ ಒಂದೇ ಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದು, ಹಲವಾರು ಬಾರಿ ದೂರುಗಳು ಬಂದರೂ ವರ್ಗಾವಣೆ ಆಗಿರಲಿಲ್ಲ. ತಮ್ಮ ಪ್ರಭಾವದಿಂದ ಹುದ್ದೆ ಕಾಯ್ದುಕೊಂಡಿದ್ದರೆಂಬ ಆರೋಪವಿತ್ತು. "ನನ್ನನ್ನು ವರ್ಗಾವಣೆ ಮಾಡುವುದು ಯಾರಿಂದಲೂ ಸಾಧ್ಯವಿಲ್ಲ" ಎಂದು ಹೆಮ್ಮೆಯಿಂದ ಹೇಳುತ್ತಿದ್ದರೆಂಬ ಮಾಹಿತಿ ಇದೆ.

ಪತ್ರಕರ್ತರ ಸಂತಸ:

ಮಾರುತಿ ಅವರ ವರ್ಗಾವಣೆಯು ನೈಜ ಪತ್ರಕರ್ತರಲ್ಲಿ ಸಂತೋಷ ಮೂಡಿಸಿದೆ. "ಇವರ ವರ್ಗಾವಣೆಯಿಂದ ವಾರ್ತಾ ಇಲಾಖೆಯ ಮೇಲೆ ಹಿಡಿದಿದ್ದ ಗ್ರಹಣ ಬಿಟ್ಟಂತಾಗಿದೆ" ಎಂದು ಹಲವು ಪತ್ರಕರ್ತರು ಅಭಿಪ್ರಾಯಪಟ್ಟಿದ್ದಾರೆ.

ಹೊಸ ವಾರ್ತಾಧಿಕಾರಿ ಧನಂಜಯ್ ಬಗ್ಗೆ ನಿರೀಕ್ಷೆ:
ಧನಂಜಯ್ ರವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಶಿವಮೊಗ್ಗ ಘಟಕದ ವತಿಯಿಂದ ಸ್ವಾಗತಿಸಿ ಸನ್ಮಾನಿಸಲಾಯಿತು. ಅವರು ಯಾವುದೇ ತಾರತಮ್ಯವಿಲ್ಲದೆ, ಮೀಡಿಯಾ – ನಾನ್ ಮೀಡಿಯಾ ಪತ್ರಕರ್ತರ ನಡುವೆ ಭೇದ ಮಾಡದೇ ಕಾರ್ಯ ನಿರ್ವಹಿಸಬೇಕು ಎಂಬುದು ಪತ್ರಕರ್ತರ ಆಶಯವಾಗಿದೆ.




Post a Comment

Previous Post Next Post