ಎಪಿಎಂಸಿ ವರ್ತಕರಿಂದ 16 ಜೋಡಿ ಸಾಮೂಹಿಕ ಕಲ್ಯಾಣ: ಶರಣ ಸಂಸ್ಕೃತಿ ಮಹೋತ್ಸವದಲ್ಲಿ ಸಡಗರ

ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ ಸಾಮೂಹಿಕ ಕಲ್ಯಾಣ



ಬಾಗಲಕೋಟೆ(ಇಳಕಲ್) : ಶರಣ ಸಂಸ್ಕೃತಿ ಮಹೋತ್ಸವದ ಭಾಗವಾಗಿ ಎಪಿಎಂಸಿ ವರ್ತಕರ ಆಶ್ರಯದಲ್ಲಿ 16 ಜೋಡಿ ಸಾಮೂಹಿಕ ಕಲ್ಯಾಣ ಕಾರ್ಯಕ್ರಮ ಭವ್ಯವಾಗಿ ನೆರವೇರಿತು.

ಕಾರ್ಯಕ್ರಮದಲ್ಲಿ ರಾಜ್ಯ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಜನಪ್ರಿಯ ಶಾಸಕ ವಿಜಯಾನಂದ ಎಸ್. ಕಾಶಪ್ಪನವರು ಭಾಗವಹಿಸಿ ನೂತನ ವಧುವರರಿಗೆ ಆಶೀರ್ವಾದ ಕೋರಿ ಶುಭಾಶಯಗಳನ್ನು ತಿಳಿಸಿದರು.

ಇದೇ ಸಂದರ್ಭದಲ್ಲಿ ಶರಣಬಸವ ಪೂಜ್ಯರು ಆಶಿರ್ವಚನ ನೀಡಿ ದಾಂಪತ್ಯ ಜೀವನದಲ್ಲಿ ಶ್ರೇಯಸ್ಸು, ಐಶ್ವರ್ಯ, ಸೌಹಾರ್ದತೆ ಕಾಪಾಡಿಕೊಳ್ಳುವಂತೆ ನೂತನ ವಧುವರರಿಗೆ ಸಂದೇಶ ನೀಡಿದರು.

ಸಮಾರಂಭದಲ್ಲಿ ಎಪಿಎಂಸಿ ವರ್ತಕರು, ಅತಿಥಿಗಳು ಹಾಗೂ ಅನೇಕರ ದಂಪತಿಗಳ ಬಂಧುಮಿತ್ರರು ಭಾಗವಹಿಸಿ ಕಲ್ಯಾಣದ ಸಡಗರವನ್ನು ಹಂಚಿಕೊಂಡರು.


ವರದಿ:ಡಿ.ಪಿ ಅರವಿಂದ್‌ ಎಫ್‌7ನ್ಯೂಸ್‌ 

Post a Comment

Previous Post Next Post