ಶಿವಮೊಗ್ಗ:
ರಾಜ್ಯದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಹಾಗೂ ನಾಯಕರು ನೀಡುತ್ತಿರುವ ಹೇಳಿಕೆಗಳು ಈಗ ಮತದಾರರ ನಂಬಿಕೆಗೆ ಧಕ್ಕೆ ತರುತ್ತಿವೆ. ಜನಪರ ಆಡಳಿತದ ನಾಮದಲ್ಲಿ ರಾಜಕೀಯ ಪಕ್ಷಗಳು ಮಾಡುತ್ತಿರುವ ಢೊಂಗಿ ನಡೆಗಳು ಮತ್ತೊಮ್ಮೆ ಬೆಳಕಿಗೆ ಬಂದಿವೆ.
ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅವರು ಮಾತನಾಡುತ್ತಾ, “ಬಿಜೆಪಿ ಆಡಳಿತದ ವೇಳೆ ಕಾಂಗ್ರೆಸ್ 40% ಕಮಿಷನ್, ಪೇಸಿಎಮ್, ಬಿಟ್‌ಕಾಯಿನ್ ಹಗರಣ ಹೀಗೆ ಹಲವಾರು ಆರೋಪಗಳನ್ನು ಮಾಡಿತು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ಒಂದೂ ಹಗರಣದ ಪ್ರಮಾಣವನ್ನೂ ಸಾಬೀತುಪಡಿಸಲು ವಿಫಲವಾಗಿದೆ,” ಎಂದು ವ್ಯಂಗ್ಯವಾಡಿದರು.
ಅವರು ಮುಂದುವರೆದು, “ಸುಳ್ಳು ಆರೋಪಗಳ ಮೂಲಕ ಜನರನ್ನು ಮೋಸಗೊಳಿಸಿ ಗ್ಯಾರಂಟಿ ಯೋಜನೆಗಳ ಆಮಿಷವೊಡ್ಡಿದ ಕಾಂಗ್ರೆಸ್ ಈಗ ಯಾವತ್ತೂ ಸಾಧನೆಯಿಲ್ಲದ ಸಮಾವೇಶಗಳನ್ನು ಮಾಡುತ್ತಿದೆ,” ಎಂದು ಕಾಂಗ್ರೆಸ್ ಸರ್ಕಾರದ ಧೋರಣೆಯ ಬಗ್ಗೆ ತೀವ್ರವಾದ ವಿಕಸನ ನೀಡಿದರು.
ಒಟ್ಟಾರೆ ಯಾವುದೇ ರಾಜಕೀಯ ಪಕ್ಷವಿರಲಿ, ಅಧಿಕಾರದಲ್ಲಿಲ್ಲದಾಗ ಜನಪರ ನಡವಳಿಕೆ ತೋರುತ್ತದೆ. ಆದರೆ ಅಧಿಕಾರಕ್ಕೆ ಬಂದ ಬಳಿಕ ತಾವು ಮಾಡಿದ ಮಾತುಗಳನ್ನೆ ಬಿಟ್ಟು ರಾಜಕೀಯ ಲಾಭಕ್ಕಾಗಿ ಮಾತ್ರ ಕೆಲಸ ಮಾಡುತ್ತಿದೆ. ಎಂಬುದು ಜನರ ಮಾತಾಗಿದೆ ತೀವ್ರವಾಗಿ ಸೂಚಿಸಿವ ವಿಷಯವೇನೆಂದರೆ, "ಈ ರಾಜಕೀಯ ಪಕ್ಷಗಳ ನಡುವಿನ ಕಾದಾಟದಲ್ಲಿ ಕೊನೆಗೆ ಬಲಿಯಾಗೋದು ಜನತೆ ಮಾತ್ರ" ಎಂಬುದು ಸತ್ಯವಾಗಿದೆ.
“ಇವತ್ತಿನ ಜನತೆ ಯಾವ ಪಕ್ಷವನ್ನೇ ಬೆಂಬಲಿಸಿದರೂ, ಆ ಪಕ್ಷಗಳು ತಮ್ಮ ಸ್ವಾರ್ಥದ ರಾಜಕಾರಣವನ್ನೇ ಮುಂದುವರಿಸುತ್ತವೆ. ಜನರ ಒಳಿತಿಗಾಗಿ ಎಷ್ಟು ಕೆಲಸ ಮಾಡುತ್ತವೆ ಎಂಬ ಪ್ರಶ್ನೆ ಜನತೆಯ ಮುಂದಿದೆ,” ಈ ಮಾತುಗಳಿಂದ ಜನರು ತಮ್ಮ ನಿರಾಸೆಯುಳ್ಳ ಭಾವನೆ ವ್ಯಕ್ತಪಡಿಸಿದರೆ.
ವರದಿ: ಡಿ.ಪಿ. ಅರವಿಂದ್, ಎಫ್7 ನ್ಯೂಸ್, ಶಿವಮೊಗ್ಗ


