ಶಿರಾಳಕೊಪ್ಪದಲ್ಲಿ ಡೀಸೆಲ್ ಕಳವು ಪ್ರಕರಣ ಭೇದನೆ – ಎರಡು ಆರೋಪಿಗಳು ಬಂಧನ, ₹9 ಲಕ್ಷ ಮೌಲ್ಯದ ಸರಂಜಾಮು ವಶಕ್ಕೆ
ವಿವರವಾದ ಸುದ್ದಿ:
ದಿನಾಂಕ 20-04-2025 ರಂದು ರಾತ್ರಿ, ಶಿರಾಳಕೊಪ್ಪದ ವಿಜಯಲಕ್ಷ್ಮಿ ರೈಸ್ ಮಿಲ್ ಆವರಣದಲ್ಲಿ ನಿಲ್ಲಿಸಿದ್ದ ಮೂರು ಲಾರಿಗಳ ಡೀಸೆಲ್ ಟ್ಯಾಂಕ್‌ಗಳಿಂದ, ಅಂದಾಜು ₹45,000 ಮೌಲ್ಯದ ಸುಮಾರು 450 ಲೀಟರ್ ಡೀಸೆಲ್ ಅನ್ನು ಯಾರೋ ಕಳ್ಳರು ಕಳವು ಮಾಡಿರುವ ಘಟನೆ ವರದಿಯಾಗಿದೆ. ಈ ಕುರಿತು, ಮಿಲ್ ಮಾಲೀಕರಾದ ಶ್ರೀ ವಿಕ್ರಂ ಭಟ್ (47 ವರ್ಷ), ಕೋಲಗುಣಸಿ, ಸೊರಬ ತಾಲ್ಲೂಕು ವಾಸಿಯವರು ನೀಡಿದ ದೂರಿನ ಮೇರೆಗೆ, ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ: 0110/2025, ಕಲಂ: 303(2) ಬಿ.ಎನ್.ಎಸ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ತನಿಖೆಯನ್ನು ಶಿವಮೊಗ್ಗ ಜಿಲ್ಲೆಯ ಮಾನ್ಯ ಪೊಲೀಸ್ ಅಧೀಕ್ಷಕರು ಶ್ರೀ ಮಿಥುನ್ ಕುಮಾರ್ ಜಿ.ಕೆ., ಐಪಿಎಸ್, ಅವರ ಮಾರ್ಗದರ್ಶನದಲ್ಲಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶ್ರೀ ಎ. ಜಿ. ಕಾರಿಯಪ್ಪ ಮತ್ತು ಶಿಕಾರಿಪುರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರು ಶ್ರೀ ಕೇಶವ ಕೆ.ಇ ಅವರ ಮೇಲ್ವಿಚಾರಣೆಯಲ್ಲಿ ಕೈಗೊಳ್ಳಲಾಗಿದೆ.
ತನಿಖಾ ಕಾರ್ಯವನ್ನು ಶ್ರೀ ಸಂತೋಷ್ ಪಾಟೀಲ್, ಸಿಪಿಐ ಶಿಕಾರಿಪುರ ಟೌನ್ ವೃತ್ತ ಹಾಗೂ ಶ್ರೀ ಪ್ರಶಾಂತ್ ಕುಮಾರ ಟಿ.ಬಿ, ಪಿಎಸ್‌ಐ ಶಿರಾಳಕೊಪ್ಪ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ, ಸಿಬ್ಬಂದಿಗಳಾದ ಸಿ.ಹೆಚ್.ಸಿ ಸಂತೋಷಕುಮಾರ ಆರ್, ಸಿಪಿಸಿ ರಾಕೇಶ್ ಜಿ ಮತ್ತು ಸಲ್ಮಾನ್ ಖಾನ್ ಹಾಜಿ ಇವರುಗಳು ಒಳಗೊಂಡ ತಂಡದಿಂದ ಪರಿಣಾಮಕಾರಿಯಾಗಿ ಮುನ್ನಡೆಸಲಾಗಿದೆ.
ಅಭಿವೃದ್ಧಿಯಾದ ತನಿಖೆಯಲ್ಲಿ, ಪೊಲೀಸರು ಆರೋಪಿತರಾದ
-
ಸೋನು (26 ವರ್ಷ), ಟಿಪ್ಪುನಗರ ಬಲಭಾಗ, 05ನೇ ಕ್ರಾಸ್, ಶಿವಮೊಗ್ಗ
-
ಸೈಯದ್ ಹುಸೇನ್ ಅಲಿಯಾಸ್ ಗಫಾರ್ (25 ವರ್ಷ), ಬರ್ಮಪ್ಪನಗರ, ಶಿವಮೊಗ್ಗ
ಇವರನ್ನು ಬಂಧಿಸಿದ್ದಾರೆ.
ಬಂಧಿತರಿಂದ ಅಂದಾಜು ₹9,00,000 ಮೌಲ್ಯದ ಟಾಟಾ ಇಂಟ್ರಾ ಗೂಡ್ಸ್ ವಾಹನ, ₹15,000 ನಗದು ಹಾಗೂ 30 ಲೀಟರ್ ಸಾಮರ್ಥ್ಯದ 5 ಖಾಲಿ ಕ್ಯಾನ್‌ಗಳು ವಶಕ್ಕೆ ಪಡೆದುಕೊಳ್ಳಲಾಗಿದೆ.
ಈ ಯಶಸ್ವೀ ಕಾರ್ಯಾಚರಣೆಗೆ ಶಿವಮೊಗ್ಗ ಜಿಲ್ಲೆ ಮಾನ್ಯ ಪೊಲೀಸ್ ಅಧೀಕ್ಷಕರು ಶ್ಲಾಘನೆ ವ್ಯಕ್ತಪಡಿಸಿ, ತನಿಖಾ ತಂಡವನ್ನು ಅಭಿನಂದಿಸಿದ್ದಾರೆ.
ವರದಿ: ಎಸ್. ಬಾಬು


