ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ರಾಮಕೃಷ್ಣ ವಿದ್ಯಾನಿಕೇತನದ ವಿದ್ಯಾರ್ಥಿನಿ – ಶಿಕ್ಷಣದಲ್ಲಿ ನೈತಿಕತೆ ಹಾಗೂ ಮೌಲ್ಯಗಳ ಸಂಕೇತವಾಗಿ ಗೋಪಾಳ ಶಾಲೆ ಹೊರಹೊಮ್ಮುತೆ!
ಈ ಕುರಿತು ಸ್ಪಷ್ಟವಾದ ಸಾಕ್ಷ್ಯವೆಂದರೆ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶ್ರೀ ರಾಮಕೃಷ್ಣ ವಿದ್ಯಾನಿಕೇತನದ ವಿಧ್ಯಾರ್ಥಿನಿ ನಿತ್ಯ ಎಂ ಕುಲಕರ್ಣಿ ಅವರು 625 ರಲ್ಲಿ 625 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಎಲ್ಲ ವಿಷಯಗಳಲ್ಲೂ ಶೇ.100 ಅಂಕಗಳನ್ನು ಗಳಿಸುವುದು ಅಸಾಧಾರಣ ಸಾಧನೆಯಾಗಿದ್ದು, ಶಾಲೆಯ ಗುಣಮಟ್ಟ, ಶಿಕ್ಷಕರ ಶ್ರಮ ಮತ್ತು ವಿಧ್ಯಾರ್ಥಿನಿಯ ಪರಿಶ್ರಮದ ಸಂಕೇತವಾಗಿದೆ.
ವಿಷಯವಾರು ಅಂಕಗಳು:
-
ಸಂಸ್ಕೃತ: 125/125
-
ಕನ್ನಡ: 100/100
-
ಇಂಗ್ಲಿಷ್: 100/100
-
ಗಣಿತ: 100/100
-
ವಿಜ್ಞಾನ: 100/100
-
ಸಮಾಜ ವಿಜ್ಞಾನ: 100/100
ಇಂತಹ ಅತಿದೊಡ್ಡ ಸಾಧನೆಯ ಮೂಲಕ ನಿತ್ಯ ಅವರು ತಮಗೆ ಶಿಕ್ಷಣ ನೀಡಿದ ಶಿಕ್ಷಕರಿಗೆ, ಶಾಲೆಗೆ ಹಾಗೂ ತಮ್ಮ ಪೋಷಕರಿಗೆ ಗೌರವ ತರುತ್ತಿದ್ದರೆ, ಮತ್ತೊಂದು ಕಡೆ ರಾಮಕೃಷ್ಣ ವಿದ್ಯಾನಿಕೇತನ ತನ್ನ ಶಿಕ್ಷಣದ ನಿಷ್ಠೆ ಮತ್ತು ವಿದ್ಯಾರ್ಥಿಗಳ ಮೇಲೆ ತೋರುತ್ತಿರುವ ಕಾಳಜಿಯ ಗೆಜ್ಜೆಗಟ್ಟನ್ನು ಮತ್ತೊಮ್ಮೆ ದೃಢಪಡಿಸಿದೆ.
ಈ ಯಶಸ್ಸು ಇಡೀ ಶಾಲಾ ತಂಡದ ಸಮಗ್ರ ಶ್ರಮ, ನಿರಂತರ ಮಾರ್ಗದರ್ಶನ ಮತ್ತು ಮಕ್ಕಳನ್ನೆ ತಮ್ಮದೇ ಕುಟುಂಬದ ಸದಸ್ಯರಂತೆ ಬೆಳೆಸುವ ಮನೋಭಾವದ ಫಲವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಇಂತಹ ಶಿಕ್ಷಣ ಸಂಸ್ಥೆಗಳು ಇನ್ನಷ್ಟು ಉದಯಿಸಲಿ ಎಂಬುದು ಈ ಸಂದರ್ಭದಲ್ಲಿ ಎಲ್ಲರ ಆಶಯವಾಗಿದೆ.
ಈ ಸಾಧನೆಗೆ ಇನ್ಸು (INSU) ಸಂಸ್ಥೆಯಿಂದ ಹೃತ್ಪೂರ್ವಕ ಅಭಿನಂದನೆಗಳು.
ವರದಿ: ಡಿ.ಪಿ.ಅರವಿಂದ್ | ಎಫ್7 ನ್ಯೂಸ್, ಶಿವಮೊಗ್ಗ


