ಮಳೆರಾಯನಿಂದ ತಪ್ಪದ ಕಾಟ: ಮೂರು ದಿನವಾದರೂ ರಸ್ತೆ ತೆರವುಗೊಳ್ಳದ ಸ್ಥಿತಿ
ಶಿವಮೊಗ್ಗ:
ನಗರದ ಓಲ್ಡ್ ಬಾರ್ ಲೆಸೆನ್ ರಸ್ತೆಯಲ್ಲಿ ಮೂರು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ಒಂದು ದೊಡ್ಡ ಗಾತ್ರದ ಮರ ರಸ್ತೆಮೇಲೆ ಉರುಳಿ ಬಿದ್ದಿದೆ. ಈ ಮರವೊಂದು ಬಹುತೇಕ ರಸ್ತೆಯ ಭಾಗವನ್ನು ಆವರಿಸಿಕೊಂಡಿರುವುದರಿಂದ ವಾಹನ ಸಂಚಾರದಲ್ಲಿ ಭಾರೀ ಅಡಚಣೆ ಉಂಟಾಗಿದೆ.
ಮಳೆ ಬಂದು ಹೋಗಿ ಮೂರು ದಿನಗಳು ಕಳೆದರೂ ರಸ್ತೆಗೆ ಬಿದ್ದಿರುವ ಮರವನ್ನು ತೆರವುಗೊಳಿಸಲು ಯಾವುದೇ ಅಧಿಕಾರಿಗಳು ಮುಂದಾಗಿಲ್ಲ. ಇದರಿಂದಾಗಿ ತುರ್ತು ಕಾರ್ಯಗಳಿಗಾಗಿ ಈ ಮಾರ್ಗ ಬಳಸುವ ಸಾರ್ವಜನಿಕರು ಬೇರೆ ಮಾರ್ಗ ಹಿಡಿಯುವ ಅನಿವಾರ್ಯತೆಗೆ ದಾರಿಯಾಗಿದೆ. ಇದರಿಂದ ಸಾರ್ವಜನಿಕರಲ್ಲಿ ಆಕ್ರೋಶ ಮೂಡಿದ್ದು, ಅಧಿಕಾರಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ
ಜಾರುವಿನಂತೆ ಕೆಲಸ ಮಾಡಬೇಕಾದ ನಗರ ಆಡಳಿತ ಇಂತಹ ತುರ್ತು ಸಂದರ್ಭದಲ್ಲೂ ನಿರ್ಲಕ್ಷ್ಯ ತೋರುತ್ತಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ. "ಇದೆಂತಹ ಪರಿಸ್ಥಿತಿ ನಮ್ಮ ಜನಪ್ರತಿನಿಧಿಗಳು ಅಥವಾ ಉನ್ನತ ಅಧಿಕಾರಿಗಳ ಮನೆ ಹತ್ತಿರದಲ್ಲಿ ಸಂಭವಿಸಿದ್ದರೆ, ಕೆಲವೇ ನಿಮಿಷಗಳಲ್ಲಿ ಸಮಸ್ಯೆ ಬಗೆಹರಿಸಬಹುದಿತ್ತು" ಎಂಬ ಅಭಿಪ್ರಾಯ ಬಹುತೇಕ ನಾಗರಿಕರಲ್ಲಿ ಮೂಡಿದೆ.
ನೆಲಕ್ಕುರುಳಿದ ಮರ: ಜನಪ್ರಯಾಣಕ್ಕೆ ಅಡಚಣೆ, ಯಾವ ಅಧಿಕಾರಿಯೂ ಗಮನಹರಿಸದ ಸ್ಥಿತಿ
ಶಿವಮೊಗ್ಗ ನಗರದಲ್ಲಿ ಮಳೆಯ ಅಬ್ಬರದಿಂದಾಗಿ ಹಲವೆಡೆ ಮರಗಳು ನೆಲಕ್ಕುರುಳಿವೆ. ವಿಶೇಷವಾಗಿ ಲೆಸೆನ್ ರಸ್ತೆಯ ಮೇಲೆ ಬಿದ್ದಿರುವ ಈ ದೊಡ್ಡ ಮರವನ್ನು ಯಾರೂ ಕಡೆಗಣಿಸುತ್ತಿರುವುದಿಲ್ಲ. ವಾಹನ ಸವಾರರು ಹಾಗೂ ಪಾದಚಾರಿಗಳು ದಿನನಿತ್ಯದ ಓಡಾಟದಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ.
"ಸಾಮಾನ್ಯರ ಸಮಸ್ಯೆ ಯಾರು ಕೇಳುತ್ತಾರೆ?" – ಸಾರ್ವಜನಿಕರ ಕಿಡಿ
ಈ ಮಾರ್ಗದ ಮೂಲಕ ದಿನನಿತ್ಯ ತುರ್ತು ಕೆಲಸಗಳಿಗೆ ಹೋಗುವ ಜನರು, "ನಮ್ಮ ಬದುಕು ಯಾರಿಗೂ ಮುಖ್ಯವಲ್ಲವೇ?" ಎಂದು ಕೇಳುತ್ತಿದ್ದಾರೆ. ಕೂಡಲೇ ಕ್ರಮ ಕೈಗೊಂಡು, ಉರುಳಿರುವ ಮರವನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂಬುದು ಎಲ್ಲರ ಒಕ್ಕೂಟದ ಬೇಡಿಕೆಯಾಗುತ್ತಿದೆ.
ವರದಿ: ಎಸ್.ಬಾಬು

