ದರ್ಶನ್ ವಿರುದ್ಧ ಸುಮಲತಾ: ಸೋಷಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆ
ಬೆಂಗಳೂರು, ಮಾರ್ಚ್ 12: ನಟ ದರ್ಶನ್ ಮತ್ತು ಸಂಸದಾ ಸುಮಲತಾ ನಡುವಿನ ಸಂಬಂಧದಲ್ಲಿ ಭಾರೀ ಬದಲಾವಣೆ ಕಂಡುಬಂದಿದ್ದು, ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಸುಮಲತಾನನ್ನು ಅನ್‌ಫಾಲೋ ಮಾಡಿರುವ ವಿಚಾರ ಚರ್ಚೆಗೆ ಗ್ರಾಸವಾಗಿದೆ.
ಸುಮಲತಾ ವಿರುದ್ದ ದರ್ಶನ್ ಗರಂ
ಜೈಲಿನಲ್ಲಿದ್ದಾಗಲಿ ಅಥವಾ ಬಿಡುಗಡೆಯಾದ ನಂತರವೂ ತನ್ನ ವಿಚಾರಕ್ಕೆ ಗಮನ ಹರಿಸದ ಕಾರಣಕ್ಕೆ ದರ್ಶನ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಎಂದಿಗೂ ತಮ್ಮ ಬೆನ್ನಿಗೆ ನಿಂತವರಂತೆ ಭಾವಿಸಿದ್ದ ಸುಮಲತಾ, ತಾವು ಸಂಕಷ್ಟದಲ್ಲಿದ್ದಾಗ ಸಂಪರ್ಕಿಸದ ಬೇಸರದಿಂದಲೇ ದರ್ಶನ್ ಅನ್‌ಫಾಲೋ ಮಾಡಿರುವುದಾಗಿ ಹೇಳಲಾಗುತ್ತಿದೆ.
ದರ್ಶನ್ ನಿರ್ಧಾರದ ಬೆನ್ನಲ್ಲೇ ಸುಮಲತಾ ರಿಯಾಕ್ಷನ್
ದರ್ಶನ್ ಈ ನಿರ್ಧಾರ ತೆಗೆದುಕೊಂಡ ಕೆಲವೇ ಗಂಟೆಗಳಲ್ಲೇ ಸುಮಲತಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯ ಮೂಲಕ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದಂತಾಗಿದೆ. ಅವರ ಹೊಸ ಪೋಸ್ಟ್‌ನಲ್ಲಿ,
"ಬೆಸ್ಟ್ ಆಕ್ಟಿಂಗ್‌ಗಾಗಿ ಆಸ್ಕರ್ ಪ್ರಶಸ್ತಿ ಯಾರಿಗೆ ನೀಡಲಾಗುತ್ತದೆ ಗೊತ್ತಾ? ಯಾರು ಸತ್ಯವನ್ನು ತಿರುಚುತ್ತಾರೆ, ತಮ್ಮ ತಪ್ಪನ್ನು ಬೇರೆವರ ಮೇಲೆ ಹಾಕಿ ನೋವು ನೀಡುತ್ತಾರೆ, ನಿಂದನೆಯನ್ನು ಬೇರೆವರ ಮೇಲೆ ಹಾಕಿ ಗೂಬೆಕುರಿಸುತ್ತಾರೆ, ಅಂತಹವರಿಗೇ!"
ಎಂದು ಉಲ್ಲೇಖಿಸಿದ್ದು, ಇದು ದರ್ಶನ್‌ಗೆ ತಿರುಗೇಟು ಎಂಬುದಾಗಿ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಈ ವಿಚಾರ ಭಾರೀ ಚರ್ಚೆ
ದರ್ಶನ್ ಜೈಲಿಗೆ ಹೋದ ನಂತರ ಒಂದು ದಿನವೂ ಅವರು ವಿಚಾರಿಸದಿರುವುದರಿಂದ ಬೇಸರಗೊಂಡು ಅನ್‌ಫಾಲೋ ಮಾಡಿರುವುದು ಎಂದು ಹೇಳಲಾಗುತ್ತಿದೆ. ಸಂಕಷ್ಟದ ಸಂದರ್ಭದಲ್ಲಿ ದರ್ಶನ್ ಅವರ ಪರ ನಿಂತಿದ್ದ_SUMALATHA_, ಕೊಲೆ ಆರೋಪ ಕೇಳಿ ಬಂದ ತಕ್ಷಣ ದೂರಾದರಾ ಎಂಬ ಅನುಮಾನ ಗಾಂಧಿನಗರದಲ್ಲಿ ಮೂಡಿದೆ.
ಇದೀಗ ಈ ಸಂಗತಿಗಳು ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಕುತೂಹಲಕ್ಕೆ ಕಾರಣವಾಗಿದ್ದು, ಮುಂದಿನ ಬೆಳವಣಿಗೆಗಳತ್ತ ಎಲ್ಲರಲ್ಲಿ ಕೇಳಿಬರುತ್ತಿದೆ.
ವರದಿ:ಡಿ.ಪಿ ಅರವಿಂದ್
