ಅಪರಿಚಿತ ಮಹಿಳೆಯ ಸಾವು: ವಾರಸುದಾರರ ಮಾಹಿತಿ ಬೇಕಾಗಿದೆ

 ಅಪರಿಚಿತ ಮಹಿಳೆಯ ಸಾವು: ವಾರಸುದಾರರ ಮಾಹಿತಿ ಬೇಕಾಗಿದೆ



                                      

ಶಿವಮೊಗ್ಗ, ಮಾರ್ಚ್ 12: ಮಾ.06 ರಂದು ಆನಂದಪುರ ಗ್ರಾಮದ ರಂಗನಾಥ ಬೀದಿಯ ಪಕ್ಕದಲ್ಲಿರುವ ಭೂಮಿಕಾ ಏಜೆನ್ಸಿ ಎದುರು ಮಲಗಿದ್ದ ಸ್ಥಿತಿಯಲ್ಲೇ ಮರಣ ಹೊಂದಿದ್ದ ಸುಮಾರು 30 ರಿಂದ 35 ವಯಸ್ಸಿನ ಅಪರಿಚಿತ ಮಹಿಳೆಯ ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಮೃತ ಮಹಿಳೆ ಸುಮಾರು 152 ಸೆಂ.ಮೀ. ಎತ್ತರ, ಕಪ್ಪು ಮೈ ಬಣ್ಣ, ತೆಳುವಾದ ಮೈಕಟ್ಟು, ದುಂಡು ಮುಖ, ತಲೆಯಲ್ಲಿ ಕಪ್ಪು ಗುಂಗುರು ಕೂದಲು ಹೊಂದಿದ್ದು, ಬಲಗೈ ಮಧ್ಯದಲ್ಲಿ "ಮುರುಗೇಶ್" ಎಂದು ಕನ್ನಡದಲ್ಲಿ ಹಚ್ಚೆ ಹಾಕಿದ ಗುರುತು ಇರುತ್ತದೆ. ಅವರು ಬಿಳಿ ಬಣ್ಣದ ಕೆಂಪು ಹೂವಿನ ವಿನ್ಯಾಸವಿರುವ ಚೂಡಿದಾರ್ ಧರಿಸಿದ್ದರು.

ಈ ಮಹಿಳೆಯ ವಾರಸುದಾರರು ಅಥವಾ ಆಕೆಯನ್ನು ಪರಿಚಯದವರು ಇದ್ದರೆ ತಕ್ಷಣವೇ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.

ಆನಂದಪುರ ಪೊಲೀಸ್ ಠಾಣೆ: 08183-298100 / 9480803363
ಶಿವಮೊಗ್ಗ ಎಸ್.ಪಿ. ಕಚೇರಿ: 08182-261400
ಸಾಗರ ವೃತ್ತ ನಿರೀಕ್ಷಕರು: 9480803336

ಪೊಲೀಸ್ ಇಲಾಖೆಯ ಪ್ರಕಟಣೆಯಲ್ಲಿ ಈ ಮಾಹಿತಿಯನ್ನು ಜನರಿಗೆ ಹಂಚಿಕೊಳ್ಳುವಂತೆ ವಿನಂತಿಸಲಾಗಿದೆ.

ವರದಿ:ಡಿ.ಪಿ ಅರವಿಂದ್

Post a Comment

Previous Post Next Post