ಯುವಕರ ಭಾರತ ಮುದುಕರ ಆಡಳಿತ..?

                        ಯುವಕರ ಭಾರತ ಮುದುಕರ ಆಡಳಿತ..?



ಭಾರತದ ಯುವಶಕ್ತಿ – ಭವಿಷ್ಯದ ದಿಶೆಗೊಳ್ಳಬೇಕಾದ ಮಾರ್ಗಗಳು

ಭಾರತ ದೇಶವನ್ನು ಯುವಕರ ದೇಶ ಎಂದು ಕರೆಯಲಾಗುತ್ತದೆ. ನಮ್ಮ ದೇಶವನ್ನು ಹೀಗೆ ಕರೆಯಲು ಕಾರಣ ಅತಿ ಹೆಚ್ಚಿನ ಪ್ರಮಾಣದಲ್ಲಿ ಯುವಕರೆ ಈ ದೇಶದಲ್ಲಿದ್ದಾರೆ. ಆದರೆ ದೇಶ ಆರ್ತಿಕವಾಗಿ ಮುಂದುವರೆದ ರಾಷ್ಟ್ರಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳದೇ, ಇನ್ನೂ ಮುಂದುವರೆಯುತ್ತಿರುವ ದೇಶ ಎಂದು ಗುರುತಿಸಲಾಗಿದೆ. ಇದಕ್ಕೆ ಹಲವಾರು ಕಾರಣಗಳಿವೆ, ಅದರಲ್ಲಿ ಪ್ರಮುಖವಾಗಿ ಹಿರಿಯರ ಆಡಳಿತ ಮತ್ತು ಯುವಕರ ಪಾಲ್ಗೊಳ್ಳುವಿಕೆಯ ಕೊರತೆ ಮುಖ್ಯವಾಗಿ ಕಾಣಿಸುತ್ತದೆ.

ಯುವಕರ ಸಾಮರ್ಥ್ಯ ಮತ್ತು ಹೊಸ ಯೋಚನೆಗಳು

ಭಾರತ ಯುವಶಕ್ತಿಯ ತಾಣವಾಗಿದ್ದು, ನೂತನ ಯೋಚನೆಗಳು ಹಾಗೂ ಆವಿಷ್ಕಾರಗಳು ಯುವಜನಾಂಗದಲ್ಲಿ ತುಂಬಿ ತುಳುಕುತ್ತಿವೆ. ಸರಿಯಾದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ದೊರಕಿದರೆ ಮುಂದಿನ 10-20 ವರ್ಷಗಳಲ್ಲಿ ಭಾರತ ವಿಶ್ವದ ಶಕ್ತಿಶಾಲಿ ರಾಷ್ಟ್ರವಾಗಿ ರೂಪುಗೊಳ್ಳುವ ಸಾಮರ್ಥ್ಯ ಹೊಂದಿದೆ. ಆದರೆ, ಈ ಯೋಚನೆಗಳು ಮತ್ತು ಪ್ರತಿಭೆಗಳು ಸಾಕಾರಗೊಳ್ಳದಿರುವುದಕ್ಕೆ ಪ್ರಸ್ತುತ ಆಡಳಿತ ಕ್ರಮಗಳು ಹಾಗೂ ಹಿರಿಯರ ನಿರ್ಧಾರಾತ್ಮಕ ಹಸ್ತಕ್ಷೇಪವೇ ಮುಖ್ಯ ಕಾರಣ.

ಹಿರಿಯರ ಆಡಳಿತ ಚಟುವಟಿಕೆಗಳು

ಹಿರಿಯರ ಅನುಭವ ಅನಿವಾರ್ಯವಾದರೂ, ಅವರ ನಿರ್ಧಾರಗಳು ಹೊಸ ತಂತ್ರಗಳು ಮತ್ತು ಯೋಚನೆಗಳಿಗೆ ಅವಕಾಶ ನೀಡದೆ, ತಾವು ಹುಟ್ಟಿನಿಂದ ಸಾಯುವವರೆಗೂ ಆಡಳಿತ ತಮ್ಮ ಕೈಯಲ್ಲೇ ಇರಬೇಕೆಂಬ ಮನೋಭಾವವು ಯುವಕರಿಗೆ ಅವಕಾಶ ಕಡಿಮೆಯಾಗುವಂತಾಗಿದೆ. ವ್ಯವಹಾರ, ರಾಜಕಾರಣ, ಉದ್ಯಮ ಮತ್ತು ಸಹಕಾರಿ ಸಂಸ್ಥೆಗಳ ಹಿನ್ನಲೆಯಲ್ಲಿ ಈ ಪರಿಸ್ಥಿತಿ ಸ್ಪಷ್ಟವಾಗಿ ಕಾಣಸಿಗುತ್ತದೆ.

ಯುವಜನಾಂಗದ ಭಾಗವಹಿಸುವಿಕೆ ಮತ್ತು ಅವಕಾಶಗಳು

ರಾಜಕೀಯ, ಉದ್ಯಮ, ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಯುವಕರು ತಮ್ಮದೇ ಆದ ಹೊಸ ಮಾರ್ಗವನ್ನು ಹುಡುಕಬೇಕು. ಹಿರಿಯರ ಅನುಭವವನ್ನು ಗೌರವಿಸುತ್ತಾ, ಅವರ ಮಾರ್ಗದರ್ಶನದಲ್ಲಿ ತಮ್ಮ ಚೈತನ್ಯ ಮತ್ತು ಯೋಚನೆಗಳನ್ನು ಸೇರಿಸಿಕೊಳ್ಳಬೇಕು. ಯುವಜನಾಂಗ ರಾಜಕೀಯ ಪ್ರವೇಶಕ್ಕೆ ಮುಂದೆ ಬಂದರೆ, ದೇಶದ ಅಭಿವೃದ್ಧಿ ಮತ್ತು ನೈತಿಕ ಸ್ಥಿತಿಯಲ್ಲಿ ಹೊಸ ಬೆಳವಣಿಗೆಗಳಿಗೆ ದಾರಿಯಾಗಬಹುದು.

ಬ್ರಷ್ಟಾಚಾರ ಮತ್ತು ಪ್ರಶ್ನಾತ್ಮಕ ಮನೋಭಾವ

ಯುವಕರು ಅಧಿಕಾರ ವಿಭಾಗದಲ್ಲಿ ನಡೆಯುವ ಭ್ರಷ್ಟಾಚಾರವನ್ನು ಪ್ರಶ್ನಿಸಲು ಮನೋಬಲವನ್ನು ಹೊಂದಬೇಕು. ಉತ್ತಮ ಆಡಳಿತ ವ್ಯವಸ್ಥೆ ಸ್ಥಾಪಿಸಲು ನಿರಂತರವಾಗಿ ಪ್ರಶ್ನಿಸುವುದು ಮತ್ತು ಹೊಸ ವಿಧಾನಗಳನ್ನು ಅನುಸರಿಸುವುದು ಅನಿವಾರ್ಯ.

ಉಪಸಂಹಾರ

ನಮ್ಮ ಈ ಎಲ್ಲಾ ಮಾತುಗಳಿಗೆ ಪ್ರೇರಣೆಯಾಗಿರೋದು ಶ್ರೀಮದ್ಬಗವದ್ಗೀತೆಯಲ್ಲಿ ಉಲ್ಲೇಖವಾಗಿರುವಂತೆ, ಪರಿವರ್ತನೆ ಈ ಜಗತ್ತಿನ ನಿಯಮ. ಮುಂದಿನ ದಿನಗಳಲ್ಲಿ ಭಾರತದ ಯುವಶಕ್ತಿ ಸರಿಯಾದ ಮಾರ್ಗದರ್ಶನದಲ್ಲಿ ಬೆಳವಣಿಗೆಯ ದಾರಿಯತ್ತ ಸಾಗಬೇಕು. ಭಾರತ ಯುವಶಕ್ತಿ ಸದುಪಯೋಗವಾಗುವಂತೆ ಮಾಡಿದರೆ,  ನಿಜವಾದ ವಿಶ್ವಗುರು ಪಟ್ಟವನ್ನು ಮರಳಿ ಪಡೆಯುವಲ್ಲಿ ದೇಶ ಯಶಸ್ವಿಯಾಗಬಹುದು.

ವರದಿ: ಡಿ.ಪಿ. ಅರವಿಂದ್

Post a Comment

Previous Post Next Post