ಶಿವಮೊಗ್ಗ ಶಾಸಕ ವಾಟರ್ ಮೆನ್ ಹುದ್ದೆ ಖಾಯಂ ಗೊಳಿಸಲು ಆಗ್ರಹ
ಶಿವಮೊಗ್ಗ, ಮಾ. 5: ಕರ್ನಾಟಕ ವಿಧಾನ ಮಂಡಲದ ಬಜೆಟ್ ಅಧಿವೇಶನದಲ್ಲಿ ಇಂದು ಶಿವಮೊಗ್ಗ ಶಾಸಕ ಚನ್ನಬಸಪ್ಪ (ಚನ್ನಿ) ಅವರು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಬಿ.ಎಸ್. ಸುರೇಶ್ (ಬೈರತಿ) ರವರಿಗೆ ಪ್ರಶ್ನೆ ಮಾಡಿ ರಾಜ್ಯದ ವಾಟರ್ ಮೆನ್ (ನೀರುಗಂಟಿ) ಗಳ ಹುದ್ದೆಯನ್ನು ಖಾಯಂ ಗೊಳಿಸುವಂತೆ ಆಗ್ರಹಿಸಿದರು.
Video
ಶಾಸಕ ಚನ್ನಬಸಪ್ಪ ಅವರು ರಾಜ್ಯಾದ್ಯಂತ ಹಲವಾರು ವಾಟರ್ ಮೆನ್ ಗಳು ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ವರ್ಷಗಳಿಂದ ನಿರಂತರವಾಗಿ ಕೆಲಸ ನಿರ್ವಹಿಸುತ್ತಿರುವುದರಿಂದ ಅವರ ಹುದ್ದೆಯನ್ನು ಖಾಯಂ ಗೊಳಿಸಬೇಕೆಂದು ಮನವಿ ಮಾಡಿದರು.
ಈ ಕುರಿತು ಉತ್ತರಿಸಿದ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಬಿ.ಎಸ್. ಸುರೇಶ್ ಅವರು, "ರಾಜ್ಯದ ವಿವಿಧ ನಗರ್ ಪಾಲಿಕೆ, ಪುರಸಭೆ ಮತ್ತು ಗ್ರಾಮ ಪಂಚಾಯತಿಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಾಟರ್ ಮೆನ್ ಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಇವರನ್ನು ಸರ್ಕಾರ ನೇರವಾಗಿ ನೇಮಕ ಮಾಡಿಲ್ಲ. ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಂಡಿರುವುದರಿಂದ ತಕ್ಷಣವಾಗಿ ಖಾಯಂ ಮಾಡಲಾಗುವುದಿಲ್ಲ. ಆದರೆ ಸರ್ಕಾರ ಈ ವಿಷಯವನ್ನು ಹಣಕಾಸು ಇಲಾಖೆಗೆ ವರದಿ ಮಾಡಿದ್ದು, ಅವುಗಳ ಪರಿಶೀಲನೆಯ ನಂತರ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು" ಎಂದು ಸ್ಪಷ್ಟಪಡಿಸಿದರು.
ಶಿವಮೊಗ್ಗ ಶಾಸಕ ಚನ್ನಬಸಪ್ಪ ಅವರ ಈ ಪ್ರಶ್ನೆಗೆ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಾಟರ್ ಮೆನ್ ಗಳು ಶಾಶ್ವತ ಹುದ್ದೆಗೆ ನಿರೀಕ್ಷೆಯಿಂದಿದ್ದಾರೆ.
ವರದಿ: ಡಿ.ಪಿ. ಅರವಿಂದ್
