ಶಿವಮೊಗ್ಗ ಪತ್ರಿಕಾ ಭವನ ನಿರ್ವಹಣೆ ತನಿಖೆಗೆ ನಿವೃತ್ತ ನ್ಯಾಯಾಧೀಶರ ನೇಮಕ – ಕೆ.ಡಬ್ಲ್ಯೂ.ಜೆ.ವಿ. ಸ್ವಾಗತ‌


 

ಶಿವಮೊಗ್ಗ ಪತ್ರಿಕಾ ಭವನ ನಿರ್ವಹಣೆ ತನಿಖೆಗೆ ನಿವೃತ್ತ ನ್ಯಾಯಾಧೀಶರ ನೇಮಕ – ಕೆ.ಡಬ್ಲ್ಯೂ.ಜೆ.ವಿ. ಸ್ವಾಗತ‌



ಶಿವಮೊಗ್ಗ ಜಿಲ್ಲಾ ಆಡಳಿತದಿಂದ ಪತ್ರಿಕಾ ಭವನದ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಂಬಂಧಿತ ಆಕ್ಷೇಪಾರ್ಹ ವ್ಯವಹಾರಗಳ ಕುರಿತು ಸಮಗ್ರ ತನಿಖೆ ನಡೆಸಲು ಗೌರವಾನ್ವಿತ ನಿವೃತ್ತ ನ್ಯಾಯಾಧೀಶ ರವೀಂದ್ರನಾಥ್ ಹೆಚ್.ಬಿ. ಅವರನ್ನು ನೇಮಕ ಮಾಡಿದ ಜಿಲ್ಲಾಧಿಕಾರಿ ಶ್ರೀಯುತ ಗುರುದತ್ತ ಹೆಗಡೆ ಅವರ ಆದೇಶಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ಕೆ.ಡಬ್ಲ್ಯೂ.ಜೆ.ವಿ.) ಸಂಘಟನೆಯ ಶಿವಮೊಗ್ಗ ಘಟಕವು ಸ್ವಾಗತ ವ್ಯಕ್ತಪಡಿಸಿದೆ.

ಪತ್ರಿಕಾ ಭವನ ನಿರ್ವಹಣೆಗೆ ಆಡಳಿತಾಧಿಕಾರಿ ನೇಮಕದ ಆಗ್ರಹ
ಶಿವಮೊಗ್ಗ ನಗರದ ಆರ್.ಟಿ.ಒ. ಕಚೇರಿ ರಸ್ತೆಯಲ್ಲಿರುವ ಪತ್ರಿಕಾ ಭವನವನ್ನು ಜಿಲ್ಲಾಡಳಿತದಿಂದ ನೇರವಾಗಿ ನಿರ್ವಹಿಸಲು ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕೆಂದು ಕೆ.ಡಬ್ಲ್ಯೂ.ಜೆ.ವಿ. ಸಂಘಟನೆಯ ಶಿವಮೊಗ್ಗ ಘಟಕ ಹಲವು ಬಾರಿ ಮನವಿ ಸಲ್ಲಿಸಿತ್ತು. ಈ ಮನವಿಗೆ ಸ್ಪಂದನೆ ನೀಡಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು, ಸಮಗ್ರ ತನಿಖೆಗೆ ನಿವೃತ್ತ ನ್ಯಾಯಾಧೀಶರ ನೇಮಕ ಮೂಲಕ ಶುದ್ಧ ಆಧಾರಿತ ವರದಿ ನೀಡುವಂತೆ ಆದೇಶ ಹೊರಡಿಸಿದ್ದಾರೆ.

ಅಕ್ರಮ ಹಣ ವಸೂಲಿಗೆ ಆಕ್ಷೇಪ
ಸರ್ಕಾರಿ ಅನುದಾನದ ಹಣ ಮತ್ತು ಜನಪ್ರತಿನಿಧಿಗಳ ಅನುದಾನದ ಸಹಾಯಧನದಲ್ಲಿ ನಿರ್ಮಿತವಾಗಿರುವ ಪತ್ರಿಕಾ ಭವನವನ್ನು ಪ್ರೆಸ್ ಟ್ರಸ್ಟ್ ಹೆಸರಿನಲ್ಲಿ ನಿರ್ವಹಿಸುತ್ತಾ, ಸುದ್ದಿಗೋಷ್ಠಿ, ಕಾರ್ಯಕ್ರಮಗಳು ಮತ್ತು ಪ್ರೆಸ್ ನೋಟ್ ಪ್ರಕಟಣೆಗಳಿಗೆ ಸಾರ್ವಜನಿಕರಿಂದ ಹಣ ವಸೂಲಿ ಮಾಡಲಾಗುತ್ತಿತ್ತು ಎಂಬ ಆರೋಪಗಳ ಹಿನ್ನಲೆಯಲ್ಲಿ ಈ ತನಿಖೆ ಆರಂಭಿಸಲಾಗಿದೆ. ಈ ಹಣ ವಸೂಲಿ ಕಾನೂನು ಬಾಹಿರವಾಗಿದೆ ಎಂಬ ಆಕ್ಷೇಪದ ಮೇಲೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿತ್ತು.

ಪ್ರತಿಭಟನೆಯ ತಾತ್ಕಾಲಿಕ ರದ್ದು
ನಿರಂತರ ಮನವಿಗಳಿಗೆ ಸ್ಪಂದನೆ ದೊರಕದ ಹಿನ್ನಲೆಯಲ್ಲಿ ಮಾರ್ಚ್ 20ರಂದು ಸಾವಿರಾರು ಪತ್ರಕರ್ತರೊಂದಿಗೆ ಅಹೋರಾತ್ರಿ ಧರಣಿ ನಡೆಸಲು ನಿರ್ಧಾರ ಕೈಗೊಳ್ಳಲಾಗಿತ್ತು. ಆದಾಗ್ಯೂ, ಜಿಲ್ಲಾಧಿಕಾರಿಗಳ ಸಮಗ್ರ ತನಿಖಾ ಆದೇಶದ ಹೊರಡಿಕೆಯು ಈ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸುವಂತೆ ಕೆ.ಡಬ್ಲ್ಯೂ.ಜೆ.ವಿ. ಸಂಘಟನೆ ತೀರ್ಮಾನಿಸಿದೆ. ತನಿಖಾ ವರದಿ ಬರುವವರೆಗೆ ಮತ್ತು ಜಿಲ್ಲಾಧಿಕಾರಿಗಳ ಅಂತಿಮ ನಿರ್ಧಾರ ಪ್ರಕಟವಾಗುವವರೆಗೆ ಶಾಂತಿಯುತವಾಗಿ ಕಾಯುವುದಾಗಿ ಸಂಘಟನೆ ಸ್ಪಷ್ಟಪಡಿಸಿದೆ.

ಶಾಸನಾನುಸಾರ ನಿರ್ಧಾರಕ್ಕೆ ನಿರೀಕ್ಷೆ
ಜಿಲ್ಲಾ ಆಡಳಿತದ ಈ ಕ್ರಮವನ್ನು ಸ್ವಾಗತಿಸಿರುವ ಕೆ.ಡಬ್ಲ್ಯೂ.ಜೆ.ವಿ. ಸಂಘಟನೆಯು, ನ್ಯಾಯಯುತ ಮತ್ತು ಶಾಸನಾನುಸಾರ ನಿರ್ಧಾರ ಹೊರಡಿಸುವ ನಂಬಿಕೆಯನ್ನು ವ್ಯಕ್ತಪಡಿಸಿದೆ.

ವರದಿ:ಡಿ.ಪಿ ಅರವಿಂದ್

Post a Comment

Previous Post Next Post