29 ಲಕ್ಷ ನಗದು ಹಾಗೂ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ ಕಳ್ಳತನ – 24 ಗಂಟೆಗಳಲ್ಲಿ ಆರೋಪಿಗಳ ಬಂಧನ!

29 ಲಕ್ಷ ನಗದು ಹಾಗೂ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ ಕಳ್ಳತನ – 24 ಗಂಟೆಗಳಲ್ಲಿ ಆರೋಪಿಗಳ ಬಂಧನ!




ತೀರ್ಥಹಳ್ಳಿ: ದಿನಾಂಕ 14-03-2025 ರಂದು ಬೆಳಿಗ್ಗೆ ಮಹಮದ್ ಇರ್ಷಾದ್ (ನಿವಾಸಿ: ಬೊಂಬು ಬಜಾರ್, ಹೊನ್ನಾಳಿ ಟೌನ್, ದಾವಣಗೆರೆ ಜಿಲ್ಲೆ) ತಮ್ಮ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ ರೂ 29,00,000/- (ಇಪ್ಪತ್ತ ಒಂಬತ್ತು ಲಕ್ಷ) ನಗದು ಹಣವನ್ನು ತೆಗೆದುಕೊಂಡು, ಸ್ಕ್ರಾಪ್ ವ್ಯವಹಾರದ ಸಂಬಂಧ ಹೊನ್ನಾಳಿಯಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದರು.

ಘಟನೆ ವಿವರ: ಮಾರ್ಗ ಮಧ್ಯೆ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರಂಜದಕಟ್ಟೆ ಮಸೀದಿಯ ಹತ್ತಿರ ನಮಾಜ್ ಮಾಡುವ ಸಲುವಾಗಿ, ಅವರು ತಮ್ಮ ವಾಹನವನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದರು. ವಾಹನದಲ್ಲಿಯೇ ನಗದು ಹಣವಿರುವ ಬ್ಯಾಗ್ ಇಟ್ಟು ಮಸೀದಿಗೆ ತೆರಳಿದ ಇರ್ಷಾದ್, ನಮಾಜ್ ಮುಗಿಸಿ ವಾಪಸ್ಸಾದಾಗ, ವಾಹನವು ಸ್ಥಳದಲ್ಲಿ ಇರಲಿಲ್ಲ!

ಕಳ್ಳತನ: ಅಪರಿಚಿತ ಕಳ್ಳರು 29 ಲಕ್ಷ ನಗದು ಹಣ ಹಾಗೂ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನವನ್ನು ಕಳ್ಳತನ ಮಾಡಿದ್ದರು. ಈ ಬಗ್ಗೆ ತಕ್ಷಣ ತೀರ್ಥಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಯಿತು. ಪ್ರಕರಣ ದಾಖಲಿಸಿ, ಗುನ್ನೆ ಸಂಖ್ಯೆ 94/2025, ಕಲಂ 303(2) ಬಿ.ಎನ್.ಎಸ್ -2023 ರೀತ್ಯಾ ಕಾನೂನು ಕ್ರಮ ಕೈಗೊಳ್ಳಲಾಯಿತು.

ತ್ವರಿತ ಕಾರ್ಯಾಚರಣೆ – ಆರೋಪಿಗಳ ಬಂಧನ

ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ರೀ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್, ಅವರ ಮಾರ್ಗದರ್ಶನದಲ್ಲಿ, ಶ್ರೀ ಅನಿಲ್ ಕುಮಾರ್ ಭೂಮರಡ್ಡಿ (ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶಿವಮೊಗ್ಗ ಜಿಲ್ಲೆ) ಮತ್ತು ಶ್ರೀ ಕಾರಿಯಪ್ಪ ಎ.ಜಿ (ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಶಿವಮೊಗ್ಗ ಜಿಲ್ಲೆ) ಅವರ ಸಹಕಾರದೊಂದಿಗೆ, ಶ್ರೀ ಅರವಿಂದ ಕಲಗುಜ್ಜಿ (ಪೊಲೀಸ್ ಉಪಾಧೀಕ್ಷಕರು, ತೀರ್ಥಹಳ್ಳಿ ಉಪವಿಭಾಗ) ಅವರ ಮೇಲ್ವಿಚಾರಣೆಯಲ್ಲಿ, ಶ್ರೀ ಇಮ್ರಾನ್ ಬೇಗ್ (ಪೊಲೀಸ್ ನಿರೀಕ್ಷಕರು, ತೀರ್ಥಹಳ್ಳಿ ಪೊಲೀಸ್ ಠಾಣೆ) ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಯಿತು.

ಆರೋಪಿತರ ಪತ್ತೆ ಮತ್ತು ವಶಪಡಿಸಿಕೊಂಡ ಆಸ್ತಿಗಳು: ಪೊಲೀಸ್ ಇಲಾಖೆ ತಕ್ಷಣ ಕಾರ್ಯಾಚರಣೆ ನಡೆಸಿ, 24 ಗಂಟೆಗಳೊಳಗೆ ಈ ಪ್ರಕರಣಕ್ಕೆ ಸಂಬಂಧಿಸಿದ ಮುಖ್ಯ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.

ಬಂಧಿತ ಆರೋಪಿಗಳ ವಿವರ:

  1. ಸೈಯದ್ ಅಬ್ದುಲ್ಲಾ (45 ವರ್ಷ, ನೂರಾನಿ ಮಸೀದಿ ಹತ್ತಿರ, ಹೊನ್ನಾಳಿ, ದಾವಣಗೆರೆ)
  2. ನವೀದ್ ಅಹಮದ್ (40 ವರ್ಷ, ಹೊನ್ನಾಳಿ ಟೌನ್, ದಾವಣಗೆರೆ)
  3. ಜಾವೀದ್ (42 ವರ್ಷ, ನೂರಾನಿ ಮಸೀದಿ ಹತ್ತಿರ, ಹೊನ್ನಾಳಿ, ದಾವಣಗೆರೆ)

ಆರೋಪಿಗಳಿಂದ ವಶಪಡಿಸಿಕೊಂಡ ಆಸ್ತಿಗಳು:

  • ₹29,00,000/- ನಗದು ಹಣ
  • ₹10,00,000/- ಮೌಲ್ಯದ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನ
  • ₹6,00,000/- ಮೌಲ್ಯದ ಟೊಯೋಟಾ ಇಟಿಯೋಸ್ ಕಾರು (ಕೃತ್ಯಕ್ಕೆ ಬಳಸಿದ ವಾಹನ)

ಒಟ್ಟು ₹45,00,000/- ಮೌಲ್ಯದ ನಗದು ಹಣ ಮತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸ್ ಇಲಾಖೆಯ ಶ್ಲಾಘನೆ:

ಈ ಕಾರ್ಯಾಚರಣೆ ಯಶಸ್ವಿಯಾಗಿ ನೆರವೇರಿದ ಹಿನ್ನೆಲೆಯಲ್ಲಿ, ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಾನ್ಯ ಶ್ರೀ ಮಿಥುನ್ ಕುಮಾರ್ ಜಿ.ಕೆ. ಐಪಿಎಸ್ ಅವರು ತನಿಖಾ ತಂಡವನ್ನು ಪ್ರಶಂಸಿಸಿ, ಅಭಿನಂದನೆ ಸಲ್ಲಿಸಿದ್ದಾರೆ.


ಸಂಪಾದನಾ ವರದಿ: ಡಿ.ಪಿ. ಅರವಿಂದ್



Post a Comment

Previous Post Next Post