7 ದಿನಗಳೊಳಗೆ ಕಡ್ಡಾಯವಾಗಿ ನೀರಿನ ಕಂದಾಯ ಪಾವತಿಸಿ: ತಪ್ಪಿದಲ್ಲಿ ಸಂಪರ್ಕ ಕಡಿತ
ಶಿವಮೊಗ್ಗ, ಜುಲೈ 18: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸವಿರುವ ನೀರಿನ ಬಳಕೆದಾರರು ಹಾಗೂ ಮನೆ ಮಾಲೀಕರುಗಳು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಮುಂದಿನ ಏಳು ದಿನಗಳೊಳಗೆ ಕಡ್ಡಾಯವಾಗಿ ಪಾವತಿಸಬೇಕೆಂದು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೀರಿನ ಕಂದಾಯವನ್ನು ನಿಗದಿತ ಅವಧಿಯೊಳಗೆ ಪಾವತಿಸದಿದ್ದಲ್ಲಿ ಸಂಬಂಧಿಸಿದ ಗ್ರಾಹಕರ ನೀರಿನ ಸಂಪರ್ಕವನ್ನು ಯಾವುದೇ ಮುನ್ಸೂಚನೆ ನೀಡದೇ ಕಡಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಹೀಗಾಗಿ, ನೀರಿನ ಬಳಕೆದಾರರು ಹಾಗೂ ಮನೆ ಮಾಲೀಕರುಗಳು ತಕ್ಷಣವೇ ತಮ್ಮ ಬಾಕಿ ಕಂದಾಯವನ್ನು ಪರಿಶೀಲಿಸಿ, ಏಳು ದಿನಗಳೊಳಗೆ ಪಾವತಿಸುವ ಮೂಲಕ ಅನಗತ್ಯ ತೊಂದರೆಗಳನ್ನು ತಪ್ಪಿಸಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ವರದಿ: ಡಿ.ಪಿ. ಅರವಿಂದ್

