ಕರವೇ ಸ್ವಾಭಿಮಾನಿ ಬಣದ ನೂತನ ಭದ್ರಾವತಿ ತಾಲೂಕು ಅಧ್ಯಕ್ಷರಾಗಿ ಪ್ರಭುಗೌಡ ನೇಮಕ
ವರದಿ: ಡಿ.ಪಿ. ಅರವಿಂದ್
ಭದ್ರಾವತಿ, ಜೂನ್ 2: ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಭದ್ರಾವತಿ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ತಾಲೂಕು ಗೌರವಾಧ್ಯಕ್ಷರಾಗಿ ಲಕ್ಷ್ಮಣ್ ಹಾಗೂ ತಾಲೂಕು ಅಧ್ಯಕ್ಷರಾಗಿ ಪ್ರಭುಗೌಡ ಅವರನ್ನು ಆಯ್ಕೆ ಮಾಡಿ ಆದೇಶ ಪತ್ರವನ್ನು ವಿತರಿಸಲಾಯಿತು.
ರಾಜ್ಯಾಧ್ಯಕ್ಷರ ಅನುಮತಿಯೊಂದಿಗೆ ಜಿಲ್ಲಾ ಸಮಿತಿಯು ಈ ನೇಮಕಾತಿಯನ್ನು ಅಂತಿಮಗೊಳಿಸಿದ್ದು, ನೂತನ ಪದಾಧಿಕಾರಿಗಳಿಗೆ ಕನ್ನಡ ನಾಡು, ನುಡಿ, ನೆಲ, ಜಲ ಹಾಗೂ ಭಾಷೆಯ ರಕ್ಷಣೆಗೆ ಬದ್ಧತೆಯಿಂದ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಲಾಯಿತು. ಜೊತೆಗೆ ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಬಡವರ ಹಕ್ಕುಗಳ ಪರವಾಗಿ ಸಂಘಟನೆ ಸದಾ ನಿಲ್ಲಬೇಕೆಂದು ಕರೆ ನೀಡಲಾಯಿತು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರು ಹಾಗೂ ಗೌರವಾಧ್ಯಕ್ಷರಿಗೆ ಸಂಘಟನೆಯನ್ನು ತಾಲೂಕು ಮಟ್ಟದಲ್ಲಿ ಇನ್ನಷ್ಟು ಬಲಪಡಿಸುವ ಜವಾಬ್ದಾರಿಯನ್ನು ನೀಡಲಾಗಿದ್ದು, ಹೊಸ ಸದಸ್ಯರು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಸಂಘಟನೆಯನ್ನು ವಿಸ್ತರಿಸುವಂತೆ ನಿರ್ದೇಶಿಸಲಾಯಿತು.
ಕಾರ್ಯಕ್ರಮದಲ್ಲಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಎಚ್.ಎಸ್., ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕವಿತಾ ಸಿ., ಜಿಲ್ಲಾ ಉಪಾಧ್ಯಕ್ಷ ಸೈಯದ್ ಮುಜಿಬುಲ್ಲ, ಗಂಗಾಧರ್, ವಿಜಯಕುಮಾರ್, ಜೈಕೃಷ್ಣ, ಮಾಧ್ಯಮ ಸಲಹೆಗಾರ ಡಿ.ಪಿ. ಅರವಿಂದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದಲ್ಲದೆ ಭದ್ರಾವತಿ ತಾಲೂಕಿನ ಪದಾಧಿಕಾರಿಗಳಾದ ನಾರಾಯಣರಾವ್, ಶಶಿಧರ್ ಮೂರ್ತಿ, ಕೃಷ್ಣಪ್ಪ, ಅಶೋಕ್, ಮಂಜುನಾಥ್, ಕೃಷ್ಣಮೂರ್ತಿ ಡ್ರೈವಿಂಗ್ ಸ್ಕೂಲ್, ಜೈರಾಜ್, ಲೋಕೇಶ್, ಮಂಜುನಾಥ್, ಇಮ್ರಾನ್, ಆರ್ಮುಗ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಕಾರ್ಯದರ್ಶಿ ಸಾಧಿಕ್ ಎ., ಜಿಲ್ಲಾ ಸಂಘಟನಾ ಸಹ ಕಾರ್ಯದರ್ಶಿ ನೂರುಲ್ಲಾ ನಗರ, ಯುವ ಘಟಕದ ಅಧ್ಯಕ್ಷ ಪ್ರವೀಣ್ ಕುಮಾರ್, ಕರವೇ ಮುಖಂಡ ಅನ್ಸರ್ ಅಹ್ಮದ್, ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷೆ ಪದ್ಮ, ನಗರ ಪ್ರಧಾನ ಕಾರ್ಯದರ್ಶಿ ಅನುಪಮ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ನೂತನವಾಗಿ ಆಯ್ಕೆಯಾದ ಪ್ರಭುಗೌಡ ಹಾಗೂ ಲಕ್ಷ್ಮಣ್ ಅವರು ಕನ್ನಡದ ಹಿತಾಸಕ್ತಿ, ಸಾಮಾಜಿಕ ನ್ಯಾಯ ಹಾಗೂ ಸಂಘಟನೆಯ ಉದ್ದೇಶಗಳ ಅನುಷ್ಠಾನಕ್ಕಾಗಿ ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.


