ತುಮಕೂರು–ಮಲ್ಲಸಂದ್ರ ಮಾರ್ಗದಲ್ಲಿ ಎಂಜಿನಿಯರಿಂಗ್ ಕಾಮಗಾರಿ: ಹಲವು ರೈಲುಗಳ ಪ್ರಮಾಣಿತ ಸೇವೆಯಲ್ಲಿ ಬದಲಾವಣೆ
ಎಫ್7 ನ್ಯೂಸ್ – ಬೆಂಗಳೂರು
ತುಮಕೂರು ಮತ್ತು ಮಲ್ಲಸಂದ್ರ ನಿಲ್ದಾಣಗಳ ನಡುವೆ ನಡೆಯುತ್ತಿರುವ ಅಗತ್ಯ ಎಂಜಿನಿಯರಿಂಗ್ ಕಾಮಗಾರಿಗಳ ಹಿನ್ನೆಲೆಯಲ್ಲಿ ಹಲವು ರೈಲುಗಳ ಸೇವೆಯಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ದಕ್ಷಿಣ ಪಶ್ಚಿಮ ರೈಲ್ವೆ ಪ್ರಕಟಿಸಿದೆ. ಭೀಮಸಂದ್ರ ಲಿಮಿಟೆಡ್ ಹೈಟ್ ಸಬ್’ವೇನಲ್ಲಿ ಗರ್ಡರ್ ಬದಲಾವಣೆ, ಭೀಮಸಂದ್ರ ಮತ್ತು ಮುದ್ದಲಿಂಗನಹಳ್ಳಿ ಹಾಲ್ಟ್ ನಿಲ್ದಾಣಗಳಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಹಾಗೂ ನಿಡವಂದ–ಹಿರೇಹಳ್ಳಿಯ ನಡುವೆ ಲೆವೆಲ್ ಕ್ರಾಸಿಂಗ್–28ರಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಣಾಮವಾಗಿ ಈ ಬದಲಾವಣೆಗಳನ್ನು ಜಾರಿಗೊಳಿಸಲಾಗಿದೆ.
I. ಸಂಪೂರ್ಣ ರದ್ದುಗೊಂಡ ರೈಲುಗಳು
17.12.2025 ಮತ್ತು 24.12.2025ರಂದು ಕೆಳಗಿನ ರೈಲುಗಳು ಸಂಪೂರ್ಣ ರದ್ದುಗೊಂಡಿವೆ:
-
16239 ಚಿಕ್ಕಮಗಳೂರು–ಯಶವಂತಪುರ ದೈನಂದಿನ ಎಕ್ಸ್‌ಪ್ರೆಸ್
-
16240 ಯಶವಂತಪುರ–ಚಿಕ್ಕಮಗಳೂರು ದೈನಂದಿನ ಎಕ್ಸ್‌ಪ್ರೆಸ್
-
12614 ಕೆಎಸ್ಆರ್ ಬೆಂಗಳೂರು–ಮೈಸೂರು ದೈನಂದಿನ ಎಕ್ಸ್‌ಪ್ರೆಸ್
II. ಭಾಗಶಃ ರದ್ದುಗೊಂಡ ರೈಲುಗಳು
ಕೆಳಗಿನ ದಿನಾಂಕಗಳಲ್ಲಿ ಕೆಲವು ರೈಲುಗಳ ಮಾರ್ಗದ ಭಾಗ ಮಾತ್ರ ರದ್ದುಗೊಂಡಿದೆ:
1. 66567 ಕೆಎಸ್ಆರ್ ಬೆಂಗಳೂರು–ತುಮಕೂರು ಮೆಮು
17, 20, 21, 24 ಡಿಸೆಂ. – ದೊಡ್ಡಬೆಲೆ–ತುಮಕೂರು ನಡುವೆ ರದ್ದು (ದೊಡ್ಡಬೆಲೆಯಲ್ಲೇ ಕೊನೆ).
2. 66572 ತುಮಕೂರು–ಕೆಎಸ್ಆರ್ ಬೆಂಗಳೂರು ಮೆಮು
ತುಮಕೂರು–ದೊಡ್ಡಬೆಲೆ ನಡುವೆ ರದ್ದು (ದೊಡ್ಡಬೆಲೆಯಿಂದ ಆರಂಭ).
3. 20652 ತಾಳಗುಪ್ಪ–ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್
ಅರಸೀಕೆರೆ–ಕೆಎಸ್ಆರ್ ಬೆಂಗಳೂರಿನ ನಡುವೆ ರದ್ದು (ಅರಸೀಕೆರೆಯಲ್ಲಿ ಕೊನೆ).
4. 12725 ಕೆಎಸ್ಆರ್ ಬೆಂಗಳೂರು–ಧಾರವಾಡ ಎಕ್ಸ್‌ಪ್ರೆಸ್
ಕೆಎಸ್ಆರ್ ಬೆಂಗಳೂರು–ಅರಸೀಕೆರೆ ನಡುವೆ ರದ್ದು (ಅರಸೀಕೆರೆಯಿಂದ ಆರಂಭ).
5. 12726 ಧಾರವಾಡ–ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್
ಅರಸೀಕೆರೆ–ಕೆಎಸ್ಆರ್ ಬೆಂಗಳೂರು ನಡುವೆ ರದ್ದು (ಅರಸೀಕೆರೆಯಲ್ಲಿ ಕೊನೆ).
6. 66571 ಕೆಎಸ್ಆರ್ ಬೆಂಗಳೂರು–ತುಮಕೂರು ಮೆಮು
ದೊಡ್ಡಬೆಲೆ–ತುಮಕೂರು ನಡುವೆ ರದ್ದು.
7. 66568 ತುಮಕೂರು–ಕೆಎಸ್ಆರ್ ಬೆಂಗಳೂರು ಮೆಮು
ತುಮಕೂರು–ದೊಡ್ಡಬೆಲೆ ನಡುವೆ ರದ್ದು (ದೊಡ್ಡಬೆಲೆಯಿಂದ ಆರಂಭ).
8. 56281 ಚಾಮರಾಜನಗರ–ತುಮಕೂರು ಪ್ಯಾಸೆಂಜರ್
ಚಿಕ್ಕಬಾಣಾವರ–ತುಮಕೂರು ನಡುವೆ ರದ್ದು (ಚಿಕ್ಕಬಾಣಾವರದಲ್ಲಿ ಕೊನೆ).
III. ಮಾರ್ಗ ಬದಲಾವಣೆಗಳು
ಕೆಲವು ರೈಲುಗಳು ತಮ್ಮ ನಿಯಮಿತ ನಿಲ್ದಾಣಗಳನ್ನು ಬಿಟ್ಟು ಬೇರೆಯ ಮಾರ್ಗದಲ್ಲಿ ಸಂಚರಿಸಲಿವೆ:
1. 17310 ವಾಸ್ಕೋ ಡ ಗಾಮ–ಯಶವಂತಪುರ ಎಕ್ಸ್‌ಪ್ರೆಸ್
16 ಮತ್ತು 23 ಡಿಸೆಂ. – ಅರಸೀಕೆರೆ–ಹಾಸನ–ನೆಲಮಂಗಲ ಮಾರ್ಗ (ತುಮಕೂರು/ತಿಪಟೂರು ನಿಲುಗಡೆ ಇಲ್ಲ).
2. 17316 ವೇಲಂಕಣಿ–ವಾಸ್ಕೋ ಡ ಗಾಮ ಎಕ್ಸ್‌ಪ್ರೆಸ್
ಚಿಕ್ಕಬಾಣಾವರ–ನೆಲಮಂಗಲ–ಹಾಸನ–ಅರಸೀಕೆರೆ ಮಾರ್ಗ (ತುಮಕೂರು/ತಿಪಟೂರು ನಿಲುಗಡೆ ಇಲ್ಲ).
3. 17326 ಮೈಸೂರು–ಬೆಳಗಾವಿ ಎಕ್ಸ್‌ಪ್ರೆಸ್
ಮೈಸೂರು–ಹಾಸನ–ಅರಸೀಕೆರೆ ಮಾರ್ಗ (ಪಾಂಡವಪುರ–ತಿಪಟೂರು ನಿಲುಗಡೆ ಇಲ್ಲ).
4. 16579 ಯಶವಂತಪುರ–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್
ಚಿಕ್ಕಬಾಣಾವರ–ನೆಲಮಂಗಲ–ಹಾಸನ–ಅರಸೀಕೆರೆ ಮಾರ್ಗ (ತುಮಕೂರು/ತಿಪಟೂರು ನಿಲುಗಡೆ ಇಲ್ಲ).
IV. ರೈಲುಗಳ ನಿಯಂತ್ರಣ (Delay Control)
ಕೆಲವು ರೈಲುಗಳು ಮಾರ್ಗಮಧ್ಯೆ ತಾತ್ಕಾಲಿಕವಾಗಿ ನಿಲ್ಲಿಸಲ್ಪಡಲಿವೆ:
-
17 ಮತ್ತು 24 ಡಿಸೆಂ. –
22685 ಯಶವಂತಪುರ–ಚಂಡೀಗಢ ಎಕ್ಸ್‌ಪ್ರೆಸ್
17309 ಯಶವಂತಪುರ–ವಾಸ್ಕೋ ಡ ಗಾಮ ಎಕ್ಸ್‌ಪ್ರೆಸ್
20651 ಕೆಎಸ್ಆರ್ ಬೆಂಗಳೂರು–ತಾಳಗುಪ್ಪ ಎಕ್ಸ್‌ಪ್ರೆಸ್
→ 15 ನಿಮಿಷ ನಿಯಂತ್ರಣೆ -
19 ಮತ್ತು 20 ಡಿಸೆಂ. –
17310 ವಾಸ್ಕೋ ಡ ಗಾಮ–ಯಶವಂತಪುರ ಎಕ್ಸ್‌ಪ್ರೆಸ್
→ 30 ನಿಮಿಷ ನಿಯಂತ್ರಣೆ
V. ಮರು-ವೇಳಾಪಟ್ಟಿ (Rescheduling)
ಕೆಲವು ರೈಲುಗಳು ತಡವಾಗಿ ಹೊರಡುವುದಾಗಿ ಪ್ರಕಟಿಸಲಾಗಿದೆ:
1. 15 ಮತ್ತು 22 ಡಿಸೆಂ.
-
19667 ಉದಯಪುರ ಸಿಟಿ–ಮೈಸೂರು ಹಮ್’ಸಫರ್ – 180 ನಿಮಿಷ ತಡ
-
22497 ಶ್ರೀ ಗಂಗಾನಗರ–ತಿರುಚ್ಚಿರಾಪಳ್ಳಿ ಹಮ್’ಸಫರ್ – 120 ನಿಮಿಷ ತಡ
(ಮಾರ್ಗಮಧ್ಯೆ 60 ನಿಮಿಷ ನಿಯಂತ್ರಣೆ)
2. 17 ಮತ್ತು 24 ಡಿಸೆಂ.
-
12649 ಯಶವಂತಪುರ–ಹಜರತ್ ನಿಜಾಮುದ್ದೀನ್ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್
-
56282 ತುಮಕೂರು–ಚಾಮರಾಜನಗರ ಪ್ಯಾಸೆಂಜರ್
-
12777 ಎಸ್ಎಸ್ಎಸ್ಎಸ್ ಹುಬ್ಬಳ್ಳಿ–ತಿರುವನಂತಪುರಂ ಸೂಪರ್ ಫಾಸ್ಟ್
→ ಎಲ್ಲವೂ 120 ನಿಮಿಷ ತಡವಾಗಿ ಹೊರಡಲಿವೆ
ಪ್ರಯಾಣಿಕರಿಗೆ ಸಲಹೆ
ರೈಲು ವೇಳಾಪಟ್ಟಿಯಲ್ಲಿ ಸಂಭವಿಸಿರುವ ಮಹತ್ವದ ಬದಲಾವಣೆ ಹಿನ್ನೆಲೆಯಲ್ಲಿ ಪ್ರಯಾಣಿಕರು ತಮ್ಮ ಪ್ರಯಾಣಕ್ಕೂ ಮುನ್ನ ರೈಲ್ವೆ ವೆಬ್‌ಸೈಟ್, NTES ಅಪ್ಲಿಕೇಶನ್ ಅಥವಾ ಸಮೀಪದ ರೈಲು ವಿಚಾರಣಾ ಕೇಂದ್ರದಲ್ಲಿ ನವೀಕೃತ ಮಾಹಿತಿ ಪರಿಶೀಲಿಸುವುದು ಅಗತ್ಯ.
DP.ARAVIND F7NEWS.IN


