ಪರಪ್ಪನ ಅಗ್ರಹಾರ ಜೈಲ್‌ನಲ್ಲಿ ‘ವೈನ್ ಫ್ಯಾಕ್ಟರಿ’ ಶಂಕೆ! ಕೈದಿಗಳೇ ಜೈಲಿನೊಳಗೆ ಮದ್ಯ ತಯಾರಿಕೆ ನಡೆಸುತ್ತಿದ್ದಾರಾ?
ಬೆಂಗಳೂರು ನಗರದ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್ ಇದೀಗ ಹೊಸ ವಿವಾದಕ್ಕೆ ಗುರಿಯಾಗಿದೆ. ಜೈಲಿನೊಳಗೆ ಕೈದಿಗಳೇ ವೈನ್ ಹಾಗೂ ಅಕ್ರಮ ಮದ್ಯ ತಯಾರಿಕೆ ನಡೆಸುತ್ತಿದ್ದಾರೆ ಎಂಬ ಗಂಭೀರ ಶಂಕೆಗಳು ಮೂಡಿವೆ. ಜೈಲಿನ ಭದ್ರತೆ, ಮೇಲ್ವಿಚಾರಣೆ, ಹಾಗೂ ಸಿಬ್ಬಂದಿಗಳ ಪಾತ್ರ ಕುರಿತಂತೆ ಈಗ ದೊಡ್ಡ ಪ್ರಶ್ನಾರ್ಧಗಳು ಎದ್ದಿವೆ.
ಮಾಹಿತಿ ಪ್ರಕಾರ, ಜೈಲಿನ ಕ್ಯಾಂಟೀನ್ ಮೂಲಕ ಬರುವ ಹಣ್ಣುಗಳು ಹಾಗೂ ಕೈದಿಗಳ ಭೇಟಿ ಸಮಯದಲ್ಲಿ ಹೊರಗಿನಿಂದ ತರಲಾಗುವ ಆಪಲ್, ದ್ರಾಕ್ಷಿ, ಪೈನ್ ಆ್ಯಪಲ್ ಮುಂತಾದ ಹಣ್ಣುಗಳನ್ನು ಬಳಸಿಕೊಂಡು ಅಕ್ರಮ ವೈನ್ ತಯಾರಿಕೆ ನಡೆಯುತ್ತಿದ್ದಂತೆ ತಿಳಿದು ಬಂದಿದೆ.
ಕೈದಿಗಳು ಹಣ್ಣುಗಳನ್ನು ಚೆನ್ನಾಗಿ ಜೆಜ್ಜಿಕೊಂಡು, ಅದಕ್ಕೆ ಯೀಸ್ಟ್ ಮಿಕ್ಸ್ ಮಾಡಿ, ನಂತರ ತಯಾರಾದ ಮಿಶ್ರಣವನ್ನು ಬಾಟಲಿಗಳಲ್ಲಿ ತುಂಬಿ, ಜೈಲಿನ ಆವರಣದಲ್ಲೇ ಭೂಮಿಯೊಳಗೆ ಹೂತುಬಿಟ್ಟು ಶೇಖರಣೆ ಮಾಡುತ್ತಿದ್ದಾರಂತೆ. ಸುಮಾರು ಮೂರು ದಿನಗಳ ನಂತರ ಬಾಟಲ್ ಓಪನ್ ಮಾಡಿದಾಗ ಅದು ಅಲ್ಕೋಹಾಲ್‌ಗೆ ಪರಿವರ್ತನೆ ಆಗುತ್ತಿದ್ದು, ಜೈಲಿನೊಳಗೆ ಗುಪ್ತವಾಗಿ ಬಳಕೆಯಾಗುತ್ತಿದ್ದಂತೆ ಮೂಲಗಳು ತಿಳಿಸಿವೆ.
ಇದಲ್ಲದೆ, ಕೆಲ ಕೈದಿಗಳು ಜೈಲಿನೊಳಗಿನ ವಸ್ತುಗಳನ್ನು ಬಳಸಿ ಎಣ್ಣೆ ತಯಾರಿಕೆಯಲ್ಲೂ ಪರಿಣತಿ ಹೊಂದಿದ್ದು, ಇದನ್ನೂ ಸೇಲ್ ಮಾಡುವ ಮಟ್ಟಿಗೆ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದಂಥ೦ತೆ.
ಜನ್ಮದಿನ, ಪಾರ್ಟಿ ಅಥವಾ ವಿಶೇಷ ದಿನಗಳು ಬಂದಾಗ ಕೈದಿಗಳು ತಿಂಗಳ ಮುಂಚೆಯೇ ಮದ್ಯ ತಯಾರಿಕೆಯ ದೊಡ್ಡ ಮಟ್ಟದ ಸಿದ್ಧತೆ ನಡೆಸುತ್ತಿದ್ದಾರಂಬ ಮಾಹಿತಿ ಹೊರಬಂದಿದೆ.
ಈ ಘಟನೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಜೈಲಿನ ಭದ್ರತೆ ಕುರಿತಂತೆ ಮತ್ತೊಮ್ಮೆ ಪ್ರಶ್ನೆಗಳು ಎದ್ದಿದ್ದು, ಜೈಲು ಅಧಿಕಾರಿಗಳ ಮೇಲೂ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಈ ಆರೋಪಗಳ ಬಗ್ಗೆ ಜೈಲು ಇಲಾಖೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

