No title

"ಸ್ವಚ್ಛತೆಯೇ ಆರೋಗ್ಯದ ಮೊದಲ ಹೆಜ್ಜೆ" – ಮೆಡಿಕಲ್ ಐಕಾನ್ಸ್ ತಂಡದಿಂದ ಸ್ವಚ್ಛತಾ ಅಭಿಯಾನ



ಶಿವಮೊಗ್ಗ:
ಮೆಡಿಕಲ್ ಐಕಾನ್ಸ್ ತಂಡದ ವತಿಯಿಂದ ಇಂದು ಔಷಧ ನಿಯಂತ್ರಕರ ಕಚೇರಿ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಅದನ್ನು ಯಶಸ್ವಿಯಾಗಿ ನೆರವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಔಷಧ ನಿಯಂತ್ರಕರಾದ ವೀರೇಶ್ ಬಾಬು ಅವರ ನೇತೃತ್ವದಲ್ಲಿ ಮೆಡಿಕಲ್ ಐಕಾನ್ಸ್ ಸದಸ್ಯರು ಹಾಗೂ ಹಲವಾರು ಗಣ್ಯರು ಪಾಲ್ಗೊಂಡು ಕೈಜೋಡಿಸಿದರು.

ಮುಂದಿನ ದಿನಗಳಲ್ಲಿ ಮೆಡಿಕಲ್ ಐಕಾನ್ಸ್ ತಂಡವು ಸಾರ್ವಜನಿಕ ಆಸ್ಪತ್ರೆ, ಸಾರ್ವಜನಿಕ ಉದ್ಯಾನವನ ಮತ್ತು ಸರ್ಕಾರಿ ಶಾಲೆಗಳಲ್ಲಿ ಇದೇ ರೀತಿಯ ಸ್ವಚ್ಛತಾ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಿದೆ. "ಸ್ವಚ್ಛತೆಯೇ ಆರೋಗ್ಯದ ಮೊದಲ ಹೆಜ್ಜೆ" ಎಂಬ ಸಂದೇಶದೊಂದಿಗೆ ಮುಂದುವರಿಯುತ್ತಿರುವ ಈ ತಂಡಕ್ಕೆ ನಗರದ ಜನರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

ಇಂದಿನ ಕಾರ್ಯಕ್ರಮದಲ್ಲಿ ಮಂಜುನಾಥ್ ಎಂ.ಎಲ್, ಗಿರೀಶ್, ಮಂಜುನಾಥ್ ನಂದೀಶ್, ವಾರದ್, ವಿನೋದ್, ಮಲ್ಲಿಕಾರ್ಜುನ, ನಾಗೇಂದ್ರ, ಅವಿನಾಶ್, ಪ್ರಶಾಂತ, ಜಯರಾಜ್, ರಘು ಸೇರಿದಂತೆ ಹಲವರು ಭಾಗವಹಿಸಿ ಕಾರ್ಯವನ್ನು ಯಶಸ್ವಿಗೊಳಿಸಿದರು.

ವರಿದಿ:ಡಿ.ಪಿ ಅರವಿಂದ್‌ ಎಫ್‌7ನ್ಯೂಸ್‌,ಶಿವಮೊಗ್ಗ




Post a Comment

Previous Post Next Post