ಬೆಳಗಾವಿಯಲ್ಲಿ ಲವ್‌ ಬರ್ಡ್ಸ್ ದಾರುಣ ಅಂತ್ಯ – ಪ್ರೇಯಸಿಗೆ ಚಾಕುವಿನಿಂದ 9 ಸಲ ಚುಚ್ಚಿ ತಾನೂ ಆತ್ಮಹತ್ಯೆ

ಬೆಳಗಾವಿಯಲ್ಲಿ ಲವ್‌ ಬರ್ಡ್ಸ್ ದಾರುಣ ಅಂತ್ಯ – ಪ್ರೇಯಸಿಗೆ ಚಾಕುವಿನಿಂದ 9 ಸಲ ಚುಚ್ಚಿ ತಾನೂ ಆತ್ಮಹತ್ಯೆ



ಬೆಳಗಾವಿ :
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ನಡೆದ ಭೀಕರ ಘಟನೆ ಸಂಪೂರ್ಣ ಪ್ರದೇಶವನ್ನು ಬೆಚ್ಚಿಬೀಳಿಸಿದೆ. ವಿವಾಹಿತನಾದ ಆನಂದ ಸುತಾರ್ (31) ತನ್ನ ಪ್ರೇಯಸಿ ರೇಷ್ಮಾ ತಿರವಿರ (29) ಅವರನ್ನು ನಿರ್ದಯವಾಗಿ ಚಾಕುವಿನಿಂದ ಒಂಬತ್ತು ಬಾರಿ ಚುಚ್ಚಿ ಕೊಲೆಗೈದ ಬಳಿಕ ತಾನೂ ಅದೇ ಚಾಕುವಿನಿಂದ ದೇಹಕ್ಕೆ ಇರಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಅನೈತಿಕ ಸಂಬಂಧವೇ ದಾರುಣ ಅಂತ್ಯಕ್ಕೆ ಕಾರಣ

ಒಂದೇ ಊರಿನ, ಒಂದೇ ಕಾಲನಿಯಲ್ಲಿ ವಾಸಿಸುತ್ತಿದ್ದ ಆನಂದ ಮತ್ತು ರೇಷ್ಮಾ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ನಂತರ ಮದುವೆಯಾದರೂ ಈ ಸಂಬಂಧ ಕೊನೆಗೊಂಡಿರಲಿಲ್ಲ. ಕಳೆದ ಮೂರು ವರ್ಷಗಳಿಂದ ಇಬ್ಬರೂ ಅನೈತಿಕ ಸಂಬಂಧವನ್ನು ಮುಂದುವರಿಸಿಕೊಂಡು ಬಂದಿದ್ದು, ಈ ಸಂಬಂಧವು ಕೊನೆಗೂ ಜೀವ ಹರಣದ ದುರಂತಕ್ಕೆ ಕಾರಣವಾಯಿತು.

Video



ಆನಂದ ಈಗಾಗಲೇ ಮದುವೆಯಾಗಿದ್ದು ಮೂರು ಮಕ್ಕಳ ತಂದೆಯಾಗಿದ್ದ. ಮತ್ತೊಂದೆಡೆ, ರೇಷ್ಮಾ ತಿರವಿರ ಕೂಡ ವಿವಾಹಿತೆಯಾಗಿದ್ದು, ಇಬ್ಬರು ಮಕ್ಕಳ ತಾಯಿಯಾಗಿದ್ದಳು. ಮದುವೆಯಾದ ಬಳಿಕವೂ ಈ ಸಂಬಂಧ ಗಾಢಗೊಂಡಿದ್ದು, ಹಲವು ಬಾರಿ ಕುಟುಂಬಸ್ಥರಿಗೂ ಶಂಕೆ ಮೂಡಿತ್ತು.

ಪತಿ ಹಿಡಿದ ‘ರೆಡ್ ಹ್ಯಾಂಡ್’

ಕಳೆದ ತಿಂಗಳಷ್ಟೇ ರೇಷ್ಮಾಳ ಪತಿ ಶೀವು ತಿರವಿರ ಈ ಸಂಬಂಧವನ್ನು ರೆಡ್ ಹ್ಯಾಂಡ್ ಹಿಡಿದು ಪೊಲೀಸರಿಗೆ ದೂರು ನೀಡಿದ್ದರು. ನಂದಗಡ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆದಿದ್ದು, ಆ ಸಂದರ್ಭದಲ್ಲಿ ಪೊಲೀಸರು ಆನಂದ ಸುತಾರ್‌ಗೆ ಎಚ್ಚರಿಕೆ ನೀಡಿದ್ದರು. ಈ ಬಳಿಕ ರೇಷ್ಮಾ ಆನಂದನಿಂದ ದೂರವಾಗಲು ನಿರ್ಧರಿಸಿದಳು. ಆದರೆ ಇದನ್ನೇ ಸಹಿಸಲಾಗದ ಆನಂದ, “ನನ್ನ ಪತ್ನಿಯಂತೆ ನೀನೂ ನನ್ನ ಮಾತು ಕೇಳಬೇಕು” ಎಂದು ರೇಷ್ಮಾಳನ್ನು ಹಿಂಸಿಸುತ್ತಿದ್ದನು.

ಹತ್ಯೆಯ ಭೀಕರ ಕ್ಷಣ

ಘಟನೆಯ ದಿನ ಮನೆಯ ಹಿಂಬಾಗಿಲಿನಿಂದ ನುಗ್ಗಿದ ಆನಂದ, ರೇಷ್ಮಾಳ ಮೇಲೆ ಬರ್ಬರ ದಾಳಿ ನಡೆಸಿದ. ಚಾಕುವಿನಿಂದ ಒಂಬತ್ತು ಬಾರಿ ಇರಿದು ಕೊಲೆಗೈದಿದ್ದು, ಈ ಭೀಕರ ದೃಶ್ಯವನ್ನು ರೇಷ್ಮಾಳ ಪುತ್ರಿಯೇ ಕಣ್ಣು ಮುಂದೆ ನೋಡಿದ್ದಳು. ರೇಷ್ಮಾ ನೆಲಕ್ಕುರಳಿ ಮೃತಪಟ್ಟ ತಕ್ಷಣ, ಆತಂಕಗೊಂಡ ಆನಂದ ತಾನೂ ಅದೇ ಚಾಕುವಿನಿಂದ ದೇಹಕ್ಕೆ ಇರಿದು ಆತ್ಮಹತ್ಯೆಗೆ ಶರಣಾದನು.

ಆಸ್ಪತ್ರೆಗೆ ದಾಖಲಿಸಿದರೂ ಫಲ ಇಲ್ಲ

ತೀವ್ರವಾಗಿ ರಕ್ತಸ್ರಾವಗೊಂಡಿದ್ದ ಆನಂದನನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಆತ ಮೃತ ಪಟ್ಟಿದ್ದಾನೆ.

ಅನಾಥರಾದ ಮಕ್ಕಳು

ಈ ದಾರುಣ ಘಟನೆಯಿಂದಾಗಿ ಇಬ್ಬರಿಗೂ ಸೇರಿದ ಐದು ಮಕ್ಕಳು ಈಗ ಅನಾಥರಾಗಿದ್ದಾರೆ. ಸಮಾಜದಲ್ಲಿ ತೀವ್ರ ಚರ್ಚೆಗೆ ಕಾರಣವಾದ ಈ ಪ್ರಕರಣ ಪ್ರೇಮ ಸಂಬಂಧಗಳ ಅತಿರೇಕ ಎಷ್ಟು ದಾರುಣ ಅಂತ್ಯಕ್ಕೆ ದಾರಿ ಮಾಡಿಕೊಡಬಹುದು ಎಂಬುದಕ್ಕೆ ನಿದರ್ಶನವಾಗಿದೆ.

ಪೊಲೀಸ್ ತನಿಖೆ ಮುಂದುವರಿಕೆ

ಘಟನೆಯ ಹಿನ್ನೆಲೆಯಲ್ಲಿ ನಂದಗಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಯ ಸಂಪೂರ್ಣ ವಿವರಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.


ವರದಿ:ಡಿ.ಪಿ ಅರವಿಂದ್‌ ಎಫ್‌7ನ್ಯೂಸ್‌ ಶಿವಮೊಗ್ಗ




Post a Comment

Previous Post Next Post