ಜನರು ಸತ್ತರೇನು ಬದುಕಿದರೇನು ನಮ್ಮ ರಾಜಕೀಯ ಮಾತ್ರ ನಡೆಯುತ್ತಲೇ ಇರಬೇಕು ಇಂಥ ರಾಜಕಾರಣಿಗಳು ನಮಗೆ ಬೇಕೆ...?
ಶಿವಮೊಗ್ಗ: ದಿನದಿಂದ ದಿನಕ್ಕೆ ಶಿವಮೊಗ್ಗ ನಗರ ಬೆಳೆಯುತ್ತಿದೆ, ಇದಕ್ಕೆ ತಕ್ಕಂತೆ ನಗರದ ಸಮಸ್ಯೆಗಳೂ ಕೂಡ ಹೆಚ್ಚಾಗುತ್ತಿದೆ. ಜನರ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಜವಾಬ್ದಾರಿಯನ್ನು ಹೊತ್ತಿರೋದು ಶಿವಮೊಗ್ಗ ಮಹಾನಗರ ಪಾಲಿಕೆ. ಜನರು ಪಾಲಿಕೆಗೆ ಹೋದರೇ ಸಾಕು ನಾವು ಇಲ್ಲಿ ಯಾಕಪ್ಪ ಬಂದಿದೇವೆ ಈ ಪಾಲಿಕೆಯಲ್ಲಿ ನಮ್ಮ ಯಾವ ಕೆಲಸಗಳು ಪೂರ್ಣವಾಗೋಲ್ಲಾ ನಾವು ಅಲೆದಾಡೋದು ಬಿಟ್ಟರೆ ನಮಗೆ ಮತ್ತೇನು ಲಾಭವಿಲ್ಲಾ ಅನ್ನೋ ಮನೋಭಾವಕ್ಕೆ ಶಿವಮೊಗ್ಗ ಜನರು ಬಂದಿದ್ದಾರೆ. ಇದು ಪಾಲಿಕೆಯ ಒಂದು ಮುಖವಾದರೆ, ಇದರ ಒಳ ಮರ್ಮವೇ ಬೇರಿಯದ್ದಾಗಿದೆ.
ಹೌದು ಶಿವಮೊಗ್ಗ ಮಹಾನಗರ ಪಾಲಿಕೆ ಎಂದರೆ ಜನರು ಹಿಡಿ ಶಾಪ ಹಾಕೋದೆ ಹೆಚ್ಚಾಗಿದೆ ನಮ್ಮ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುವುದಿಲ್ಲಾ ಎಂದು ಆರೋಪಗಳು ಜನರು ಮಾಡುತ್ತಾರೆ. ಆದರೆ ಪಾಲಿಕೆಯ ಅಸಲಿಯತ್ತೇ ಬೇರೆಯದ್ದಾಗಿದೆ ಅದು ಏನೆಂದರೆ ಇತ್ತೀಚಿನ ವರ್ಷಗಳಲ್ಲಿ ಶಿವಮೊಗ್ಗ ನಗರಪಾಲಿಕೆಯಲ್ಲಿ ಸಿಬ್ಬಂದಿಗಳು ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹೆಚ್ಚಿನ ಪ್ರಮಾಣದಲ್ಲಿ ನಿವೃತ್ತಿಯಾಗುತ್ತಿದ್ದಾರೆ. ಆದರೆ ಇದಕ್ಕೆ ಸರಿಹೊಂದುವAತೆ ಖಾಲಿಯಾಗಿರುವ ಹುದ್ದೆಗಳಿಗೆ ಸರ್ಕಾರದ ವತಿಯಿಂದ ಭರ್ತಿಕಾರ್ಯ ನಡೆಯುತ್ತಿಲ್ಲ.
ಒಂದು ಅಂದಾಜಿನ ಪ್ರಕಾರ ಶಿವಮೊಗ್ಗ ಮಹಾನಗರ ಪಾಲಿಕೆಗೆ ೧೬೫೦ ಜನ ಸಿಬ್ಬಂದಿಗಳ ಅಗತ್ಯವಿದ್ದು ಸಧ್ಯದ ಸಮಯದಲ್ಲಿ ಪಾಲಿಕೆಯಲ್ಲಿ ಕೆಲಸಾ ನಿರ್ವಹಿಸುತ್ತಿರುವ ಸಿಬ್ಬಂದಿ ಹಾಗೂ ಅಧಿಕಾರಿಗಳ ಸಂಖ್ಯೆ ಕೇವಲೆ ೩೦೦ ಮಾತ್ರ ಇಷ್ಟೋಂದು ಜನರ ಸಿಬ್ಬಂದಿಗಳ ಕೊರತೆ ಪಾಲಿಕೆಯಲ್ಲಿದ ಸದರ್ಭದಲ್ಲಿ ಆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ಎಷ್ಟು ಪ್ರಮಾಣದ ಕೆಲಸದ ಒತ್ತಡ ಇರಬಹುದು ಎಂದು ನೀವೇ ಅಂದಾಜಿಸಬಹುದು. ಸರ್ಕರ ದಿನದಿಂದ ದಿನಕ್ಕೆ ಹೊಸ-ಹೊಸೆ ಯೋಜನೆಗಳು ಹಾಗೂ ಅಭಿವೃದ್ದಿಯ ಹೆಸರಿಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತದೆ.
ಇನ್ನು ವರ್ಷ ೨೦೧೭ ಇಚೇಗೆ ಮಹಾನಗರ ಪಾಲಿಕೆಯಲ್ಲಿ ಅನುಕಂಪದ ಆಧಾರದ ಮೇಲೆ ಹುದ್ದೆಗೆ ಭರ್ತಿಮಾಡಿಕೊಳ್ಳುವುದು ಬಿಟ್ಟೆರೆ ಇದರುವರಗೂ ಯಾವುದೆ ಹೋಸ ಸಿಬ್ಬಂದಿಗಳನ್ನು ಸೇರ್ಪಡೆಮಾಡಿಕೊಂಡಿಲ್ಲಾ ಎನ್ನೋದು ಆಶ್ಚರ್ಯದ ಸಂಗತಿಯಾಗಿದೆ. ಇನ್ನು ನಮ್ಮ ಮಹಾನ್ ರಾಜಕಾರಣಿಗಳಿಗೆ ಯಾಕೆ ಕಣುವುದಿಲ್ಲಾ ಅನ್ನೋದೇ ಯಖ್ಷ ಪ್ರಶ್ನೆಯಾಗಿದೆ.
ಆದರೆ ಸರ್ಕರದ ಈ ಯೋನೆಗಳು ಜನರಿಗೆ ಎಷ್ಟರ ಮಟ್ಟಿಗೆ ತಲುಪುತ್ತಿದೆ ಎನ್ನುವುದರ ಬಗ್ಗೆ ನಮ್ಮ ರಾಜಕಾರಣಿಗಳು ಹಾಗೂ ಸರ್ಕಾರ ತಲೆಕೆಡಿಸಿಕೊಳ್ಳುವುದಿಲ್ಲ. ಈ ಕಾರಣಕ್ಕೆ ಸರ್ಕಾರದ ಯೋಜನೆಗಳು ಕೇವಲ ಧಾಖಲೆಗಳಲ್ಲಿ ಮಾತ್ರ ಕಂಡುಬರುತ್ತದೇಯೇ ಹೊರತು ವಾಸ್ಥವದಲ್ಲಿ ಜನಸಾಮಾನ್ಯರ ಮಟ್ಟದಲ್ಲಿ ತಲುಪುವುದೇ ಇಲ್ಲಾ. ನಮ್ಮನ್ನಾಳುವ ರಾಜಕಾರಣಿಗಳು ಕಣ್ಣಿಗೆ ಪಟ್ಟಿಕಟ್ಟಿಕೊಂಡು ಜಾಣ ಕುರುಡತನ ತೋರಿಸಿ, ನಾನು ನೂರಾರು ಹೋಸ ಯೋಜನೆಗಳನ್ನು ಜಾರಿಗೆ ತಂದಿದೇವೆ ಆದರೆ ಅಧಿಕಾರಿಗಳ ನಿರ್ಲಕ್ಷೆಯಿಂದ ಜನರಿಗೆ ತಲುಪುತ್ತಿಲ್ಲಾ ಎಂದು ಪುಕ್ಕಟೆ ಆರೋಪ ಮಾಡಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ.
ಇನ್ನು ಸ್ವಚ್ಚತಾ ಕಾರ್ಮಿಕರ ವಿಷಯಕ್ಕೆ ಬಂದರೆ ಶಿವಮೊಗ್ಗ ನಗರಕ್ಕೆ ಒಟ್ಟು ೮೩೦ ಕೆಲಸಾ ನಿರ್ವಹಿಸುತ್ತಿದ್ದು. ಇದರಲ್ಲಿ ಕಾಯಂ ಸ್ವಾಚ್ಚಾತಾ ಕಾರ್ಮಿಕರು ಕೆಲವೇ ಮಂದಿಯಿದ್ದು ಬಹುತೇಕ ಜನರು ಇನ್ನು ವರೆಗೆ ತಮ್ಮ ಕೆಲಸದ ಕಾಯಂ ಗಾಗಿ ಕಾಯುತ್ತಲೇ ಇದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಅಧಿಕಾರಿಗಳು ತಾವು ಕೆಲಸಾ ಮಾಡುವ ಮನೋಭಾವವಿರದ್ದು ಜನರ ಕೆಲಸ ಸರಿಯಾದ ರೀತಿಯಲ್ಲಿ ನಿರ್ವಹಿಸುವುದು ಸಾಧ್ಯವಾಗದ ಮಾತಾಗಿದೆ ಎಂದು ಜನರು ಮಾತನಾಡುತ್ತಿದ್ದಾರೆ.
ಒಟ್ಟಾರೆ ನಮ್ಮನಾಳುವ ನಾಯಕರು ಜನರು ಎಂದಿಗೂ ಸಮಸ್ಯೆಯ ಸುಳಿಯಲ್ಲೇ ಇವರಬೇಕು ಈ ಸಮಸ್ಯೆಗಳನ್ನು ಮತ್ತದೇ ಜನರ ಮುಂದೆ ಇಟ್ಟು ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಬೇಕು! ಇಂಥ ಜನನಾಯಕರಿಂದ ನಮ್ಮ ಜನರು ಏಷ್ಟರ ಮಟ್ಟಿಗೆ ಒಳ್ಳಯ ಆಡಳಿತವನ್ನು ಬಯಸಬಹುದು ಎನ್ನುವುದು ಸ್ವತಹಾ ಜನರೇ ತೀರ್ಮಾನ ಮಾಡಬೇಕಿದೆ.
ವರದಿ: ಡಿ.ಪಿ ಅರವಿಂದ್
ಎಫ್೭ನ್ಯೂಸ್ ಶಿವಮೊಗ್ಗ

