ಶಿರಾಳಕೊಪ್ಪದಲ್ಲಿ ಬೈಕ್ ಕಳವು ಪ್ರಕರಣ-ಆರೋಪಿತ ಬಂಧನ ಹಾಗೂ ವಾಹನ ವಶಪಡಿಕೆ

 

ಶಿರಾಳಕೊಪ್ಪದಲ್ಲಿ ಬೈಕ್ ಕಳವು ಪ್ರಕರಣ – ಶಿಕಾರಿಪುರ ಪೊಲೀಸ್ ತಂಡದಿಂದ ಅಪರೂಪದ ಕಾರ್ಯಕ್ಷಮತೆ, ಆರೋಪಿತ ಬಂಧನ ಹಾಗೂ ವಾಹನ ವಶಪಡಿಕೆ




ಶಿರಾಳಕೊಪ್ಪ, 21 ಫೆಬ್ರವರಿ 2025 – ಶಿರಾಳಕೊಪ್ಪ ಟೌನ್‌ನ ಮಠದಗದ್ದೆ ವಾಸಿಯಾಗಿರುವ ಶ್ರೀ ಇನಾಯತ್ ವುಲ್ಲಾ (38 ವರ್ಷದವರು), ತಮ್ಮ ಹಿರೋ ಸ್ಪ್ಲೆಂಡರ್ ಪ್ರೋ ಬೈಕನ್ನು ದಿನಾಂಕ 21-02-2025 ರಂದು ಟೌನ್‌ನ ಆನವಟ್ಟಿ ರಸ್ತೆಯ ಬದಿಯಲ್ಲಿ ನಿಲ್ಲಿಸಿ ಹೋಗಿದ್ದರು. bike ಅನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆಂದು ಅವರು ನೀಡಿದ ದೂರಿನ ಮೇರೆಗೆ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 0071/2025, ಕಲಂ: 303(2) ಬಿ.ಎನ್.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಪ್ರಾರಂಭವಾಗಿದೆ.

ಈ ಪ್ರಕರಣದ ತನಿಖೆಗಾಗಿ ಶ್ರೀ ಮಿಥುನ್ ಕುಮಾರ್ ಜಿ.ಕೆ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ, ಶ್ರೀ ಅನಿಲ್ ಕುಮಾರ್ ಭೂಮರಡ್ಡಿ (ಹೆಚ್ಚುವರಿ ಪೊಲೀಸ್ ಅಧೀಕ್ಷಕರು–1) ಮತ್ತು ಶ್ರೀ ಎ.ಜಿ. ಕಾರಿಯಪ್ಪ (ಹೆಚ್ಚುವರಿ ಪೊಲೀಸ್ ಅಧೀಕ್ಷಕರು–2) ರವರ ಮಾರ್ಗದರ್ಶನದಲ್ಲಿ, ಶ್ರೀ ಕೇಶವ ಕೆ.ಇ. (ಪೊಲೀಸ್ ಉಪಾಧೀಕ್ಷಕರು – ಶಿಕಾರಿಪುರ ಉಪ ವಿಭಾಗ) ರವರ ಮೇಲ್ವಿಚಾರಣೆಯಲ್ಲಿ, ಶ್ರೀ ಸಂತೋಷ್ ಪಾಟೀಲ್ (ಸಿಪಿಐ, ಶಿಕಾರಿಪುರ ವೃತ್ತ) ರವರು ಮತ್ತು ಶ್ರೀ ಪ್ರಶಾಂತ್ ಕುಮಾರ ಟಿ.ಬಿ (ಪಿಎಸ್‌ಐ, ಶಿರಾಳಕೊಪ್ಪ ಪೊಲೀಸ್ ಠಾಣೆ) ರವರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಯಿತು.

ಈ ತಂಡದಲ್ಲಿ ಸಿಬ್ಬಂದಿಗಳಾದ ಸಿ.ಹೆಚ್.ಸಿ – ಸಂತೋಷಕುಮಾರ ಆರ್, ಸಿ.ಪಿ.ಸಿ – ರಾಕೇಶ್ ಜಿ ಮತ್ತು ಸಲ್ಮಾನ್ ಖಾನ್ ಹಾಜಿ ಅವರುಗಳನ್ನೊಳಗೊಂಡು ನಿರಂತರ ಶ್ರಮದ ಫಲವಾಗಿ ಪ್ರಕರಣದ ಪ್ರಮುಖ ಆರೋಪಿತನಾದ ಅಬ್ದುಲ್ ಖಾಧರ್ @ ಸಮೀರ್ (20 ವರ್ಷ, ವಾಸ: ಆಜಾದ್ ನಗರ, ಆನವಟ್ಟಿ ಟೌನ್) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿತನಿಂದ ಅಂದಾಜು ಮೌಲ್ಯ ರೂ.30,000/- ಇರುವ ಹಿರೋ ಸ್ಪ್ಲೆಂಡರ್ ಪ್ರೋ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಈ ಯಶಸ್ವೀ ಕಾರ್ಯಚಟುವಟಿಕೆಗೆ ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ತನಿಖಾ ತಂಡದ ಕಾರ್ಯಕ್ಷಮತೆಗೆ ಪ್ರಶಂಸೆ ವ್ಯಕ್ತಪಡಿಸಿ, ತಂಡದ ಎಲ್ಲಾ ಸದಸ್ಯರನ್ನು ಅಭಿನಂದಿಸಿದ್ದಾರೆ.

ವರದಿ: ಡಿ.ಪಿ. ಅರವಿಂದ್




Post a Comment

Previous Post Next Post