ಶಿವಮೊಗ್ಗ ಗಾಜನೂರು ಸರ್ಕಾರಿ ಐಟಿಐಯಿಂದ ಪ್ರವೇಶಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ – ಮೇ 28ರೊಳಗೆ ಅರ್ಜಿ ಸಲ್ಲಿಸಿ
ಶಿವಮೊಗ್ಗ, ಮೇ 15
ಶಿವಮೊಗ್ಗ ತಾಲೂಕಿನ ಗಾಜನೂರು ಗ್ರಾಮದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮಹಿಳಾ) ಇವು 2025–26ನೇ ಶೈಕ್ಷಣಿಕ ವರ್ಷದ ಎನ್.ಸಿ.ವಿ.ಟಿ ಯೋಜನೆಯಡಿಯಲ್ಲಿ ಐಟಿಐ ಕೋರ್ಸುಗಳಿಗೆ ಪ್ರವೇಶ ಪಡೆಯಲು ಆಸಕ್ತರಾದ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
2 ವರ್ಷಗಳ ಅವಧಿಯ ಕೋರ್ಸುಗಳು:
-
ಎಲೆಕ್ಟ್ರಿಷಿಯನ್
-
ಎಲೆಕ್ಟಾನಿಕ್ಸ್ ಮೆಕ್ಯಾನಿಕ್
-
ಫಿಟ್ಟರ್
-
ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್
-
ವರ್ಚುವಲ್ ಅನಾಲಿಸಿಸ್ ಅಂಡ್ ಡಿಸೆನರ್
-
ಸಿಎನ್‌ಸಿ ಮೆಷಿನಿಂಗ್ ಟೆಕ್ನಿಷಿಯನ್
-
ಇಂಡಸ್ಟ್ರೀಯಲ್ ರೋಬೊಟಿಕ್ಸ್ ಅಂಡ್ ಡಿಜಿಟಲ್ ಮ್ಯಾನುಫ್ಯಾಕ್ಟರಿಂಗ್
-
ಮ್ಯಾನುಫ್ಯಾಕ್ಚರಿಂಗ್ ಪ್ರೋಸೆಸ್ ಕಂಟ್ರೋಲ್ ಅಂಡ್ ಆಟೋಮೇಷನ್
1 ವರ್ಷಗಳ ಅವಧಿಯ ಕೋರ್ಸುಗಳು:
-
ಸಿಓಪಿಎ (ಕಂಪ್ಯೂಟರ್ ಆಪರೇಟರ್ ಅಂಡ್ ಪ್ರೋಗ್ರಾಮಿಂಗ್ ಅಸಿಸ್ಟೆಂಟ್)
-
ಇಂಜಿನಿಯರಿಂಗ್ ಡಿಸೈನ್ ಟೆಕ್ನಿಷಿಯನ್
ಅರ್ಜಿಗಾಗಿ ಅಗತ್ಯ ದಾಖಲೆಗಳು:
ಎಸ್.ಎಸ್.ಎಲ್.ಸಿ. ಅಂಕಪಟ್ಟಿ, ಜಾತಿ ಹಾಗೂ ಆದಾಯ ಪ್ರಮಾಣ ಪತ್ರ, ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ, ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಇತ್ತೀಚಿನ 2 ಪಾಸ್‌ಪೋರ್ಟ್ ಸೈಸ್ ಭಾವಚಿತ್ರಗಳು ಹಾಗೂ ಇತರೆ ಮೂಲ ದಾಖಲೆಗಳು ಪರಿಶೀಲನೆಗಾಗಿ ತಂದುಕೊಡಬೇಕಾಗಿರುತ್ತದೆ.
ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: ಮೇ 28, 2025
ಅರ್ಜಿ ಸಲ್ಲಿಸಲು ವೆಬ್‌ಸೈಟ್: www.cite.karnataka.gov.in
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮಹಿಳಾ),
ಗಾಜನೂರು, ಶಿವಮೊಗ್ಗ ತಾಲೂಕು
ದೂರವಾಣಿ: 9448722232

