"ಶಿವಮೊಗ್ಗದ ಯುವತಿ ಬ್ರಹ್ಮಾವರದಲ್ಲಿ ನಾಪತ್ತೆ – ಮಾಹಿತಿ ನೀಡಲು ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ಮನವಿ"
ಶಿವಮೊಗ್ಗ, ಏಪ್ರಿಲ್ 24:
ಹೊನ್ನೆತಾಳು ಗ್ರಾಮದ ನಿವಾಸಿ ಸುರೇಶ್ ಎಂಬುವವರ 19 ವರ್ಷದ ಮಗಳು ಪ್ರಿಯಾಂಕ ಅಲಿಯಾಸ್ ಪಾರ್ವತಿ ಎಂಬ ಯುವತಿ ಕಳೆದ ಏಪ್ರಿಲ್ 21 ರಂದು ಬೆಳಿಗ್ಗೆ 9 ಗಂಟೆಗೆ ಬ್ರಹ್ಮಾವರದತ್ತ ತೆರಳಿದಾಗಿನಿಂದ ನಾಪತ್ತೆಯಾಗಿದ್ದಾಳೆ. ಈಕೆ ಬ್ರಹ್ಮಾವರದಲ್ಲಿರುವ ಸತ್ಯನಾಥ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು.
ಪ್ರಿಯಾಂಕ ಮನೆಗೆ ಹೇಳಿ ಹೊರಟ್ಟಿದರೂ ಇವರೆಗೆ ವಾಪಸ್ಸು ಬಂದಿಲ್ಲ ಎಂದು ಕುಟುಂಬದವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಈಕೆಯ ಚಹರೆ – ತೆಳುವಾದ ಮೈಕಟ್ಟು, ಎತ್ತರ ಸುಮಾರು 4 ಅಡಿ 5 ಇಂಚು, ಕೋಲುಮುಖ ಹೊಂದಿದ್ದು, ತಲೆಯ ಮೇಲೆ ಸುಮಾರು 14 ಇಂಚು ಉದ್ದದ ಕಪ್ಪು ಕೂದಲಿರುತ್ತವೆ. ಎಡ ಕೈ ಮುಂಗೈ ಮೇಲೆ MOM DAD ಮತ್ತು Priya ಎಂಬ ಇಂಗ್ಲೀಷ್ ಹಚ್ಚೆ ಇದೆ. ಕನ್ನಡ ಭಾಷೆಯಲ್ಲಿ ಮಾತನಾಡಲು, ಓದಲು ಹಾಗೂ ಬರೆಯಲು ಸಾಧ್ಯವಿರುವ ಈಕೆ ಮನೆಯಿಂದ ಹೋಗುವ ಸಮಯದಲ್ಲಿ ಗುಲಾಬಿ ಬಣ್ಣದ ಚೂಡಿದಾರ ಧರಿಸಿದ್ದಳು ಎಂದು ತಿಳಿದುಬಂದಿದೆ.
ಪ್ರಿಯಾಂಕನ ಬಗ್ಗೆ ಯಾವುದೇ ಮಾಹಿತಿ ಲಭ್ಯವಿದ್ದರೆ, ಸಾರ್ವಜನಿಕರು ಕೂಡಲೇ ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ:
-
ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿ – 08182-261400
-
ತೀರ್ಥಹಳ್ಳಿ ಪೊಲೀಸ್ ಠಾಣೆ – 08181–220388
-
ಮಾಳೂರು ಪೊಲೀಸ್ ಠಾಣೆ – 9480803333
-
ಆಗೂಂಬೆ ಪೊಲೀಸ್ ಠಾಣೆ – 9480803314
ಈ ಯುವತಿಯ ಪತ್ತೆಗೆ ಸಹಕರಿಸುವ ಮೂಲಕ ಮಾನವೀಯತೆ ಮೆರೆದಿರಲು ಸಾರ್ವಜನಿಕರನ್ನು ಪೊಲೀಸ್ ಇಲಾಖೆ ಮನವಿ ಮಾಡಿದೆ.
ವರದಿ: ಡಿ.ಪಿ. ಅರವಿಂದ್
ಎಫ್7 ನ್ಯೂಸ್, ಶಿವಮೊಗ್ಗ

