No title

ಅಟ್ಲಾಂಟಿಕ್ ಮಹಾಸಾಗರವನ್ನು ಏಕಾಂಗಿಯಾಗಿ ದಾಟಿದ ಅನನ್ಯ ಪ್ರಸಾದ್‌ ಅವರಿಗೆ ಮುಖ್ಯಮಂತ್ರಿ ಅಭಿನಂದನೆ




ಬೆಂಗಳೂರು: ಅಟ್ಲಾಂಟಿಕ್ ಮಹಾಸಾಗರವನ್ನು ಸತತ 52 ದಿನಗಳ ಕಾಲ ಏಕಾಂಗಿಯಾಗಿ ರೋವಿಂಗ್ ಮಾಡುತ್ತಾ ದಾಟಿ ಅಪರೂಪದ ಸಾಧನೆ ಮಾಡಿದ ಅನನ್ಯ ಪ್ರಸಾದ್ ಅವರು ಇಂದು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಈ ಸಂದರ್ಭ ಮುಖ್ಯಮಂತ್ರಿಗಳು ಅನನ್ಯ ಪ್ರಸಾದ್ ಅವರ ಶೌರ್ಯ ಮತ್ತು ಸಂಕಲ್ಪ ಶಕ್ತಿಯನ್ನು ಶ್ಲಾಘಿಸಿ, ಅವರಿಗೆ ಶುಭ ಹಾರೈಸಿದರು.

ಅನನ್ಯ ಪ್ರಸಾದ್ ಅವರು ಕನ್ನಡದ ಖ್ಯಾತ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಮೊಮ್ಮಗಳು ಆಗಿದ್ದು, ಅವರು ಈ ಸಾಹಸವನ್ನು ಅನಾಥ ಮಕ್ಕಳ ಶಿಕ್ಷಣಕ್ಕಾಗಿ ತೊಡಗಿಸಿಕೊಂಡ ದೀನಬಂಧು ಶಾಲೆಯ ಮಕ್ಕಳ ಭವಿಷ್ಯಕ್ಕೆ ಬೆಂಬಲದ ನಿರ್ಧಾರದಿಂದ ಮಾಡಿರುವುದು ವಿಶೇಷ. ಚಾಮರಾಜನಗರ ಜಿಲ್ಲೆಯ ರಾಮಸಮುದ್ರದಲ್ಲಿರುವ ದೀನಬಂಧು ಶಾಲೆಯ ಅನಾಥ ಮಕ್ಕಳಿಗಾಗಿ ಈ ಸಾಹಸಕ್ಕೆ ಕೈಹಾಕಿದ ಅನನ್ಯ ಅವರ ಸಾಮಾಜಿಕ ಕಾಳಜಿಯನ್ನು ಮುಖ್ಯಮಂತ್ರಿಗಳು ಮೆಚ್ಚಿ ಪ್ರಶಂಸಿಸಿದರು.

ಅನನ್ಯ ಪ್ರಸಾದ್ ಅವರ ಈ ಸಾಧನೆಯು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದು, ಅವರ ಆತ್ಮವಿಶ್ವಾಸ, ಶ್ರಮ ಮತ್ತು ಪ್ರತಿಜ್ಞೆ ಇತರರಿಗೂ ಪ್ರೇರಣೆಯಾಗಿದೆ.

ವರದಿ: ಡಿ.ಪಿ. ಅರವಿಂದ್



Post a Comment

Previous Post Next Post