No title

 

ಹಳೆ ದ್ವೇಷದ ಕಾರಣಕ್ಕೆ ಕೊಲೆ – ಆರೋಪಿಗೆ ಜೀವಾವಧಿ ಶಿಕ್ಷೆ





- ಶಿವಮೊಗ್ಗ ಘನ ನ್ಯಾಯಾಲಯದ ತೀರ್ಪು -

ಶಿವಮೊಗ್ಗ, ಮಾರ್ಚ್ 12 :
ಹಳೆ ದ್ವೇಷದ ಹಿನ್ನೆಲೆಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿರುವುದಾಗಿ ಶಿವಮೊಗ್ಗ ಘನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಘಟನೆ ವಿವರ:

2021ರ ಅಕ್ಟೋಬರ್ 14ರ ರಾತ್ರಿ ಶಿವಮೊಗ್ಗದ ಬಾಪೂಜಿ ನಗರ ಗಂಗಾಮಾತ ಹಾಸ್ಟೆಲ್ ಮುಂಭಾಗ ಸಂತೋಷ್ ಪಿ.ಕೆ. (30) ಎಂಬುವವನನ್ನು ಆರೋಪಿ ಅನಿಲ್ ಹಾಗೂ ಅವನ ಸಹಚರರು ಮಚ್ಚಿನಿಂದ ತಲೆಗೆ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ಮೃತನ ತಂದೆ ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು (ಗುನ್ನೆ ಸಂಖ್ಯೆ 0130/2021, ಕಲಂ 302 ಐಪಿಸಿ).

ಪೊಲೀಸರು ನಡೆಸಿದ ತನಿಖೆ:

ಪ್ರಕರಣದ ತನಿಖೆಯನ್ನು ಆಗಿನ ತನಿಖಾಧಿಕಾರಿ ಶ್ರೀ ಚಂದ್ರಶೇಖರ್ ಟಿ.ಕೆ, ಪಿ.ಐ ಕೋಟೆ ಪೊಲೀಸ್ ಠಾಣೆ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು. ಆರೋಪಿತರ ವಿರುದ್ಧ ತನಿಖೆ ಪೂರೈಸಿದ ಬಳಿಕ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಲಾಯಿತು.

ನ್ಯಾಯಾಲಯದ ತೀರ್ಪು:

ಶಿವಮೊಗ್ಗ ಘನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ಸರ್ಕಾರದ ಪರವಾಗಿ ಶ್ರೀ ಸುರೇಶ್ ಕುಮಾರ್ ಎ.ಎಂ., ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದರು. ಸಾಕ್ಷ್ಯ, ಪುರಾವೆಗಳ ಆಧಾರದ ಮೇಲೆ ಅಭಿಯೋಗ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಶ್ರೀ ಮಂಜುನಾಥ್ ನಾಯಕ್ ಅವರವರು ದಿನಾಂಕ ಮಾರ್ಚ್ 12, 2025 ರಂದು ತೀರ್ಪು ಪ್ರಕಟಿಸಿದರು.

ಆರೋಪಿಗೆ ವಿಧಿಸಿದ ಶಿಕ್ಷೆ:

  • ಪ್ರಧಾನ ಆರೋಪಿ ಅನಿಲ್ ಕುಮಾರ್ ಕೆ. (27), ಎ.ಎ. ಕಾಲೋನಿ, ಶಿವಮೊಗ್ಗ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
  • ರೂ. 50,000 ದಂಡ ವಿಧಿಸಲಾಗಿದ್ದು, ದಂಡ ಕಟ್ಟಲು ವಿಫಲವಾದರೆ ಹೆಚ್ಚುವರಿ 06 ತಿಂಗಳ ಸಾಧಾ ಕಾರಾವಾಸ ಶಿಕ್ಷೆ ಅನುಭವಿಸಬೇಕಾಗುತ್ತದೆ.
  • ಪರಿಹಾರ ರೂಪದಲ್ಲಿ ದಂಡದ ಮೊತ್ತದಲ್ಲಿ ರೂ. 25,000ನ್ನು ಮೃತನ ತಂದೆಗೆ ನೀಡುವಂತೆ ಆದೇಶಿಸಲಾಗಿದೆ.

ಈ ತೀರ್ಪು ಪೀಡಿತರ ಕುಟುಂಬಕ್ಕೆ ನ್ಯಾಯ ದೊರೆಸಿದ್ದು, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಈ ಪ್ರಕರಣ ಮಾದರಿಯಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ವರದಿ: ಡಿ.ಪಿ. ಅರವಿಂದ್



Post a Comment

Previous Post Next Post