SDPI ಶಿವಮೊಗ್ಗ ಜಿಲ್ಲಾ ಸಮಿತಿ ನೂತನ ನೇಮಕಾತಿ: ಜೀಲಾನ್ ಖಾನ್ ಅಧ್ಯಕ್ಷರಾಗಿ ಆಯ್ಕೆ

 SDPI ಶಿವಮೊಗ್ಗ ಜಿಲ್ಲಾ ಸಮಿತಿ ನೂತನ ನೇಮಕಾತಿ: ಜೀಲಾನ್ ಖಾನ್ ಅಧ್ಯಕ್ಷರಾಗಿ ಆಯ್ಕೆ‌



ಶಿವಮೊಗ್ಗ, 26 ಫೆಬ್ರವರಿ 2025:

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ ಜಿಲ್ಲಾ ಪ್ರತಿನಿಧಿಗಳ ಸಭೆ ಇಂದು ನಗರದ ಬೈಪಾಸ್ ರಸ್ತೆಯ ತಾಹಾ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ ತಾಲ್ಲೂಕು ಮತ್ತು ನಗರ ಸಮಿತಿಗಳ ಪ್ರತಿನಿಧಿಗಳು ಭಾಗವಹಿಸಿದರು.

ರಾಜ್ಯ ಕಾರ್ಯದರ್ಶಿ ಅಂಗಡಿ ಚಂದ್ರು ಮತ್ತು ರಾಜ್ಯ ನಾಯಕ ಅಕ್ರಮ್ ಮೈಸೂರು ಮುಖ್ಯ ಅತಿಥಿಗಳಾಗಿ ಸಭೆಯಲ್ಲಿ ಪಾಲ್ಗೊಂಡರು. ಕಳೆದ ಮೂರು ವರ್ಷಗಳ ಅವಧಿಯ ವರದಿ ಮಂಡನೆಯಾದ ನಂತರ, 2024-2027ರ ಅವಧಿಗೆ ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಯಿತು.




ನೂತನ ಜಿಲ್ಲಾ ಸಮಿತಿ ಸದಸ್ಯರು:

  • ಜಿಲ್ಲಾಧ್ಯಕ್ಷರು: ಜೀಲಾನ್ ಖಾನ್
  • ಉಪಾಧ್ಯಕ್ಷರು: ದೇವೇಂದ್ರ ಪಾಟಿಲ್ ಮತ್ತು ಸಲೀಂ ಖಾನ್
  • ಪ್ರಧಾನ ಕಾರ್ಯದರ್ಶಿಗಳು: ಇಮ್ರಾನ್ ಅಹ್ಮದ್ ಮತ್ತು ಅಬ್ದುಲ್ ಜಮೀರ್
  • ಕಾರ್ಯದರ್ಶಿ: ಮನ್ಸೂರ್ ಖಾನ್
  • ಖಜಾಂಚಿ: ರಹೀಂ ಖಾನ್
  • ಸಮಿತಿ ಸದಸ್ಯರು: ಇಸಾಕ್ ಅಹ್ಮದ್ ಮತ್ತು ಕಲೀಂ ಉಲ್ಲಾ

ಈ ಹೊಸ ಸಮಿತಿ, ಮುಂಬರುವ ಮೂರು ವರ್ಷಗಳ ಅವಧಿಯಲ್ಲಿ ಪಕ್ಷದ ಕಾರ್ಯಚಟುವಟಿಕೆಗಳನ್ನು ಮುನ್ನಡೆಸಲಿದೆ.

ಈ ಸಭೆಯು ಪಕ್ಷದ ಭವಿಷ್ಯ ಯೋಜನೆಗಳನ್ನು ಚರ್ಚಿಸಲು ಮತ್ತು ಸಂಘಟನೆಯ ಬಲವರ್ಧನೆಗೆ ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ.

ವರದಿ: ಡಿ.ಪಿ ಅರವಿಂದ್

Post a Comment

Previous Post Next Post