ಶಿವಮೊಗ್ಗದಲ್ಲೊಂದು ವಿಭಿನ್ನ ನಾಟಕ ಪ್ರದರ್ಶನ

 ಶಿವಮೊಗ್ಗದಲ್ಲೊಂದು ವಿಭಿನ್ನ ನಾಟಕ ಪ್ರದರ್ಶನ

ಶಿವಮೊಗ್ಗ: ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಅಕ್ಟೋಬರ್‌ 1ರಂದು ಗುರುವಾರ ಸಂಜೆ 6.30ಕ್ಕೆ ವಿಭಿನ್ನ ನಾಟಕವೊಂದರ ಪ್ರದರ್ಶನ ನಡೆಯಲಿದೆ.

ಡಾ. ಸಿದ್ದಲಿಂಗಯ್ಯ ಅವರ ಕಾವ್ಯಗಳನ್ನು ಆಧರಿಸಿ ಈ ನಾಟಕವನ್ನು ರೂಪಿಸಲಾಗಿದ್ದು, ನಾಟಕದ ನಿರ್ದೇಶನವನ್ನು ದೇವಾನಂದ್‌ ವರಪ್ರಸಾದ್‌ ಅವರು ನಿರ್ವಹಿಸಿದ್ದಾರೆ. ಸಂಗೀತದ ಜವಾಬ್ದಾರಿಯನ್ನು ಡಾ. ಜನಾರ್ಧನ್‌ (ಜನ್ನಿ) ಅವರು ವಹಿಸಿಕೊಂಡಿದ್ದಾರೆ.

ಮಲೆನಾಡಿನ ನಗರಿ ಶಿವಮೊಗ್ಗದಲ್ಲಿ ತನ್ನದೇ ಆದ ಹೆಸರನ್ನು ಗಳಿಸಿರುವ ಮುಖಾ-ಮುಖಿ ಎಸ್‌.ಟಿ. ರಂಗ ತಂಡ ನಾಟಕದ ಪ್ರದರ್ಶನದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಜನಸಾಮಾನ್ಯರಲ್ಲಿ ನಿಜವಾದ ಹೋರಾಟದ ಕಿಚ್ಚನ್ನು ಹುಟ್ಟಿಸುವ ಕಥಾವಸ್ತುವನ್ನು ಒಳಗೊಂಡಿರುವ ಈ ನಾಟಕವನ್ನು ಹೋರಾಟದ ನೆಲವಾಗಿರುವ ಶಿವಮೊಗ್ಗ ನಗರದಲ್ಲಿ ಪ್ರದರ್ಶಿಸುತ್ತಿರುವುದು ಇಲ್ಲಿನ ಕಲಾಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಉತ್ತಮ ಅವಕಾಶವಾಗಿದೆ.

ಸಾಮಾಜಿಕ ಅಂಕು-ಡೊಂಕುಗಳನ್ನು ತಿದ್ದುವ ಹಾಗೂ ಸಾಹಿತ್ಯದ ಮೂಲಕ ಯುವಜನರಲ್ಲಿ ಸಾಮಾಜಿಕ ಅರಿವು ಮೂಡಿಸುವ ಆಶಯವನ್ನು ಈ ನಾಟಕ ಹೊಂದಿದೆ. ಸಮಾಜದ ವಾಸ್ತವತೆ, ಜನಸಾಮಾನ್ಯರ ಬದುಕು ಮತ್ತು ಹೋರಾಟದ ಮನೋಭಾವವನ್ನು ನಾಟಕದ ಮೂಲಕ ಪ್ರೇಕ್ಷಕರ ಮುಂದಿಡುವ ಪ್ರಯತ್ನ ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ನಾಟಕ ಪ್ರದರ್ಶನದ ಕುರಿತು ಇಂದು ಶಿವಮೊಗ್ಗ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು. ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಾದ ಹೊನ್ನಾಹಳ್ಳಿ ಚಂದ್ರಶೇಖರ್‌, ಕೆ.ಜಿ. ವೆಂಕಟೇಶ್‌, ಸಿ.ಎ. ಮಹೇಂದ್ರ, ಮಂಜು ರಂಗಾಯಣ ಹಾಗೂ ಡಾ. ಸಂತೋಷ್‌, ಹಾಲೇಶ್‌ ಟಿ.ಡಿ. ಅವರು ಉಪಸ್ಥಿತರಿದ್ದರು.

Post a Comment

Previous Post Next Post