ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ‘ಮುಷ್ಠಿ ಅಕ್ಕಿ ಅಭಿಯಾನ’ಕ್ಕೆ ಭವ್ಯ ಉದ್ಘಾಟನೆ

ಸೀಹೆಹಟ್ಟಿಯಲ್ಲಿ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ‘ಮುಷ್ಠಿ ಅಕ್ಕಿ ಅಭಿಯಾನ’ಕ್ಕೆ ಭವ್ಯ ಉದ್ಘಾಟನೆ



ಶಿವಮೊಗ್ಗ  – ಸೀಹೆಹಟ್ಟಿಯ ಅಂತರಘಟ್ಟಮ್ಮ ದೇವಾಲಯ ಆವರಣದಲ್ಲಿ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ವತಿಯಿಂದ “ಮುಷ್ಠಿ ಅಕ್ಕಿ ಅಭಿಯಾನ” ಉದ್ಘಾಟನಾ ಕಾರ್ಯಕ್ರಮ ಭವ್ಯವಾಗಿ ನಡೆಯಿತು. ಪ.ಪೂ. ಸ್ವಾಮಿ ವಿನಯಾನಂದ ಸರಸ್ವತಿ ಜೀ ಮತ್ತು ಪ.ಪೂ. ಶ್ರೀ ಶ್ರೀ ನಾದಮಯಾನಂದ ಸ್ವಾಮಿಜೀರವರ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಶುಭಾರಂಭ ಕಂಡಿತು.



ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಮಾಜಿ ಉಪಮುಖ್ಯಮಂತ್ರಿಗಳು ಕೆ.ಎಸ್. ಈಶ್ವರಪ್ಪ ಮಾತನಾಡಿ—
“ಒಂದು ಮುಷ್ಠಿ ಅಕ್ಕಿ ಕೊಡೋದು ಯಾರಿಗೂ ಕಷ್ಟವಲ್ಲ. ಎಂಥ ಕಡುಬಡವರಾದರೂ ಅಯ್ಯಪ್ಪ ಸೇವೆಯಲ್ಲಿ ಒಂದು ಮುಷ್ಠಿ ಅಕ್ಕಿಯನ್ನು ನೀಡಬಹುದು. ಭಕ್ತರಿಂದ ಸಂಗ್ರಹವಾಗುವ ಇದು ಸಾಮಾನ್ಯ ಅಕ್ಕಿ ಅಲ್ಲ, ಅಯ್ಯಪ್ಪನಿಗೆ ಸಲ್ಲುವ ನೈವೇದ್ಯ. ಈ ದಾನದಲ್ಲಿ ಬಡವ-ಶ್ರೀಮಂತ ಎಂಬ ಬೇದಭಾವವಿಲ್ಲ. ನಂಬಿಕೆ ಮತ್ತು ನಿಷ್ಠೆಯಿಂದ ನೀಡುವ ಅಕ್ಕಿಯೆಲ್ಲ ದೇವರ ಕೃಪೆಗೆ ಕಾರಣವಾಗುತ್ತದೆ,” ಎಂದು ಹೇಳಿದರು.

ಈ ನಂತರ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಕೆ.ಈ. ಕಾಂತೇಶ್ ಅವರು—
“ಹಿಂದಿನ ಬಾರಿ ಸುಮಾರು 220 ಮೂಟೆ ಅಕ್ಕಿ ಸಂಗ್ರಹವಾಗಿತ್ತು. ಆದರೆ ಈ ಬಾರಿ ಕಾರ್ಯಕ್ರಮದ ಆರಂಭದಲ್ಲೇ 340ಕ್ಕೂ ಹೆಚ್ಚು ಅಕ್ಕಿ ಮೂಟೆಗಳು ಸಂಗ್ರಹವಾಗಿವೆ. ಮನೆ-ಮನೆಗೆ ತೆರಳಿ ಸಂಗ್ರಹ ಪ್ರಾರಂಭಿಸುವ ಮೊದಲುಲೇ ಈ ಪ್ರಮಾಣದಲ್ಲಿ ದಾನ ಸಿಕ್ಕಿರುವುದು ಅಯ್ಯಪ್ಪನ ಆಶೀರ್ವಾದ. ಇನ್ನೂ ಹೆಚ್ಚಿನ ಅಯ್ಯಪ್ಪ ಭಕ್ತರು ಈ ಅಭಿಯಾನದಲ್ಲಿ ಕೈಜೋಡಿಸಬೇಕಿದೆ,” ಎಂದು ಹೇಳಿದರು.



ಅಭಿಯಾನದ ಉದ್ದೇಶ ಬಡ-ಬಡವರ ಮನೆಗಳಿಗೆ ಆಹಾರ ಸಹಾಯ ನೀಡುವುದರ ಮೂಲಕ ಅಯ್ಯಪ್ಪ ಭಕ್ತಿಯಲ್ಲಿ ಸೇವಾಭಾವವನ್ನು ಬೆಳೆಸುವದು ಎಂದು ಆಯೋಜಕರು ತಿಳಿಸಿದರು.   ಸೀಗೆಹಟ್ಟಿ ಬಡಾವಣೆಯ  ಭಕ್ತರು, ಮಹಿಳಾ ಮಂಡಳಿಗಳು, ಯುವಕ ಸಂಘಗಳು ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಹಕಾರ ವ್ಯಕ್ತಪಡಿಸಿದರು.



ಉಪಸ್ಥಿತಿ:
ಮಾಜೀ ಉಪ ಮುಖ್ಯಮಂತ್ರಿಗಳಾದ ಕೆ.ಎಸ್. ಈಶ್ವರಪ್ಪ, ಕೆ.ಈ. ಕಾಂತೇಶ್, ಸತೀಶ್, ಶೇಷಾದ್ರಿ, ಪಾಲಾಕ್ಷಿ, ಡಾ. ಆರವಿಂದ್, ರಾಜು, ಶಂಕರ್, ಶರತ್, ಮಲ್ಲಿಕಾರ್ಜನ್, ಸಂತೋಷ್, ಮಂಜುನಾಥ್, ಪ್ರದೀಪ್, ಜಾಗವ್, ಶ್ರೀಕಾಂತ್, ಬಾಲು, ವಿಶ್ವಾಸ್ ಮತ್ತು ಇನ್ನಿತರ ಅಯ್ಯಪ್ಪ ಭಕ್ತರು.




Post a Comment

Previous Post Next Post