ಹೋರಾಟಗಾರ ಪ್ರಫುಲ್ಲ ಚಂದ್ರ ಎಚ್ ಅವರ 48ನೇ ವರ್ಷದ ಹುಟ್ಟುಹಬ್ಬ ಭಕ್ತಿ-ಸೇವೆ-ಸನ್ಮಾನದೊಂದಿಗೆ ವಿಜೃಂಭಣೆಯಿಂದ ಆಚರಣೆ

 

ಹೋರಾಟಗಾರ ಪ್ರಫುಲ್ಲ ಚಂದ್ರ ಎಚ್ ಅವರ 48ನೇ ವರ್ಷದ ಹುಟ್ಟುಹಬ್ಬ ಭಕ್ತಿ-ಸೇವೆ-ಸನ್ಮಾನದೊಂದಿಗೆ ವಿಜೃಂಭಣೆಯಿಂದ ಆಚರಣೆ



ನಿರಂತರವಾಗಿ ಹೋರಾಟಗಳಲ್ಲಿ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಜನಮನ ಗೆದ್ದಿರುವ ಹೋರಾಟಗಾರ ಪ್ರಫುಲ್ಲ ಚಂದ್ರ ಎಚ್ ಅವರ 48ನೇ ವರ್ಷದ ಹುಟ್ಟುಹಬ್ಬವನ್ನು ಈ ಬಾರಿ ಭಕ್ತಿ ಮತ್ತು ಸೇವೆಯೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.

ಈ ದಿನ ಸಾಗರ ರಸ್ತೆಯ ಎಪಿಎಂಸಿ ಎದುರಿನ ಪುರಾತನ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಅಭಿಷೇಕ ನೆರವೇರಿಸಲಾಯಿತು. ಸಾರ್ವಜನಿಕರು, ಭಕ್ತರು ಹಾಗೂ ಆಟೋ ಚಾಲಕರಿಗೆ ಪ್ರಸಾದವಾಗಿ ಪುಳಿಯೋಗರೆ ಮತ್ತು ಕೇಸರಿಬಾತ್ ಹಂಚಲಾಯಿತು.



ಸಂಜೆಗೆ ಅದೇ ಸನ್ನಿಧಿಯಲ್ಲಿ, ಗೋಪಾಲದ ರಂಗನಾಥ್ ತಂಡದವರಿಂದ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಹುಟ್ಟುಹಬ್ಬದ ಅಂಗವಾಗಿ, ಸುಮಾರು ವರ್ಷಗಳಿಂದಲೂ ನಡೆಯುವ ಪದ್ಧತಿಯಂತೆ ಶ್ರೀ ಶಾರದಾ ದೇವಿ ಅಂಧರ ವಿಕಾಸ ಕೇಂದ್ರದಲ್ಲಿ ಅಂಧ (ಕುರುಡು) ಮಕ್ಕಳಿಗೆ ಹಾಗೂ ಶಿಕ್ಷಕ ವೃಂದಕ್ಕೆ ಮಧ್ಯಾನ್ನದ ಊಟ ಮತ್ತು ಸಿಹಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಮಾಲ್ತೇಶ್ ಎನ್, ಹೋರಾಟಗಾರ ಜೀವನ್ ಡಿ, ಪ್ರಮುಖರಾದ ನಾಗರಾಜ್, ವಸಂತಣ್ಣ, ಮಂಜುನಾಥ್ (ಬಸ್ ಮಾಲೀಕರು), ಮಂಜಣ್ಣ (ಹೋಟೆಲ್ ಮಾಲೀಕರು) ಹಾಗೂ ಮುಖಂಡರಾದ ಚಂದ್ರಪ್ಪ, ಪ್ರಕಾಶ್, ಭಾಷಾ, ಆಕಾಶ್, ಪ್ರೇಮ್ ಕುಮಾರ್, ಪರಶುರಾಮ್, HH ಮಂಜುನಾಥ್ ಗೌಡ, ರಿಜ್ವಾನ್, ಹೊನ್ನಪ್ಪ, ಕುಮಾರ್ ಚೆಂದನಕೆರೆ ಸೇರಿದಂತೆ ಅನೇಕ ಭಕ್ತರು ಮತ್ತು ಆಟೋ ಚಾಲಕರು ಭಾಗವಹಿಸಿದರು.

ಈ ಸಂದರ್ಭದಲ್ಲಿ ಪ್ರಫುಲ್ಲ ಚಂದ್ರರವರಿಗೆ ಶ್ರಮ, ತ್ಯಾಗ ಹಾಗೂ ಸೇವೆಯನ್ನು ಗೌರವಿಸಿ ಶಿವಮೊಗ್ಗ ಜಿಲ್ಲಾ ಪತ್ರಿಕಾ ಒಕ್ಕೂಟದ ಅಧ್ಯಕ್ಷರು, ಜೀವನ್ ಮತ್ತು ನಾಗರಾಜ್ ರವರು ಸನ್ಮಾನ ಮಾಡಿದರು.

ಪ್ರಫುಲ್ಲ ಚಂದ್ರ ರವರು

  • ಮಲೆನಾಡು RMC ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರು,

  • ಹಿಂದೂ ಜನಜಾಗೃತಿ ವೇದಿಕೆಯ ಸದಸ್ಯರು,

  • ಹಿಂದೂ ಸಮನ್ವಯ ಸಮಿತಿಯ ಸದಸ್ಯರು,

  • ಹಾಗು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿಯಾಗಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.

ನಗರದ ವಿವಿಧ ಹೋರಾಟಗಳು ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ಪ್ರಫುಲ್ಲ ಚಂದ್ರ ಎಚ್ ಅವರು ಈಗಾಗಲೇ ಜನಪ್ರಿಯ ಮುಖಂಡರಾಗಿ ಗುರುತಿಸಿಕೊಂಡಿದ್ದಾರೆ. ಅವರ ಸೇವೆ ಹೀಗೆ ಮುಂದುವರೆಯಲಿ ಎಂದು ಎಲ್ಲರೂ ಹಾರೈಸಿದರು.




Post a Comment

Previous Post Next Post