ಪುರುಷ ಪ್ರಯಾಣಿಕರ ಅಸಮಾಧಾನ: ಶಕ್ತಿ ಯೋಜನೆ ಮಹಿಳೆಯರಿಗೆ ಮಾತ್ರ – ಗಂಡಸರಿಗೂ ₹20 ಪಾಸ್ ನೀಡುವಂತೆ ಒತ್ತಾಯ
ಆದರೆ, ಈ ಸೌಲಭ್ಯ ಪುರುಷರಿಗೆ ಲಭ್ಯವಿಲ್ಲದಿರುವುದು ಪುರುಷ ವಿದ್ಯಾರ್ಥಿಗಳು, ಕೆಲಸಗಾರರು ಮತ್ತು ದೈನಂದಿನ ಬಸ್ ಬಳಕೆದಾರರಲ್ಲಿ ತೀವ್ರ ಅಸಮಾಧಾನವನ್ನು ಹುಟ್ಟುಹಾಕಿದೆ.
ಗಂಡಸರ ಮನವಿ: “ನಮ್ಮಿಗೂ ₹20 ಪಾಸ್ ಸಿಗಬೇಕು”
ಮಹಿಳೆಯರಿಗೆ ಉಚಿತ ಪ್ರಯಾಣ ಮತ್ತು ₹20 ಪಾಸ್ ಸೌಲಭ್ಯ ಲಭ್ಯವಾಗುತ್ತಿದ್ದರೂ, ಗಂಡಸರು ಮಾತ್ರ ಪೂರ್ಣ ಪ್ರಮಾಣದ ಟಿಕೆಟ್ ದರವನ್ನು ಕಟ್ಟಬೇಕಾಗಿದೆ. ಇದೀಗ ಇಂಧನ ಬೆಲೆ, ಜೀವನ ವೆಚ್ಚಗಳ ಏರಿಕೆ, ಮತ್ತು ದಿನನಿತ್ಯದ ಸಂಚಾರ ವೆಚ್ಚಗಳ ಹಿನ್ನೆಲೆಯಲ್ಲಿ ಗಂಡಸರು ದೊಡ್ಡ ಒತ್ತಡವನ್ನು ಅನುಭವಿಸುತ್ತಿದ್ದಾರೆ ಇದರಿಂದ ಮೊದಲೇ ಮಾನಸಿಕ ಒತ್ತಡದಲ್ಲಿರುವ ಪುರುಷರು ಪ್ರಯಾಣದ ಸಮಯದಲ್ಲಿಯೂ ತಾರತಮ್ಯವನ್ನು ಅನುಬವಷಬೇಕಾಗಿದೆ ಎಂದು ಅವರು ಆರೋಪಿಸುತ್ತಿದ್ದಾರೆ.
ಬಹುಮಂದಿ ಪುರುಷ ಪ್ರಯಾಣಿಕರು ಹೇಳುವಂತೆ:
-
“ಮಹಿಳೆಯರು ಪ್ರತಿದಿನ ₹20 ಪಾಸ್ ಪಡೆದು ಪ್ರಯಾಣದ ತೊಂದರೆಯನ್ನು ಕಡಿಮೆ ಮಾಡಿಕೊಂಡಿದ್ದಾರೆ, ಆದರೆ ನಾವು ಸಂಪೂರ್ಣ ಹಣ ಕಟ್ಟಬೇಕಾದ ಪರಿಸ್ಥಿತಿ ಇದೆ.”
-
“ಎಲ್ಲರೂ ಸಮಾನರು ಎಂದರೆ, ಸೌಲಭ್ಯವೂ ಎಲ್ಲರಿಗೂ ಸಮಾನವಾಗಿರಬೇಕು.”
-
ಪುರುಷರಾದ “ನಮ್ಮನ್ನೂ ಸರ್ಕಾರ ನೋಡುವ ಸಮಯ ಬಂದಿದೆ.”
ಅಸಮಾಧಾನದಿಂದ ಶಾಪವರೆಗೂ: ಬಸ್ ಪ್ರಯಾಣದಲ್ಲೇ ಗಂಡಸರ ಬೇಸರ
ಬಹಳಷ್ಟು ಪುರುಷ ಪ್ರಯಾಣಿಕರು ಬಸ್ ಪ್ರಯಾಣದಲ್ಲಿ ಬರದಾಟ ಹಾಗೂ ಬೇಸರ ವ್ಯಕ್ತಪಡಿಸುತ್ತ, ಕೆಲವರು ಸರ್ಕಾರದ ನಿರ್ಧಾರದ ಮೇಲೆ ಶಾಪ ಹಾಕುವ ಮಟ್ಟಿಗೆ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿರುವುದಾಗಿ ತಿಳಿದುಬಂದಿದೆ.
“ಸಮಾನ ಹಕ್ಕು, ಸಮಾನ ಸೌಲಭ್ಯ” – ಗಂಡಸರ ಒತ್ತಾಯ
ಪುರುಷ ವಿದ್ಯಾರ್ಥಿಗಳು, ಕಾರ್ಮಿಕರು, ಬಡ ಕುಟುಂಬದ ಪುರುಷರು ಹಾಗೂ ದಿನನಿತ್ಯ ಪ್ರಯಾಣಿಕರು ಒಟ್ಟಾಗಿ ಸರ್ಕಾರಕ್ಕೆ ಮನವಿ ಮಾಡುತ್ತಿರುವುದು:
-
ಪುರುಷ ಪ್ರಯಾಣಿಕರಿಗೂ ₹20 ಪಾಸ್ ವ್ಯವಸ್ಥೆ ಮಾಡಬೇಕು
-
ಆಸನ ವ್ಯವಸ್ಥೆಯಲ್ಲಿ ಲಿಂಗ ಆಧಾರಿತ ವ್ಯತ್ಯಾಸ ಇರಬಾರದು
-
ಸರ್ಕಾರವು ಎಲ್ಲರಿಗೂ ಸಮಾನ ಅವಕಾಶ ನೀಡಬೇಕು
ಸರ್ಕಾರದ ಜವಾಬ್ದಾರಿ
ಸರ್ಕಾರವು ಮಹಿಳೆಯರಿಗೆ ನೀಡಿದ ಶಕ್ತಿ ಯೋಜನೆ ಒಂದು ಸಮಾನತೆಗೆ ಮಾಡಿದ ಪ್ರಯತ್ನವಾದರೂ, ಅದರಿಂದ ಗಂಡಸರಿಗೆ ಅನ್ಯಾಯದ ಅನುಭವವಾಗುತ್ತಿದೆ ಎಂಬ ಅಭಿಪ್ರಾಯ ಹೆಚ್ಚುತ್ತಿದೆ.
ಗಂಡಸರಿಗೂ ಇದೇ ಸೌಲಭ್ಯ ಒದಗಿಸುವುದು ಸರ್ಕಾರದ ಸಮಾನತೆ ತತ್ವಕ್ಕೆ ಅನುಗುಣವಾಗುತ್ತದೆ ಎಂದು ನಾಗರಿಕರು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಈಗಲಾದರು ರಾಜ್ಯ ಸರ್ಕಾರ ಪುರಷರ ಈ ಸಮಸ್ಯೆಯನ್ನು ಅರಿತು ಬಸ್ ಪ್ರಯಾಣದಲ್ಲಿ ನಡೆಯುತ್ತಿರು ಈ ತಾರತಮ್ಯವನ್ನು ಸರಿಪಡಿಸಬೇಕು ಎನ್ನುವ ಕೂಡು ಪುರುಷ ಪ್ರಯಾಣಿಕರದ್ದಾಗಿದೆ.
ವರಿದಿ: ಎಸ್.ಬಾಬು ಎಫ್7ನ್ಯೂಸ್ ಶಿವಮೊಗ್ಗ



