ಡಿ.11 ರಂದು ಶಿವಮೊಗ್ಗದ ಅನೇಕ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಶಿವಮೊಗ್ಗ, ಡಿಸೆಂಬರ್ 10 (F7 News):
ಶಿವಮೊಗ್ಗ ನಗರದಲ್ಲಿ 110/11 ಕೆ.ವಿ. ವಿದ್ಯುತ್ ಕೇಂದ್ರದ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಡಿ.11 ರಂದು ಬೆಳಿಗ್ಗೆ 9:00 ರಿಂದ ಸಂಜೆ 6:00 ಗಂಟೆಯವರೆಗೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಮಾಹಿತಿ ನೀಡಿದೆ.
ವಿದ್ಯುತ್ ವ್ಯತ್ಯಯದ ಪರಿಣಾಮ ಬೀರುವ ಪ್ರದೇಶಗಳು:
ಗಾಂಧಿಬಜಾರ್, ಓ ಟಿ ರಸ್ತೆ, ಎಲೆರೇವಣ್ಣ ಕೇರಿ, ಕುಂಬಾರಗುಂಡಿ, ತಿರುಪಳಯ್ಯನ ಕೇರಿ, ಸಿದ್ದಯ್ಯರಸ್ತೆ, ತಿಮ್ಮಪ್ಪನಕೊಪ್ಪಲು, ಎಂಕೆಕೆ ರಸ್ತೆ, ಉಪ್ಪಾರಕೇರಿ, ಕಸ್ತೂರಿಬಾ ರಸ್ತೆ, ಕೆ.ಆರ್.ಪಿ ಮಠಪದವಿ, ಭ್ರಮಪ್ಪನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಮೆಸ್ಕಾಂ ಅಧಿಕಾರಿಗಳು ಸಾರ್ವಜನಿಕರು ಸಹಕರಿಸುವಂತೆ ವಿನಂತಿ ಮಾಡಿದ್ದಾರೆ.
D.P Aravind F7news.in Shimoga

