ಬರೆಯುತ್ತಾರೆ ಗಾರಾ.ಶ್ರೀನಿವಾಸ್
ಬೆತ್ತಲಾಗದ ಮರ್ಡರ್ ಮಿಸ್ಟರಿ
ಹೌದು ಬೆತ್ರಲಾಗಲೇ ಇಲ್ಲ,
ಅದೊಂದು ಮರ್ಡರ್ ಮಿಸ್ಟರಿಗಳು
ಒಂದು ಕೊಲೆ, ನಾಲ್ಕು ಹೆಣಗಳು,
ಒಂದೇ ಗ್ಯಾಂಗು ಖಾಕಿ ತನಿಖಿಸಲೇ ಇಲ್ಲ,
ಉದ್ಘಾಟಿಸಲಾದ ಸುಫಾರಿ ಹತ್ಯೆಗಳು,
ಎಸ್ಪಿ ಸಿದ್ದಪ್ಪನು, ಆತನಿಗಿಟ್ಟಿದ್ದು ರೊಕ್ಕಗಳು,
ಕುವೆಂಪು ರಸ್ತೆಯಲ್ಲಿ ಎಳೆದೊಯ್ಯಲಾಗಿತ್ತು,
ಹಂದಿ ಕಸಾಯಿಯ ಭರ್ಚಿಗಳು ಬಳಸಿತ್ತು,
ಕಾನೆಹಳ್ಳದ ಆಸುಪಾಸಿನಡಿ ಜೀವ ಚೆಲ್ಲಿತ್ತು,
ವಾರ ಉರುಳಿರಲಿಲ್ಲ, ದಂಪತಿಗಳಿಬ್ಬರು
ರಕ್ತದ ಮಡುವಿನಲಿ ಉಸಿರು ಚೆಲ್ಲಿದ್ದರು,
ತೋಟದ ಫಸಲುಗಳೇ ಸಾಕ್ಷೀಯಾಗಿತ್ತು,
ರಾತ್ರಿ ತಂಪಿನಲಿ ಮಚ್ಚಿನೇಟಿಗಳು ಬಿದ್ದಿದ್ದವು,
ಖಾಕಿ ಸುಳ್ಳು ಪ್ರಥಮ ವರ್ತಮಾನ ವರದಿ ದಾಖಲಿಸಿತ್ತು,
ಆರೋಪಿಗಳಲ್ಲದವರು ಸರಂಡರ್ ಆಗಿದ್ದರು,
ತೆಲಗಿ ಪ್ರಕರಣ, ನಗರಕ್ಕೂ ಓಡೋಡಿ ದೌಡಿತ್ತು,
ಐತಾಳನ ಉಪಪತ್ನಿಯರು ಮುಂಡೆಯರಾಗಿದ್ದರು,
ಭಿಬತ್ಸಕರ ಕೊಲೆಗಳಿಗೆ ಅಸಲಿ ಕಾರಣಗಳಿವು,
ರೊಕ್ಕದ ಬಿಸಿ ರುಧಿರದನಿಗಳನ್ನು ಮೀರಿಸಿತ್ತು,
ಸುಫಾರಿ ಕೊಟ್ಟ ವಿಕೃತಕಾರಿ ದೊರೆ ಮೇರೆ ಮೆರೆದಿದ್ದ,
ಖಾಕಿ ಎಸ್ಪಿ ಸಿದ್ದಪ್ಪ ರೊಕ್ಕದ ಚೀಲ ಹೊತ್ತೊಯ್ದಿದ್ದ,
2004 ಈ ಪ್ರಕರಣಗಳ ಬೆನ್ನತ್ತಿದ್ದ ಧೂತ ಪತ್ರಕರ್ತ,
ಶ್ರೀರಂಗಪಟ್ಟಣದಿ ಕಾಯ ಊದಿದ ಹೆಣವಾಗಿದ್ದ,
ಇದುವೇ ನಾಲ್ಕು ಮರ್ಡರ್ ಮಿಸ್ಟರಿಗಳು,
ಅದೇ ವಿಕೃತಕಾರಿ, ಪೆನ್ನಿಗನ ಪಾಪದ ಹೆಜ್ಜೆಗಳು,
ಇಂದಿಗೂ ಮೌಲ್ಯ, ಅಭಿವ್ಯಕ್ತಿ, ಎಂದೆನ್ನುತ್ತಿವೆ,
ನಂತರದ ಖಾಕಿಗಳು, ಖಾದಿಗಳು ಸನ್ಮಾನಿಸುತ್ತಿವೆ,
- Gara Srinivas, Journalist and writer
