ದಿನಾಂಕ: 18.01.2025
I. ಉಧ್ನಾ ನಿಲ್ದಾಣದಲ್ಲಿ ಹಮ್ಸಫರ್ ಎಕ್ಸ್ ಪ್ರೆಸ್ ರೈಲಿನ ಸಮಯ ಪರಿಷ್ಕರಣೆ
ಸೂರತ್ ನಿಲ್ದಾಣದ ಅಭಿವೃದ್ಧಿ ಕಾರ್ಯ-ಹಂತ 2 (ಪ್ಲಾಟ್ ಫಾರ್ಮ್ 02 ಮತ್ತು 03ರ ಬ್ಲಾಕ್) ಹಾಗೂ ಏರ್ ಕಾನ್ಕೋರ್ಸ್ ಕಾಮಗಾರಿಯಿಂದಾಗಿ, ಉದ್ನಾ ಜಂಕ್ಷನ್ ನಲ್ಲಿ ರೈಲು ಸಂಖ್ಯೆ 19668 ಮೈಸೂರು-ಉದಯಪುರ ಸಿಟಿ ಸಾಪ್ತಾಹಿಕ ಹಮ್ಸಫರ್ ಎಕ್ಸ್ ಪ್ರೆಸ್ ರೈಲಿನ ಆಗಮನ ಮತ್ತು ನಿರ್ಗಮನ ಸಮಯವನ್ನು ಪಶ್ಚಿಮ ರೈಲ್ವೆ ಪರಿಷ್ಕರಿಸಿದೆ.
ನಿವೇದಿತ ಸಮಯ ಪರಿಷ್ಕರಣೆಗಳು:
- ಈ ರೈಲು 15:23 ಗಂಟೆಗೆ ಆಗಮಿಸುವುದಕ್ಕೆ ಬದಲಾಗಿ, 15:13 ಗಂಟೆಗೆ ಆಗಮಿಸಲಿದೆ.
- ರೈಲು 15:28 ಗಂಟೆಗೆ ಹೊರಡುವುದಕ್ಕೆ ಬದಲಾಗಿ, 15:18 ಗಂಟೆಗೆ ಹೊರಡುವುದು.
ಈ ಸಮಯ ಪರಿಷ್ಕರಣೆ ತಕ್ಷಣದಿಂದ ಜಾರಿಗೆ ಬರುವಂತೆ ಅಲ್ಲಿದೆ.
II. ರೈಲುಗಳ ಸಂಚಾರ ಭಾಗಶಃ ರದ್ದು / ನಿಯಂತ್ರಣ
ಕೃಷ್ಣರಾಜನಗರ ನಿಲ್ದಾಣದ ರಸ್ತೆ ಸಂಖ್ಯೆ 2ರ ಎರಡೂ ಬದಿಗಳಲ್ಲಿ ಟ್ರ್ಯಾಕ್ ಮೆಷಿನ್ ಸೈಡಿಂಗ್ ಅನ್ನು ನಿಯೋಜಿಸಲು ಎಂಜಿನಿಯರಿಂಗ್ ಕಾಮಗಾರಿ ಕೈಗೊಳ್ಳುವ ಸಲುವಾಗಿ, ಕೆಳಗಿನ ರೈಲುಗಳ ಸಂಚಾರದಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ:
ರೈಲುಗಳ ಸಂಚಾರ ಭಾಗಶಃ ರದ್ದು:
ರೈಲು ಸಂಖ್ಯೆ 56267 - ಅರಸೀಕೆರೆ-ಮೈಸೂರು ಡೈಲಿ ಪ್ಯಾಸೆಂಜರ್ ರೈಲು (ಜಾನ. 28)
- ಹಾಸನ ಮತ್ತು ಮೈಸೂರು ನಿಲ್ದಾಣಗಳ ಮಧ್ಯ ಭಾಗಶಃ ರದ್ದಾಗಿದೆ.
- ಈ ರೈಲು ಹಾಸನದಲ್ಲಿ ಕೊನೆಗೊಳ್ಳುತ್ತದೆ.
ರೈಲು ಸಂಖ್ಯೆ 56268 - ಮೈಸೂರು-ಅರಸೀಕೆರೆ ಡೈಲಿ ಪ್ಯಾಸೆಂಜರ್ ರೈಲು (ಜಾನ. 29)
- ಮೈಸೂರಿನ ಬದಲು ಹಾಸನದಿಂದ ಹೊರಡುವುದು.
- ಈ ರೈಲು ಮೈಸೂರು ಮತ್ತು ಹಾಸನ ನಡುವೆ ಭಾಗಶಃ ರದ್ದಾಗಿದೆ.
ರೈಲು ಸಂಖ್ಯೆ 16225 - ಮೈಸೂರು-ಶಿವಮೊಗ್ಗ ಟೌನ್ ಡೈಲಿ ಎಕ್ಸ್ ಪ್ರೆಸ್ ರೈಲು (ಜಾನ. 28)
- ಮೈಸೂರಿನ ಬದಲು ಹಾಸನದಿಂದ ಹೊರಡುವುದು.
- ಈ ರೈಲು ಮೈಸೂರು ಮತ್ತು ಹಾಸನ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ.
ರೈಲು ಸಂಖ್ಯೆ 16226 - ಶಿವಮೊಗ್ಗ ಟೌನ್-ಮೈಸೂರು ಡೈಲಿ ಎಕ್ಸ್ ಪ್ರೆಸ್ ರೈಲು (ಜಾನ. 29)
- ಹಾಸನ ಮತ್ತು ಮೈಸೂರು ನಡುವೆ ಭಾಗಶಃ ರದ್ದಾಗಿದೆ.
- ಈ ರೈಲು ಹಾಸನದಲ್ಲಿ ಕೊನೆಗೊಳ್ಳುತ್ತದೆ.
ರೈಲುಗಳ ನಿಯಂತ್ರಣ:
ರೈಲು ಸಂಖ್ಯೆ 16221 - ತಾಳಗುಪ್ಪ-ಮೈಸೂರು ಕುವೆಂಪು ಡೈಲಿ ಎಕ್ಸ್ ಪ್ರೆಸ್ (ಜಾನ. 26)
- ಮಾರ್ಗ ಮಧ್ಯದಲ್ಲಿ 45 ನಿಮಿಷಗಳ ಕಾಲ ಸಂಚಾರ ನಿಯಂತ್ರಣ.
ರೈಲು ಸಂಖ್ಯೆ 16222 - ಮೈಸೂರು-ತಾಳಗುಪ್ಪ ಕುವೆಂಪು ಡೈಲಿ ಎಕ್ಸ್ ಪ್ರೆಸ್ (ಜಾನ. 26)
- ಮಾರ್ಗ ಮಧ್ಯದಲ್ಲಿ 45 ನಿಮಿಷಗಳ ಕಾಲ ಸಂಚಾರ ನಿಯಂತ್ರಣ.
ರೈಲು ಸಂಖ್ಯೆ 16207 - ಯಶವಂತಪುರ-ಮೈಸೂರು ಡೈಲಿ ಎಕ್ಸ್ ಪ್ರೆಸ್ (ಜಾನ. 29)
- ಮಾರ್ಗ ಮಧ್ಯದಲ್ಲಿ 30 ನಿಮಿಷಗಳ ಕಾಲ ಸಂಚಾರ ನಿಯಂತ್ರಣ.
ಡಾ. ಮಂಜುನಾಥ ಕನಮಡಿ
ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ
ನೈಋತ್ಯ ರೈಲ್ವೆ, ಹುಬ್ಬಳ್ಳಿ