ಭಾರತಕ್ಕೆ ಡಬಲ್ ಖೋ ಖೋ ವಿಶ್ವಕಪ್ ಗೆಲುವು: ರಾಷ್ಟ್ರಕ್ಕೆ ಹೆಮ್ಮೆ ತಂದ ಮಲ್ಲಿಗೆರೆ ಗೌತಮ್ ಮತ್ತು ಚೈತ್ರಾ ಗೌರವಾನ್ವಿತ

 

ಭಾರತಕ್ಕೆ ಡಬಲ್ ಖೋ ಖೋ ವಿಶ್ವಕಪ್ ಗೆಲುವು: ರಾಷ್ಟ್ರಕ್ಕೆ ಹೆಮ್ಮೆ ತಂದ ಮಲ್ಲಿಗೆರೆ ಗೌತಮ್ ಮತ್ತು ಚೈತ್ರಾ ಗೌರವಾನ್ವಿತ



ಬೆಂಗಳೂರು, ಜನವರಿ 2025:
2025ರ ಪುರುಷರ ಮತ್ತು ಮಹಿಳಾ ಖೋ ಖೋ ವಿಶ್ವಕಪ್‌ನಲ್ಲಿ ಭಾರತದ ಪುರುಷ ಹಾಗೂ ಮಹಿಳಾ ತಂಡಗಳು ಅದ್ಭುತ ಪ್ರದರ್ಶನ ನೀಡಿ ಎರಡೂ ವಿಭಾಗಗಳಲ್ಲಿ ಚಾಂಪಿಯನ್ ಪಟ್ಟ ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಈ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ ಮಂಡ್ಯ ಜಿಲ್ಲೆಯ ಡಿ.ಮಲ್ಲಿಗೆರೆ ಗ್ರಾಮದ ಎಂ.ಕೆ. ಗೌತಮ್ ಮತ್ತು ಮೈಸೂರು ಜಿಲ್ಲೆಯ ಟಿ. ನರಸೀಪುರದ ಕುರಬೂರಿನ ಚೈತ್ರಾ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸನ್ಮಾನಿಸಿದರು.

ವಿಧಾನಸೌಧದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಗೌತಮ್ ಮತ್ತು ಚೈತ್ರಾಗೆ ತಲಾ ₹5 ಲಕ್ಷದ ನಗದು ಬಹುಮಾನವನ್ನು ಘೋಷಿಸಿ, ಅವರ ಸಾಧನೆಗೆ ಸನ್ಮಾನ ನೀಡಿ ಗೌರವಿಸಲಾಯಿತು. ಮುಖ್ಯಮಂತ್ರಿಗಳು ಮಾತನಾಡುತ್ತಾ, “ಈ ಪಟುಗಳ ಸಾಧನೆಯು ಭಾರತದ ಕ್ರೀಡಾ ವಲಯಕ್ಕೆ ಹೊಸ ಉತ್ಸಾಹ ನೀಡಿದ್ದು, ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ನಿರೀಕ್ಷಿಸುತ್ತೇವೆ” ಎಂದು ಹೇಳಿದರು.

ಸನ್ಮಾನ ಸಮಾರಂಭದಲ್ಲಿ ಉಪಸ್ಥಿತರು:
ಸಚಿವರಾದ ಚಲುವರಾಯಸ್ವಾಮಿ, ಮತ್ತು ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಅತಿಥಿಗಳಾಗಿ ಭಾಗವಹಿಸಿ ಕ್ರೀಡಾಪಟುಗಳ ಸಾಧನೆಗೆ ಶ್ಲಾಘನೆ ಸಲ್ಲಿಸಿದರು.

ಈ ಸಾಧನೆಯು ಭಾರತದ ಕ್ರೀಡಾ ಇತಿಹಾಸದಲ್ಲಿ ತಾಜಾ ದಾಖಲೆ ಬರೆದಿದ್ದು, ದೇಶದ ಯುವಜನತೆಗೆ ಹೊಸ ಪ್ರೇರಣೆಯಾಗಿದೆ.

ವರದಿ: ಡಿ.ಪಿ ಅರವಿಂದ್

Post a Comment

Previous Post Next Post