ಶ್ರೀ ರಾಮಸೇವಾ ಭಾವಸಾರ ಕ್ಷತ್ರಿಯ ಕ್ರೆಡಿಟ್ ಕೋ ಆಪರೇಟಿವ್ ಸೋಸೈಟಿ ಲಿ.
ನೂತನ ಕೇಂದ್ರ ಕಛೇರಿ ಶುಭಾರಂಭ ಕಾರ್ಯಕ್ರಮ
ಭಾವಸಾರ ಸಮಾಜದ ಬಹುದಿನಗಳ ಕನಸಾಗಿರುವ ನೂತನ ಕೇಂದ್ರ ಕಛೇರಿಯನ್ನು ಶುಭಾರಂಭ ಮಾಡುವ ಸಮಯ ಈಗ ಒದಗಿ ಬಂದಿದೆ. ಈ ಮಹತ್ವದ ಉದ್ಘಾಟನಾ ಕಾರ್ಯಕ್ರಮವು 31/01/2025, ಶುಕ್ರವಾರ, ಬೆಳಗ್ಗೆ 11.00 ಗಂಟೆಗೆ ಲೋಕಾರ್ಪಣೆಯಾಗಲಿದ್ದು, ಈ ಸಮಾರಂಭವು ಭಾವಸಾರ ಸಮಾಜದ ಪ್ರಗತಿಗೆ ಮತ್ತೊಂದು ಮೇಳವಾಗಿ ಕಾಣಲಿದೆ.
ಈ ಉದ್ಘಾಟನಾ ಸಮಾರಂಭದ ಜವಾಬ್ದಾರಿಯನ್ನು ಸಂತೋಷ್ ಸಾಕ್ರೆ, ಶ್ರೀ ರಾಮಸೇವಾ ಭಾವಸಾರ ಕ್ಷತ್ರಿಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಅಧ್ಯಕ್ಷರು, ಮತ್ತು ಗಜೇಂದ್ರನಾಥ್ ಟಿ.ವಿ, ಭಾವಸಾರ ಕ್ಷತ್ರಿಯ ಮಹಾಜನ ಸಮಾಜ ಅಧ್ಯಕ್ಷರು ನಿರ್ವಹಿಸಲಿದ್ದಾರೆ.
ಮುಖ್ಯ ಅತಿಥಿಗಳು:
ಮಧು ಬಂಗಾರಪ್ಪ – ಜಿಲ್ಲಾ ಉಸ್ತುವಾರಿ ಸಚಿವ
ಬಿ.ವೈ. ರಾಘವೇಂದ್ರ – ಶಿವಮೊಗ್ಗ ಸಂಸದ
ಎಸ್.ಎನ್. ಚನ್ನ ಬಸಪ್ಪ – ಶಾಸಕರು
ಶಾರಧಾ ಪೂರ್ಯನಾಯ್ಕ್ – ಗ್ರಾಮಾಂತರ ಶಾಸಕಿ
ಡಿ.ಎಸ್. ಅರುಣ್ ಕುಮಾರ್ – ಪರಿಷತ್ ಸದಸ್ಯ
ಕೆ.ಎಸ್. ಈಶ್ವರಪ್ಪ – ಮಾಜಿ ಉಪಮುಖ್ಯಮಂತ್ರಿ
ಆಡಳಿತ ಮಂಡಳಿಯ ಹೊಸ ಸಾಧನೆಗಳು:
ಹೊಸದಾಗಿ ಆಯ್ಕೆಯಾದ ಆಡಳಿತ ಮಂಡಳಿಯು ತಮ್ಮ ಕಾರ್ಯತತ್ಪರತೆಯಿಂದ ಹಲವು ಮಹತ್ವದ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದೆ:
ಸಿ.ಬಿ.ಎಸ್ (ಕೋರ್ ಬ್ಯಾಂಕಿಂಗ್ ಸಿಸ್ಟಮ್) ಅನ್ನು ಕೇಂದ್ರ ಹಾಗೂ ಶಾಲಾ ಕಛೇರಿಗೆ ಅಳವಡಿಸಲಾಗಿದೆ.
ಡಿವಿಡೆಂಟ್ ಹಣವನ್ನು ನೇರವಾಗಿ ಸದಸ್ಯರ ಉಳಿತಾಯ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಮಾಡಲಾಗಿದೆ.
ಸದಸ್ಯರ ಕ್ಷೇಮಾಭಿವೃದ್ಧಿ ನಿಧಿಯನ್ನು ₹12,000/-ಕ್ಕೆ ಹೆಚ್ಚಿಸಲಾಗಿದೆ.
ಸಂಘದ ವ್ಯವಹಾರಗಳನ್ನು QR ಕೋಡ್ ಮೂಲಕ ಆನ್‌ಲೈನ್ ಪಾವತಿ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.
ಠೇವಣಿಗಳ ಬಡ್ಡಿದರವನ್ನು 7.5% ಹಾಗೂ ಹಿರಿಯ ನಾಗರಿಕರಿಗೆ 8% ಗೆ ಹೆಚ್ಚಿಸಲಾಗಿದೆ.
ಮಹಿಳಾ ಷೇರುದಾರರಿಗೆ ಠೇವಣಿಗಳ ಮೇಲೆ 8% ಬಡ್ಡಿ ನೀಡುವ ಕ್ರಮ ಜಾರಿಗೆ ತಂದಿದೆ.
ಒಟ್ಟಾರೆಯಾಗಿ, ನೂತನ ಆಡಳಿತ ಮಂಡಳಿಯು ಹೊಸ ಯೋಜನೆಗಳ ಮೂಲಕ ಸಂಘದ ಸದಸ್ಯರಲ್ಲಿ ವಿಶ್ವಾಸವನ್ನು ಮೂಡಿಸಿದೆ. ಈ ನೂತನ ಕಛೇರಿ ನಿರ್ಮಾಣ ಹಾಗೂ ಉದ್ಘಾಟನೆ ಭಾವಸಾರ ಸಮಾಜದ ಬೆಳವಣಿಗೆಗೆ ಹೊಸ ಉತ್ಸಾಹವನ್ನು ನೀಡಲಿದೆ.
ವರದಿ: ಡಿ.ಪಿ. ಅರವಿಂದ್
