"ಗಣಕೀಕರಣಕ್ಕೆ ಶಕ್ತಿ: ಸಾರ್ವಜನಿಕರ ದಾಖಲೆಗಳ ದುಸ್ಥಿತಿಗೆ ಮುಕ್ತಿ"
ಶಿವಮೊಗ್ಗ ಸೊರಬ, ಜನವರಿ 27:
ಸೋರಬ ತಾಲೂಕಿನ ಕಚೇರಿಯಲ್ಲಿ "ಭೂ ಸುರಕ್ಷಾ" ಯೋಜನೆಯಡಿ ಭೂ ದಾಖಲೆಗಳ ಇ-ಖಜಾನೆ ಡಿಜಿಟಲೀಕರಣ ಕೊಠಡಿಗೆ ಇಂದು ಚಾಲನೆ ನೀಡಲಾಯಿತು. ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಈ ಯೋಜನೆಯನ್ನು ಉದ್ಘಾಟಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಭೂ ಡಿಜಿಟಲೀಕರಣದ ಮಹತ್ವ:
ರಾಜ್ಯ ಸರ್ಕಾರವು ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಮೂಲಕ ಸಾರ್ವಜನಿಕರಿಗೆ ಸುಲಭವಾದ ಮತ್ತು ಸುರಕ್ಷಿತ ಸೇವೆ ನೀಡಲು ಬದ್ಧವಾಗಿದೆ. ಇ-ಖಜಾನೆ ವ್ಯವಸ್ಥೆ:
- ರೈತರ ಭೂ ಹಕ್ಕುಗಳನ್ನು ಸಂರಕ್ಷಿಸಲು ಮಹತ್ವದ ಸಾಧನೆ.
- ದಾಖಲೆಗಳು ಡಿಜಿಟಲ್ ಆಗಿ ಸಂಗ್ರಹಗೊಂಡು, ಸುಭದ್ರ ಮತ್ತು ಸುಲಭವಾಗಿ ಲಭ್ಯವಾಗಲಿವೆ.
- ತಿದ್ದುಪಡಿ ಅಥವಾ ದುರ್ಬಳಕೆ ಮಾಡುವುದು ಅಸಾಧ್ಯವಾಗುತ್ತದೆ.
- ಅಗತ್ಯ ಸಂದರ್ಭದಲ್ಲಿ ತಂತ್ರಜ್ಞಾನ ನೆರವಿನಿಂದ ರೈತರು ಮತ್ತು ಸಾರ್ವಜನಿಕರು ದಾಖಲೆಗಳನ್ನು ಸರಳವಾಗಿ ಪಡೆಯಬಹುದು.
ಸಾರ್ವಜನಿಕರ ಅಹವಾಲು ಸ್ವೀಕಾರ:
ಉದ್ಘಾಟನೆ ಬಳಿಕ, ತಾಲೂಕು ಪಂಚಾಯತ್ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದಿಷ್ಟ ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರು:
ಸಾಗರ ಉಪವಿಭಾಗಾಧಿಕಾರಿ ಶ್ರೀ ಯತೀಶ್, ಐಎಎಸ್ ಅಧಿಕಾರಿ ಕು. ದೃಷ್ಟಿ ಜೆಸ್ವಾಲ್, ತಹಶೀಲ್ದಾರ್ ಶ್ರೀಮತಿ ಮಂಜುಳಾ ಹೆಗಡೆವಾರ್, ಇಒ ಶ್ರೀ ಪ್ರದೀಪ್ ಕುಮಾರ್, ಮತ್ತು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀ ಮಂಜುನಾಥ್ ಸೇರಿದಂತೆ ಹಲವಾರು ಅಧಿಕಾರಿಗಳು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಇದು ಸಾರ್ವಜನಿಕರ ಹಿತಕ್ಕಾಗಿ ರಾಜ್ಯ ಸರ್ಕಾರ ಕೈಗೊಂಡಿರುವ ಮುಂದಾದ ಹೆಜ್ಜೆ ಎಂದರು ಮಧು ಬಂಗಾರಪ್ಪ.
ವರದಿ: ಎಸ್.ಬಾಬು
