ಮಂಗಳೂರು | ಮೊಸರು ಕುಡಿಕೆ ಉತ್ಸವದಲ್ಲಿ ಯುವತಿ ಜೊತೆ ಯುವಕ ಅಸಭ್ಯ ವರ್ತನೆ: ವ್ಯಾಪಕ ಆಕ್ರೋಶ

 ಮಂಗಳೂರು: ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ನಡೆದ ಮೊಸರು ಕುಡಿಕೆ ಉತ್ಸವದ ಮೆರವಣಿಗೆ ವೇಳೆ ಗುಂಪಿನಲ್ಲಿದ್ದ


ಯುವಕನೋರ್ವ ಸಾರ್ವಜನಿಕವಾಗಿ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮಂಗಳೂರಿನ ತೊಕ್ಕಟ್ಟುವಿನಲ್ಲಿ ಮೊಸರು ಕುಡಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯುವಕರ ಗುಂಪಿನಲ್ಲಿ ಯುವತಿ ಒಂಟಿಯಾಗಿದ್ದಳು. ಮತ್ತೊಂದೆಡೆ ಯುವತಿ ಮಂಗಳಮುಖಿಯೇ? ಎಂಬ ಅನುಮಾನಕೂಡ ವ್ಯಕ್ತವಾಗಿದೆ.

ಧಾರ್ಮಿಕ ಕಾರ್ಯಕ್ರಮದಲ್ಲಿ ಕೇಸರಿ ಶಾಲು ತೊಟ್ಟ ಯುವಕ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ್ದು ಅಲ್ಲಿ ನೆರೆದಿದ್ದ ಜನರು ನೋಡುತ್ತಾ ನಿಂತಿದ್ದರು.

ಈ ರೀತಿ ವರ್ತನೆ ಎಷ್ಟು ಸರಿ ಎಂದು ಸ್ಥಳೀಯರು ಆಕ್ರ‍ೊಶ ವ್ಯಕ್ತಪಡಿಸಿದ್ದಾರೆ.

Post a Comment

Previous Post Next Post